ಲೋಕಸಭೆ ಚುನಾವಣೆ ಹೊಸ್ತಿಲಿನಲ್ಲಿ ಗಡಿ ಜಿಲ್ಲೆಯಲ್ಲಿ ಮಹತ್ವದ ಆ ಬೇಡಿಕೆ ಮತ್ತೆ ಮುನ್ನೆಲೆಗೆ ಬರೋ ಲಕ್ಷಣ ಕಾಣ್ತಿದೆ. ಆ ಜಿಲ್ಲೆಯ ಜನರ ಬಹುಬೇಡಿಕೆಗೆ ಸ್ಪಂದನೆ ಸಿಗದ ಹಿನ್ನೆಲೆ ಮತ್ತೆ ಹೋರಾಟ ತೀವ್ರಗೊಳ್ಳುವ ಸಾಧ್ಯತೆ ಇದೆ. ಹೌದು, ಜಿಲ್ಲೆಯ ಪ್ರತಿಷ್ಠಿತ ಏಮ್ಸ್ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಗಡಿ ಜಿಲ್ಲೆ ಹಾಗೂ ಹಿಂದುಳಿದ ಜಿಲ್ಲೆ ಅಂತ ಕರೆಸಿಕೊಳ್ಳೊ ರಾಯಚೂರು ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆ (AIIMS Hospital in Raichur) ಮಾಡಬೇಕು ಅನ್ನೋದು ಸ್ಥಳೀಯರು ಹೋರಾಟ ನಡೆಸ್ತಿದ್ದಾರೆ. ಈ ಬಗ್ಗೆ ಹೋರಾಟಕ್ಕೆ ನಾಂದಿ ಹಾಡಿದ ಬಳಿಕ ಏಮ್ಸ್ ಹೋರಾಟ ಸಮೀತಿ ಹೆಸರಿನಲ್ಲಿ ಜಿಲ್ಲೆಯ ಹೋರಾಟಗಾರರು, ಸಾರ್ವಜನಿಕರು ಸೇರಿ ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ (All India Institute Of Medical Sciences -AIIMS) ಕುರಿತಾದ ಹೋರಾಟದ ದಿಕ್ಕನ್ನೇ ಬದಲಿಸಿದ್ದರು. ಸುಮಾರು ವರ್ಷಕ್ಕೂ ಅಧಿಕ ಕಾಲದಿಂದ ರಾಯಚೂರು ನಗರದಲ್ಲಿ ಏಮ್ಸ್ ಹೋರಾಟ ನಡೆಯುತ್ತಲೇ ಇದೆ.
ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಅಂದು ಸಿಎಂ ಆಗಿದ್ದ ಬಸವರಾಜ್ ಬೊಮ್ಮಾಯಿ, ಉಸ್ತುವಾರಿ ಸಚಿವ್ರು, ಅಂದಿನ ಕಂದಾಯ ಸಚಿವ ಆರ್ ಅಶೋಕ್ ಅವರುಗಳಿಗೂ ಮನವಿ ಸಲ್ಲಿಸಲಾಗಿತ್ತು. ಬಳಿಕ ಮತ್ರಾಲಯದ ಶ್ರೀಗಳು ಕೂಡ ಏಮ್ಸ್ ಹೋರಾಟಕ್ಕೆ ಕೈ ಜೋಡಿಸಿ ರಾಯಚೂರಿನಲ್ಲೇ ಏಮ್ಸ್ ಸ್ಥಾಪನೆ ಆಗ್ಬೇಕು ಅಂತ ಆಗ್ರಹಿಸಿದ್ದರು. ಇದರ ಜೊತೆಗೆ ನಟ ಶಿವರಾಜ್ ಕುಮಾರ್ ಕೂಡ ಈ ಬಗ್ಗೆ ಸಿಎಂ ಜೊತೆ ಚರ್ಚಿಸ್ತಿನಿ ಅಂತ ಹೇಳಿದ್ರು. ಆದ್ರೆ ಬಿಜೆಪಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಈ ಬಗ್ಗೆ ತುಟಿ ಬಿಚ್ಚಿರ್ಲಿಲ್ಲ. ಇದು ಹೋರಾಟಗಾರರನ್ನ ಕೆರಳುವಂತೆ ಮಾಡಿತ್ತು.
