ಅಂತರ್ಜಾತಿ ವಿವಾಹ ಪೀಡಿಗೆ ದೂರಾದ ಪ್ರೇಮಿಗಳು, ಫೇಸ್‌ಬುಕ್‌ ಲೈವ್‌ ಮಾಡಿ ನಂತರ ನೇಣಿಗೆ ಶರಣಾದ ಯುವಕ

| Updated By: ಆಯೇಷಾ ಬಾನು

Updated on: Sep 08, 2021 | 8:19 AM

ಇಬ್ಬರನ್ನ ಪೊಲೀಸರು ಬೇರ್ಪಡಿಸಿ ಯುವತಿಯನ್ನ ಪೋಷಕರ ಜೊತೆ ಕಳಿಸಿದ್ದರು. ಇದರಿಂದ ಮನನೊಂದ ಭೀಮೇಶ್ ನಾಯಕ್ ಡೆತ್‌ನೋಟ್‌ ಬರೆದು ಫೇಸ್‌ಬುಕ್‌ ಲೈವ್‌ನಲ್ಲೇ ನೇಣಿಗೆ ಶರಣಾಗಿದ್ದಾರೆ.

ಅಂತರ್ಜಾತಿ ವಿವಾಹ ಪೀಡಿಗೆ ದೂರಾದ ಪ್ರೇಮಿಗಳು, ಫೇಸ್‌ಬುಕ್‌ ಲೈವ್‌ ಮಾಡಿ ನಂತರ ನೇಣಿಗೆ ಶರಣಾದ ಯುವಕ
ಭೀಮೇಶ್ ನಾಯಕ್
Follow us on

ರಾಯಚೂರು: ಪ್ರೀತಿಸಿ ವಿವಾಹವಾಗಿದ್ದ ಯುವತಿ ತನನ್ನು ದೂರ ಮಾಡಿದ ಹಿನ್ನೆಲೆ ಫೇಸ್‌ಬುಕ್‌ ಲೈವ್‌ನಲ್ಲಿ ಮಾತನಾಡಿ ಬಳಿಕ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಯಚೂರು ತಾಲೂಕಿನ ಗಾಣಧಾಳ ಗ್ರಾಮದಲ್ಲಿ ನಡೆದಿದೆ. ನೇಣಿ ಬಿಗಿದುಕೊಂಡು ಭೀಮೇಶ್ ನಾಯಕ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಯುವತಿ ಸಂಧ್ಯಾ ಹಾಗೂ ಯುವಕ ಭೀಮೇಶ್ ನಾಯಕ್ ಇಬ್ಬರೂ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಅಂತರ್ಜಾತಿ ವಿವಾಹ ಹಿನ್ನೆಲೆಯಲ್ಲಿ ಈ ಮದುವೆಗೆ ಪೋಷಕರಿಂದ ವಿರೋಧವಿತ್ತು. ವಿಚಾರಣೆಗೆಂದು ಇಡಪನೂರ ಠಾಣೆ ಪೊಲೀಸರು ನವ ದಂಪತಿಯನ್ನು ಕರೆಸಿದ್ದರು. ಆಗ ಇಬ್ಬರನ್ನ ಪೊಲೀಸರು ಬೇರ್ಪಡಿಸಿ ಯುವತಿಯನ್ನ ಪೋಷಕರ ಜೊತೆ ಕಳಿಸಿದ್ದರು. ಇದರಿಂದ ಮನನೊಂದ ಭೀಮೇಶ್ ನಾಯಕ್ ಡೆತ್‌ನೋಟ್‌ ಬರೆದು ಫೇಸ್‌ಬುಕ್‌ ಲೈವ್‌ನಲ್ಲಿ ಮಾತನಾಡಿ ತನ್ನ ಸಾವಿಗೆ ತಾನೇ ಕಾರಣ ಎಂದು ತಿಳಿಸಿ ಬಳಿಕ ನೇಣಿಗೆ ಶರಣಾಗಿದ್ದಾರೆ.

ಇನ್ನು ಮೃತ ಭೀಮೇಶ್ ನಾಯಕ್ ಡೆತ್‌ನೋಟ್ನಲ್ಲಿ ಇಡಪನೂರು ಠಾಣೆ ಪಿಎಸ್ಐ ಗಂಗಪ್ಪ, ಯುವತಿ ತಂದೆ ಚಕ್ರಪಾಣಿ ಸೇರಿ ಹಲವರು ತನ್ನ ಸಾವಿಗೆ ಕಾರಣವೆಂದು ಉಲ್ಲೇಖಿಸಿದ್ದಾರೆ. ಅಲ್ಲದೆ ಮದುವೆಯಾದ ಯುವತಿಯನ್ನು ಬಿಡದಿದ್ರೆ ಪೋಷಕರ ವಿರುದ್ದ ಕೇಸ್ ದಾಖಲಿಸುವುದಾಗಿ ಪಿಎಸ್ಐ ಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿದೆ. ಜೊತೆಗೆ ಭೀಮೇಶನಾಯಕ ಬಳಿ ಪಿಎಸ್ಐ ಗಂಗಪ್ಪ 3 ಲಕ್ಷ ರೂಪಾಯಿ ಲಂಚ ಪಡೆದಿರುವ ಬಗ್ಗೆಯೂ ಡೆತ್‌ನೋಟ್ನಲ್ಲಿ ಉಲ್ಲೇಖಿಸಲಾಗಿದೆ. ಮಗನ ಆತ್ಮಹತ್ಯೆ ಸುದ್ದಿ ಕೇಳಿ ಭಿಮೇಶನಾಯಕನ ತಂದೆ ಸಹ ನಾಪತ್ತೆಯಾಗಿದ್ದಾರೆ. ಅಂತರ್ಜಾತಿ ವಿವಾಹ ಮಾಡಿಕೊಂಡಿದಕ್ಕೆ ಪೊಲೀಸರಿಂದಲೇ ಅನ್ಯಾಯ ಮಾಡಿದ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ: Suicide: ಒಂದೇ ಮನೆಯಲ್ಲಿ ಮೂವರು ನೇಣುಬಿಗಿದುಕೊಂಡು ಆತ್ಮಹತ್ಯೆ