ರಾಯಚೂರು: ಶ್ರೀ ಅಂಬಾದೇವಿ ದೇವಸ್ಥಾನದ ಹುಂಡಿ ಹಣ ಏಣಿಕೆ; ಮೂರೇ ತಿಂಗಳಲ್ಲಿ 38 ಲಕ್ಷ ರೂಪಾಯಿ ಹಣ ಜಮೆ

| Updated By: preethi shettigar

Updated on: Feb 24, 2022 | 10:34 AM

ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಸೋಮಲಾಪುರ ಗ್ರಾಮದಲ್ಲಿರುವ ಶ್ರೀ ಅಂಬಾದೇವಿ ದೇವಸ್ಥಾನದ ಆಡಳಿತ ವರ್ಗ ಹಾಗೂ ಅಧಿಕಾರಿಗಳ ನೇತೃತ್ವದಲ್ಲಿ ಹುಂಡಿ ಹಣ ಏಣಿಕೆ ಮಾಡಲಾಗಿದೆ.

ರಾಯಚೂರು: ಶ್ರೀ ಅಂಬಾದೇವಿ ದೇವಸ್ಥಾನದ ಹುಂಡಿ ಹಣ ಏಣಿಕೆ; ಮೂರೇ ತಿಂಗಳಲ್ಲಿ 38 ಲಕ್ಷ ರೂಪಾಯಿ ಹಣ ಜಮೆ
ಹುಂಡಿ ಹಣ ಏಣಿಕೆ
Follow us on

ರಾಯಚೂರು:  ಶ್ರೀ ಅಂಬಾದೇವಿ ದೇವಸ್ಥಾನದ ಹುಂಡಿ ಹಣ ಏಣಿಕೆ( Hundi counting) ಇಂದು (ಫೆಬ್ರವರಿ 24) ನಡೆದಿದೆ. ಮೂರೇ ತಿಂಗಳಲ್ಲಿ ಶ್ರೀ ಅಂಬಾದೇವಿ ದೇವಸ್ಥಾನದ(Temple) ಹುಂಡಿಯಲ್ಲಿ 38 ಲಕ್ಷ ರೂಪಾಯಿ ಹಣ ಜಮೆಯಾಗಿದೆ. ರಾಯಚೂರು (Raichur) ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಸೋಮಲಾಪುರ ಗ್ರಾಮದಲ್ಲಿರುವ ಶ್ರೀ ಅಂಬಾದೇವಿ ದೇವಸ್ಥಾನದ ಆಡಳಿತ ವರ್ಗ ಹಾಗೂ ಅಧಿಕಾರಿಗಳ ನೇತೃತ್ವದಲ್ಲಿ ಹುಂಡಿ ಹಣ ಏಣಿಕೆ ಮಾಡಲಾಗಿದೆ. 2021 ನವೆಂಬರ್​ನಿಂದ 2022 ಫೆಬ್ರವರಿ 23 ರ ವರೆಗಿನ ಹುಂಡಿ‌ ಹಣ ಏಣಿಕೆ ಮಾಡಲಾಗಿದೆ. ಮೂರು ತಿಂಗಳಲ್ಲಿ ಒಟ್ಟು 38,12,236 ರೂಪಾಯಿ ಹಣ ಹುಂಡಿಗಳಲ್ಲಿ ಜಮೆಯಾಗಿದೆ.

ಬೀದರ್: ಐತಿಹಾಸಿಕ ಝರಣಿ ಗುಹಾ ದೇವಾಲಯದ ಮಹಿಮೆ ಏನು ಗೊತ್ತಾ?