Also Read: ಶೀಘ್ರವೇ ಗ್ರಾಮ ಲೆಕ್ಕಿಗರ ನೇಮಕಾತಿ ನಡೆಯಲಿದೆ ಎಂದ ಕಂದಾಯ ಸಚಿವ, ಅರ್ಹತೆ ಮತ್ತು ಹುದ್ದೆಗಳ ವಿವರ ಇಲ್ಲಿದೆ
ಇಷ್ಟೆಲ್ಲಾ ದೊಡ್ಡ ಹೋರಾಟದ ಮಧ್ಯೆ ಕಾಂಗ್ರೆಸ್ ಪಕ್ಷವೂ ಸಹ ರಾಜ್ಯ ಅಸೆಂಬ್ಲಿ ಚುನಾವಣೆಯ ವೇಳೆ ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಮಾಡ್ತೀವಿ ಅಂತ ಜಿಲ್ಲೆಯ ಜನರಿಗೆ ಮಾತು ಕೊಟ್ಟಿತ್ತು. ಅದರಂತೆ ಇತ್ತೀಚೆಗೆ ಏಮ್ಸ್ ಹೋರಾಟ ಸಮಿತಿಯು ಸಚಿವ ಎನ್ಎಸ್ ಬೋಸರಾಜ್ ಮತ್ತು ಸಿಎಂ ಸಿದ್ದರಾಮಯ್ಯ ಜೊತೆಗೆ ಮಾತುಕತೆ ನಡೆಸಿತ್ತು. ಕೊನೆಗೆ ಸಿಎಂ ಖುದ್ದು ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಪತ್ರ ಬರೆದಿದ್ದರು. ಕೇಂದ್ರ ಆರೋಗ್ಯ ಸಚಿವರನ್ನ ಭೇಟಿ ಕೂಡ ಮಾಡಲಾಗಿದೆ.
ಈ ಮಧ್ಯೆ ಇತ್ತೀಚಿನ ಕೇಂದ್ರ ಹಾಗೂ ರಾಜ್ಯ ಬಜೆಟ್ಗಳಲ್ಲಿ ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಬಗ್ಗೆ ಎರಡೂ ಸರ್ಕಾರಗಳು ಪ್ರಸ್ತಾಪಿಸಿಲ್ಲ. ಇದರಿಂದ ಏಮ್ಸ್ ಹೋರಾಟ ಸಮಿತಿ ಬೇಸರ ವ್ಯಕ್ತಪಡಿಸಿದೆ. ಸದ್ಯ ಲೋಕಸಭಾ ಚುನಾವಣೆ ವೇಳೆ ಇದಾಗಿರೋದ್ರಿಂದ ಈ ಬಗ್ಗೆ ಮತ್ತೆ ಏಮ್ಸ್ ಹೋರಾಟ ತೀವ್ರಗೊಳಿಸೋದಕ್ಕೆ ಹೋರಾಟಗಾರರು ಮುಂದಾಗಿದ್ದಾರೆ. ಕಾಂಗ್ರೆಸ್, ಬಿಜೆಪಿಯ ನಿಲುವು ಏನು ಅನ್ನೋದರ ಬಗ್ಗೆ ಜನರಿಗೆ ತಿಳಿಯಪಡಿಸಲು ಹೋರಾಟಗಾರರು ಸಜ್ಜಾಗುತ್ತಿದ್ದಾರೆ.
ಇತ್ತ ಏಮ್ಸ್ ಕುರಿತು ಖುದ್ದು ರಾಯಚೂರಿನ ಕಾಂಗ್ರೆಸ್ ಮುಖಂಡ ಪಾರಸಮಲ್ ಸುಖಾನಿ ಮಾತನಾಡಿ ಕಿಡಿಕಾರಿದ್ರು. ಏಮ್ಸ್ ಸ್ಥಾಪನೆ ಸಂಬಂಧ ರಾಯಚೂರಿಗೆ ಅನ್ಯಾಯವಾಗ್ತಿರೋ ಬಗ್ಗೆ ಪ್ರಸ್ತಾಪಿಸಿದ್ರು. ಈ ಮಧ್ಯೆ ಹೋರಾಟಗಾರರು ಮತ್ತೆ ಏಮ್ಸ್ ವಿಚಾರ ಮುನ್ನೆಲೆಗೆ ತರಲು ಮುಂದಾಗಿದ್ದು ಇದು ಯಾವ ತಿರುವು ಪಡೆದುಕೊಳ್ಳತ್ತೆ ಕಾದು ನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.