ದೇವಸ್ಥಾನದಲ್ಲಿ ಕಾಣಿಕೆ ಹುಂಡಿ ದೋಚಲು ಹೋದ ಕಳ್ಳರಿಂದ 7 ಬೀದಿ ನಾಯಿಗಳ ಹತ್ಯೆ

ದೇವಸ್ಥಾನದಲ್ಲಿ ಕಾಣಿಕೆ ಹುಂಡಿ ದೋಚಲು ಹೋದ ಕಳ್ಳರಿಂದ 7 ಬೀದಿ ನಾಯಿಗಳ ಹತ್ಯೆ
ಬೀದಿ ನಾಯಿ

ಕಳ್ಳರು ದೇವಸ್ಥಾನದ ಬಾಗಿಲು ಮುರಿದು ದರೋಡೆ ಮಾಡಲು ಒಳಗೆ ಹೋಗುವಾಗ ಹೊರಗೆ ಮಲಗಿದ್ದ ಬೀದಿ ನಾಯಿಗಳಿಗೆ ವಿಷ ಹಾಕಿ ಕೊಂದಿದ್ದಾರೆ. ಇದರಿಂದ ಆ 7 ನಾಯಿಗಳು ದೇವಸ್ಥಾನದ ಸಮೀಪವೇ ಸಾವನ್ನಪ್ಪಿವೆ.

TV9kannada Web Team

| Edited By: Sushma Chakre

Jan 29, 2022 | 3:35 PM

ನವದೆಹಲಿ: ಬಿಹಾರದ ಕೈಮೂರ್‌ನ ದೇವಸ್ಥಾನದಲ್ಲಿ ನಡೆದ ದರೋಡೆಯ ವೇಳೆ ಏಳು ನಾಯಿಗಳನ್ನು ಕಳ್ಳರು ಕೊಂದಿರುವ ಭೀಕರ ಘಟನೆ ನಡೆದಿದೆ. ಆರೋಪಿಗಳು ದೇವಸ್ಥಾನದ ಬಾಗಿಲು ಮುರಿದು ದರೋಡೆ ಮಾಡಲು ಒಳಗೆ ಹೋಗುವಾಗ ಹೊರಗೆ ಮಲಗಿದ್ದ ಬೀದಿ ನಾಯಿಗಳಿಗೆ ವಿಷ (Poison) ಹಾಕಿ ಕೊಂದಿದ್ದಾರೆ. ಇದರಿಂದ ಆ 7 ನಾಯಿಗಳು ದೇವಸ್ಥಾನದ ಸಮೀಪವೇ ಸಾವನ್ನಪ್ಪಿವೆ. ಈ ವೇಳೆ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿದ್ದ 15,000 ರೂ.ಗಳನ್ನು ಕದ್ದು ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಕೈಮೂರ್‌ನ ಮೊಹಾನಿಯಾ ಪ್ರದೇಶದ ರೈಲ್ವೆ ಮಾಲ್ ಗೋಡೌನ್ ರಸ್ತೆಯ ಜಿಆರ್‌ಪಿ ಪೊಲೀಸ್ ಠಾಣೆ ಕ್ಯಾಂಪಸ್‌ನಲ್ಲಿರುವ ದೇವಸ್ಥಾನದ ಅರ್ಚಕರೊಬ್ಬರು ಶನಿವಾರ ಬೆಳಿಗ್ಗೆ ಅಲ್ಲಿಗೆ ಪೂಜೆ ಸಲ್ಲಿಸಲು ಹೋದಾಗ ಈ ಘಟನೆ ಬೆಳಕಿಗೆ ಬಂದಿದೆ. ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ದೈನಿಕ್ ಜಾಗರಣ್ ವರದಿ ಮಾಡಿದೆ.

”ಕಳ್ಳತನ ಪ್ರಕರಣದಲ್ಲಿ ತನಿಖೆ ನಡೆಯುತ್ತಿದೆ. ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು ಎಂದು ಜಿಆರ್‌ಪಿ ಪೊಲೀಸ್ ಠಾಣೆ ಪ್ರಭಾರಿ ಜೈಪ್ರಕಾಶ್ ಮಾಹಿತಿ ನೀಡಿದ್ದಾರೆ.

ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ದೇವಸ್ಥಾನದ ಕಾರ್ಯದರ್ಶಿ ಧೀರೇಂದ್ರ ಪ್ರತಾಪ್ ಸಿಂಗ್ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ”ದೇವಸ್ಥಾನದ ಬಾಗಿಲು ಮುರಿದು ಒಳಗೆ ನುಗ್ಗಿದ ಕಳ್ಳರು ಕಾಣಿಕೆ ಹುಂಡಿಯಲ್ಲಿದ್ದ 15ರಿಂದ 20 ಸಾವಿರ ರೂ. ಕದ್ದು, ದೇವಸ್ಥಾನದ ಬಳಿ ಮಲಗಿದ್ದ ಏಳು ಅಮಾಯಕ ಪ್ರಾಣಿಗಳಿಗೂ ವಿಷ ಹಾಕಿ ಸಾಯಿಸಿದ್ದಾರೆ. ಈ ಮುಗ್ಧ ಜೀವಿಗಳು ದೇವರಿಗೆ ಆರತಿ ಮಾಡಿದ ನಂತರ ನೀಡಲಾಗುವ ಪ್ರಸಾದ ತಿನ್ನಲು ದೇವಸ್ಥಾನದ ಹೊರಗೇ ಇರುತ್ತಿದ್ದವು. ಆ ಎಲ್ಲ ನಾಯಿಗಳಿಗೂ ವಿಷ ಹಾಕಿ ಕೊಲ್ಲಲಾಗಿದೆ. ಈ ವಿಷಯವನ್ನು ಆದಷ್ಟು ಬೇಗ ಬಹಿರಂಗಪಡಿಸಬೇಕೆಂದು ನಾನು ಆಡಳಿತವನ್ನು ಒತ್ತಾಯಿಸುತ್ತೇನೆ ಎಂದು ಧೀರೇಂದ್ರ ಪ್ರತಾಪ್ ಸಿಂಗ್ ವರದಿಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Crime News: ಬ್ಲಾಕ್ ಮ್ಯಾಜಿಕ್ ಶಂಕೆ; ವೃದ್ಧ ದಂಪತಿಯನ್ನು ಕೊಂದು, ಗುಡಿಸಲಲ್ಲಿ ಸುಟ್ಟು ಹಾಕಿದ ಯುವಕ

Crime News: ಜೈಲಿನ ಅಧಿಕಾರಿಗಳ ಕೈಗೆ ಸಿಕ್ಕಿ ಬೀಳುವ ಭಯದಲ್ಲಿ ಮೊಬೈಲನ್ನೇ ನುಂಗಿದ ಕೈದಿ!

Follow us on

Related Stories

Most Read Stories

Click on your DTH Provider to Add TV9 Kannada