ರಾಯಚೂರು, ಅಕ್ಟೋಬರ್ 23: ಮಳೆ ಕೊರತೆ ಹಿನ್ನೆಲೆ ಜಲವಿದ್ಯುತ್ ಉತ್ಪಾದನೆ ಕುಂಠಿತಗೊಂಡಿದ್ರಿಂದ ವಿದ್ಯುತ್ (Power) ಸಮಸ್ಯೆ ದಿನೇ ದಿನೇ ಹೆಚ್ಚಾಗ್ತಿದೆ. ಪಂಪ್ಸೆಟ್ಗೆ ಸರಿಯಾದ ವಿದ್ಯುತ್ ಪೂರೈಕೆಯಿಲ್ಲದೇ ರೈತರ ನಿದ್ದೆಗೆಡಿಸಿದೆ. ಆದ್ರೆ ಬರೀ ರೈತರಷ್ಟೇ ಅಲ್ಲ ವಿದ್ಯುತ್ (Electricity Issue) ಕಣ್ಣಾಮುಚ್ಚಾಲೆಯಿಂದ ಈಗ ಗೃಹಿಣಿಯರು, ಶಾಲಾ ಮಕ್ಕಳು ಪರದಾಡ್ತಿದ್ದಾರೆ. ಒಲೆಯ ಬೆಳಕಲ್ಲಿ ಅಕ್ಷರಾಭ್ಯಾಸ ಮಾಡ್ತಿರೊ ಬಾಲಕ, ಕತ್ತಲಲ್ಲೇ ಮನೆ ಮಂದಿಗೆ ಅಡುಗೆ ಸಿದ್ಧಪಡಿಸ್ತಿರೊ ಗೃಹಿಣಿ, ಹೊರಗೆ ಹೋದ್ರೆ ಹಾವು ಚೇಳುಗಳ ಕಾಟ, ಹೀಗಾಗಿ ಮನೆಯಲ್ಲೇ ಇರೋ ಮಕ್ಕಳು ವಿದ್ಯುತ್ ಸಮಸ್ಯೆಯಿಂದ ಮೊಬೈಲ್ಗೆ ದಾಸರಾಗ್ತಿದ್ದಾರೆ.
ಹೌದು, ರಾಜ್ಯದಲ್ಲಿ ಉಲ್ಬಣಗೊಂಡಿರೋ ಬರಗಾಲದಿಂದ ಒಂದರ ಮೇಲೊಂದರಂತೆ ಸಮಸ್ಯೆ ಹೆಚ್ಚಾಗ್ತಿವೆ. ಮಳೆಯಿಲ್ಲದೇ ಬೆಳೆ ಒಣಗಿ ಹೋಗ್ತಿದ್ರೆ, ಇದರ ಜೊತೆ ಮಳೆಯಿಲ್ಲದೇ ಜಲ ವಿದ್ಯುತ್ ಉತ್ಪಾದನೆ ಕೂಡ ಕುಂಠಿತಗೊಂಡಿದೆ. ಹೀಗಾಗಿ ಇಡಿ ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಾಗುತ್ತಲೇ ಇದೆ. ಬೆಳೆ ಕಾಪಾಡಲು ರೈತರು ಪಂಪ್ಸೆಟ್ ಮೊರೆ ಹೋಗಿದ್ರು ವಿದ್ಯುತ್ ಸರಿಯಾಗಿ ಸಿಗ್ತಿಲಿಲ್ಲ. ಪದೇ ಪದೇ ವಿದ್ಯುತ್ ಕಣ್ಣಾಮುಚ್ಚಾಲೆ ಆಟ ಶುರುವಾಗಿದೆ. ಹೀಗಾಗಿ ರೈತರು ಪಂಪ್ಸೆಟ್ ಮೂಲಕವೂ ಬೆಳೆ ಕಾಪಾಡಲಾಗ್ತಿಲ್ಲ. ಪಂಪ್ಸೆಟ್ ಮೂಲಕ ಬೆಳೆಗೆ ನೀರುಣಿಸಬೇಕಂದ್ರೆ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಬೇಕು. ಆದ್ರೆ ರಾಯಚೂರಿನಲ್ಲಿ ಬರೀ ನಾಲ್ಕೈದು ಗಂಟೆ ವಿದ್ಯುತ್ ಕೊಡಲಾಗ್ತಿದೆ..ಆ ಮಧ್ಯೆ ವಿದ್ಯುತ್ ಕಟ್ ಆಫ್ ಆಗತ್ತೆ. ಹೀಗಾಗಿ ಜಿಲ್ಲೆ ರೈತರು ಪಂಪ್ಸೆಟ್ ಮೂಲಕವೂ ಬೆಳೆಗೆ ನೀರು ಹಾಯಿಸಲಾಗ್ತಿಲ್ಲ. ಸರಣಿ ಪ್ರತಿಭಟನೆ ನಡಿಸಿ,ಹೆದ್ದಾರಿ ಬಂದ್ ಮಾಡಿದ್ರು ಪ್ರಯೋಜನವಾಗ್ತಿಲ್ಲ. ಹೀಗಾಗಿ ರೈತರು ಅಕ್ಷರಶಃ ಕಂಗಾಲಾಗಿದ್ದಾರೆ.