ಮಬ್ಬು ಕತ್ತಲಿನ ಗುಹೆಯಲ್ಲಿ ಸದಾ ಹರಿಯುವ ನೀರಿನಲ್ಲಿ ಸುಮಾರು 300 ಅಡಿಗಳಷ್ಟು ದೂರ ಎದೆಮಟ್ಟದ ಉಗುರು ಬೆಚ್ಚಗಿನ ನೀರಲ್ಲಿ ನಡೆದು ಹೋಗಿ, ದೇವರ ದರ್ಶನ ಪಡೆಯುವುದು ಒಂದು ವಿಶಿಷ್ಟ ಅನುಭವ. ಇಂತಹ ಅನುಭವಕ್ಕೆ ಸಾಕ್ಷಿಯಾಗಿರುವುದು ಬೀದರ್ ಹೊರವಲಯದಲ್ಲಿರುವ ನರಸಿಂಹ ಝರಣಿ ಗುಹಾ ದೇವಾಲಯ. ಇದು ಕರ್ನಾಟಕದ ಅಪರೂಪದ ಯಾತ್ರಾಸ್ಥಳ. ಜತೆಗೆ ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ಭಕ್ತರ ಆರಾಧ್ಯ ಕ್ಷೇತ್ರವಾಗಿದೆ.

ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರಗಳಿಂದ ಅಪಾರ ಪ್ರಮಾಣದ ಭಕ್ತರು, ನವ ವಧುವರರು ನರಸಿಂಹ ಝರಣಿಗೆ ಬಂದು ಪೂಜಿಸುವ ಸಂಪ್ರದಾಯವಿದೆ. ಮಕ್ಕಳಾಗದ ದಂಪತಿ, ಸಂತಾನ ಪ್ರಾಪ್ತಿಗಾಗಿ ನರಸಿಂಹ ದೇವರಲ್ಲಿ ಹರಕೆ ಕಟ್ಟಿಕೊಳ್ಳುತ್ತಾರೆ. ಹೆರಿಗೆಗೆ ತವರಿಗೆ ಹೋಗುವ ಮುನ್ನ ಇಲ್ಲಿಗೆ ಬಂದು ವಿಶೇಷ ಪೂಜೆ ಸಲ್ಲಿಸಿ ಹೋಗುವ ರೂಢಿಯಿದೆ. ಮಕ್ಕಳಾದ ಮೇಲೆ ಬಂದು ಮಗುವಿನ ಜಾವಳ ತೆಗೆಸುವ ಅಥವಾ ತೊಟ್ಟಿಲು ಬಿಡುವ ಹರಕೆ ಇಲ್ಲಿ ಸಲ್ಲಿಸುತ್ತಾರೆ.

ನರಸಿಂಹ ಝರಣಿ ಗುಹಾ ದೇವಾಲಯಕ್ಕೆ ಸುಮಾರು 300 ಅಡಿಗಳಷ್ಟು ದೂರ ನಡೆದು ಹೋಗಿ ದೇವರ ದರ್ಶನ ಮಾಡಬೇಕು. ಗುಹೆಯ ಮಬ್ಬುಗತ್ತಲಿನಲ್ಲಿ ನೀರಿನಲ್ಲಿ ನಡೆದು ಹೋಗಲು ಮಾನಸಿಕ ಸಿದ್ಧತೆ ಇದ್ದರೆ ದರ್ಶನ ಸುಲಭ. ಗುಹೆಯೊಳಗಿನ ನೀರು ಯಾವುದೇ ಸಂದರ್ಭದಲ್ಲೂ ಎದೆಮಟ್ಟ ಮೀರುವುದಿಲ್ಲ. ಈ ನೀರಲ್ಲಿ ಎಷ್ಟು ಸಲ ಓಡಾಡಿದರೂ ಶೀತ ಆಗುವುದಿಲ್ಲ. ಈ ನೀರಿನಲ್ಲಿ ಗಂಧಕ (ಸಲ್ಫರ್)ದ ಅಂಶವಿದೆ. ನೀರು ಚಳಿಗಾಲದಲ್ಲೂ ಬೆಚ್ಚಗಿನ ಅನುಭವ ನೀಡುತ್ತದೆ.