ಇದನ್ನೂ ಓದಿ: ರಾಯಚೂರಿನಲ್ಲಿ ಫ್ರೀ ಸೈಟ್ಗೆ ಮತ್ತೆ ಕೆಲವರ ಅಲೆದಾಟ! ಅತಿಕ್ರಮಣಕ್ಕೆ ಮುಂದಾದವರ ಮೇಲೆ ಎಫ್ಐಆರ್ ಅಸ್ತ್ರ
ನಿರ್ಲಕ್ಷ,ನೀರಾವರಿ ಅಧಿಕಾರಿಗಳ ಬೇಜವಾಬ್ದಾರಿತನದಿಂದ ರೈತರು ಹೈರಾಣಾಗಿದ್ದಾರೆ. ಅದರಲ್ಲೂ ವಿದ್ಯುತ್ನಿಂದಲೇ ಹೆಚ್ಚಿನ ಸಮಸ್ಯೆ ಉಲ್ಭಣವಾಗ್ತಿದೆ. ಬರೀ ರೈತರು ಮಾತ್ರ ವಿದ್ಯುತ್ ಸಮಸ್ಯೆಯಿಂದ ನಲುಗುತ್ತಿಲ್ಲ. ವಿದ್ಯುತ್ ಕಣ್ಣಾಮುಚ್ಚಾಲೆ ಆಟಕ್ಕೆ ಗೃಹಿಣಿಯರು, ಶಾಲಾ ಮಕ್ಕಳು ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಯಚೂರಿನ ಗ್ರಾಮೀಣ ಭಾಗಗಳಲ್ಲಿ ಹೊಲ, ಗದ್ದೆಗಳಿಂದ ಸಂಜೆ ಮನೆಗೆ ಬರೋರಿಗೆ ಉಪಚರಿಸಲು ಗೃಹಿಣಿಯರಿಗೆ ಸಾಧ್ಯವಾಗ್ತಿಲ್ಲ. ಇಳಿ ಸಂಜೆ ಹೊತ್ತಲ್ಲಿ ವಿದ್ಯುತ್ ಕಡಿತಗೊಳ್ತಿದೆ. ಕತ್ತಲಲ್ಲೇ ಗೃಹಿಣಿಯರು ಮನೆಮಂದಿಗೆ ಅಡುಗೆ ಮಾಡೋ ದುಸ್ಥಿತಿ ಎದುರಾಗಿದೆ. ಇತ್ತ ಶಾಳಾ ಮಕ್ಕಳ ಸ್ಥಿತಿಯಂದು ಹೇಳತೀರದು..ವಿದ್ಯುತ್ ಇಲ್ಲದ ಹಿನ್ನೆಲೆ ಹಾವು ಚೇಳುಗಳ ಕಾಟಕ್ಕೆ ಜನ ಹೊರಗಡೆ ಓಡಾಟ ಮಾಡ್ತಿಲ್ಲ. ಇತ್ತ ಮಕ್ಕಳು,ಕೆಲ ಬಾಲಕರು ಒಲೆ ಬೆಳಕಿನಲ್ಲಿ ಓದೊಸ್ಥಿತಿಯಿದೆ.
ಹೀಗೆ ವಿದ್ಯುತ್ ಸಮಸ್ಯೆಯಿಂದ ಚೈನ್ ಲಿಂಕ್ ಮಾದರಿಯಲ್ಲಿ ಸಂಕಷ್ಟಗಳು ಉಲ್ಭಣಗೊಳ್ತಿವೆ. ಕೂಡಲೇ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕಿದೆ. ಗ್ರಾಮೀಣ ಭಾಗದ ಜನರ ಕಷ್ಟಸುಖಗಳನ್ನ ಆಲಿಸಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