ಈ ನೀರಿನಲ್ಲಿ ನಡೆದರೆ ಚರ್ಮದ ರೋಗಗಳು ನಿವಾರಣೆ
ಈ ದೇವಾಲಯಕ್ಕೆ ಸಾಗುವ ನೀರಿನಲ್ಲಿ ನಡೆದರೆ ಚರ್ಮದ ರೋಗಗಳು ನಿವಾರಣೆ ಆಗುತ್ತವೆ ಎಂಬ ನಂಬಿಕೆ ಇದೆ. ಗುಹೆಯೊಳಗೆ ನಡೆದು ಸ್ವಾಮಿಯ ದರ್ಶನಕ್ಕೆ ಹೋಗುವಾಗ ಧರಿಸಲು ಅಗತ್ಯ ಬಟ್ಟೆ, ಟವೆಲ್, ಲುಂಗಿ, ಮಹಿಳೆಯರಿಗೆ ಪ್ರತ್ಯೇಕ ಸೀರೆ ತರಬೇಕು. ಕೌಂಟರ್‌ನಲ್ಲಿ ಟಿಕೆಟ್ ಪಡೆದು ಸಾಲಿನಲ್ಲಿ ಗುಹೆ ಮುಂಭಾಗದಿಂದ ನರಸಿಂಹ ದೇವರ ಕಡೆಗೆ ನಡೆದು ಸಾಗಬೇಕು. ಅದಕ್ಕೂ ಮೊದಲು ಗುಹೆಯಿಂದ ಹರಿದು ಗೋಮುಖದ ಮೂಲಕ ಬರುವ ನೀರಿನಲ್ಲಿ ಮೈ ತೊಳೆದುಕೊಳ್ಳಬೇಕು.

ಗುಹೆಯೊಳಕ್ಕೆ ಹೋಗದೇ ಹಿಂದಿರುಗುವವರಿಗೆ ಇಲ್ಲಿಯೇ ಪೂಜೆ, ಮಂಗಳಾರತಿ ಮಾಡಿ ಕೊಡುವ ವ್ಯವಸ್ಥೆಯೂ ಇದೆ. ವಿಶೇಷ ಪೂಜೆ ಮಾಡಿಸುವವರು ಅರ್ಚಕರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಬೇಕು. ಸಾಮಾನ್ಯ ಪೂಜೆಗಾಗಿ ಅರ್ಚಕರೊಬ್ಬರು ಗುಹೆಯೊಳಗೆ ಇರುತ್ತಾರೆ. ನರಸಿಂಹ ಜಯಂತಿಯಂದು ಇಲ್ಲಿ ವಿಶೇಷ ಪೂಜೆ, ಹೋಮ-ಹವನಗಳು ನಡೆಯುತ್ತವೆ. ಅದನ್ನು ಬಿಟ್ಟರೆ ಇಲ್ಲಿ ವರ್ಷದಲ್ಲಿ ವಿಶೇಷ ಆಚರಣೆಗಳಿಲ್ಲ.

 

ಇದನ್ನೂ ಓದಿ:

Lord Ganesha: ಈ ಗಣಪತಿ ದೇವಾಲಯಗಳಿಗೆ ಭೇಟಿ ನೀಡಿ ಗಣೇಶನ ದರ್ಶನ ಮಾಡಿದ್ರೆ ನಿಮ್ಮ ದುಃಖ ನಿವಾರಣೆಯಾಗಿ ಇಷ್ಟಾರ್ಥಗಳು ಈಡೇರುತ್ತವೆ

ಎದೆಮಟ್ಟದ ಉಗುರು ಬೆಚ್ಚಗಿನ ನೀರಲ್ಲಿಯೇ ದೇವರ ದರ್ಶನ; ಐತಿಹಾಸಿಕ ಝರಣಿ ಗುಹಾ ದೇವಾಲಯದ ಮಹಿಮೆ ಏನು ಗೊತ್ತಾ?

 

Published On - 10:32 am, Thu, 24 February 22