Janardhana Reddy: ಮಗಳು ಬ್ರಹ್ಮಣಿ ರಾಜಕೀಯ ಎಂಟ್ರಿ ಕುರಿತು ಪರೋಕ್ಷವಾಗಿ ಹೇಳಿಕೆ ನೀಡಿದ ಜನಾರ್ದನ ರೆಡ್ಡಿ

| Updated By: ಗಂಗಾಧರ​ ಬ. ಸಾಬೋಜಿ

Updated on: Jan 06, 2023 | 4:11 PM

ಸುಮಾರು ವರ್ಷಗಳಿಂದ ರಾಜಕೀಯವಾಗಿ ದೂರ ಉಳಿದಿದ್ದ ಜನಾರ್ದನ ರೆಡ್ಡಿ ಈಗಾಗಲೇ ಹೊಸ ಪಕ್ಷ ಸ್ಥಾಪನೆ ಮಾಡಿದ್ದಾರೆ. ಇನ್ನು ತಮ್ಮ ಮಗಳು ಬ್ರಹ್ಮಣಿ ರಾಜಕೀಯಕ್ಕೆ ಎಂಟ್ರಿ ನೀಡುತ್ತಾರೆ ಎಂಬುದನ್ನು ಪರೋಕ್ಷವಾಗಿ ಮಾಹಿತಿ ನೀಡಿದ್ದಾರೆ.

Janardhana Reddy: ಮಗಳು ಬ್ರಹ್ಮಣಿ ರಾಜಕೀಯ ಎಂಟ್ರಿ ಕುರಿತು ಪರೋಕ್ಷವಾಗಿ ಹೇಳಿಕೆ ನೀಡಿದ ಜನಾರ್ದನ ರೆಡ್ಡಿ
ಜನಾರ್ದನ ರೆಡ್ಡಿ, ಮಗಳು ಬ್ರಹ್ಮಣಿ
Image Credit source: deccanchronicle.com
Follow us on

ರಾಯಚೂರು: ಬಿಜೆಪಿಯ ಬಗ್ಗೆ ಆಗಾಗ ಅಸಮಾಧಾನ ವ್ಯಕ್ತಪಡಿಸುತ್ತಿದ್ದ ಮಾಜಿ ಸಚಿವ ಹಾಗೂ ಗಣಿಉದ್ಯಮಿ ಜಿ.ಜನಾರ್ದನ ರೆಡ್ಡಿ ಇತ್ತೀಚೆಗೆ ಹೊಸ ರಾಜಕೀಯ ಪಕ್ಷ ಘೋಷಿಸಿದ್ದರು. ನೂತನ ರಾಜಕೀಯ ಪಕ್ಷಕ್ಕೆ ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ (Kalyan Rajya pragathi paksha) ಎಂಬ ಹೆಸರು ಸಹ ಇರಿಸಲಾಗಿದೆ. ಸುಮಾರು ವರ್ಷಗಳಿಂದ ರಾಜಕೀಯವಾಗಿ ದೂರ ಉಳಿದಿದ್ದ ಜನಾರ್ದನ ರೆಡ್ಡಿ ತಮ್ಮ ಹೊಸ ಪಕ್ಷದ ಮೂಲಕ ಎರಡನೇ ಇನ್ನಿಂಗ್ಸ್​ ಆರಂಭಿಸಲು ಸಜ್ಜಾಗಿದ್ದಾರೆ. ಜನಾರ್ದನ ರೆಡ್ಡಿಗೆ ಬಳ್ಳಾರಿ (Bellary) ಜಿಲ್ಲೆಯ ಪ್ರವೇಶ ನಿರ್ಬಂಧವಿದ್ದು, ಹಾಗಾಗಿ ಅವರು ಕೊಪ್ಪಳ ಕ್ಷೇತ್ರದಲ್ಲಿ ರಾಜಿಕೀಯವಾಗಿ ತೊಡಗಿಸಿಕೊಂಡಿದ್ದಾರೆ. ಇತ್ತ ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಪತ್ನಿ ಅರುಣಾ ಲಕ್ಷ್ಮೀ (Aruna Lakshmi) ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ ಕುರಿತಾಗಿ ಪ್ರಚಾರ ನಡೆಸಿದ್ದಾರೆ.

ರಾಜಕೀಯ ಅಖಾಡಕ್ಕೆ ಎಂಟ್ರಿ‌ ಕೊಡ್ತಾರಾ ಜನಾರ್ದನ ರೆಡ್ಡಿ ಮಗಳು? 

ಸದ್ಯ ಇವೆಲ್ಲದರ ಮಧ್ಯೆ ಜನಾರ್ದನ ರೆಡ್ಡಿ ಮಗಳು ಬ್ರಹ್ಮಣಿ ರಾಜಕೀಯ ಅಖಾಡಕ್ಕೆ ಎಂಟ್ರಿ ಕೊಡುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಕುರಿತಾಗಿ ಜನಾರ್ದನ ರೆಡ್ಡಿ ಪರೋಕ್ಷವಾಗಿ ಹೇಳಿಕೆ ನೀಡಿದ್ದಾರೆ. ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ಮಾತನಾಡಿ, ನನ್ನ ಮಗಳ ಬ್ರಹ್ಮಿಣಿ ಬಳ್ಳಾರಿಗೆ ಬರುತ್ತಿದ್ದಾಳೆ. ಒಳ್ಳೆ ರೀತಿಯಲ್ಲಿ ಸಿದ್ಧಳಾಗಿ ನನ್ನ ಜೊತೆ ಬರುತ್ತಿದ್ದಾಳೆ ಎಂದು ರೆಡ್ಡಿ ಹೇಳಿದ್ದಾರೆ. ಜೊತೆಗೆ ಧನುರ್ಮಾಸದ ಬಳಿಕ ಜನವರಿ 16ರ ನಂತರ ಅಭ್ಯರ್ಥಿ ಘೋಷಣೆ ಮಾಡುವುದಾಗಿ ತಿಳಿಸಿದರು.

ಇದನ್ನೂ ಓದಿ: Janardhana Reddy: ಪತಿ ಜನಾರ್ದನ ರೆಡ್ಡಿ ಪರ ಬಳ್ಳಾರಿಯಲ್ಲಿ ಪತ್ನಿ ಪ್ರಚಾರ: ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ದ ಬಾವುಟ ಬಿಡುಗಡೆ

ಬಿಜೆಪಿಗೆ ಪರೋಕ್ಷವಾಗಿ ಕೌಂಟರ್​ ಕೊಟ್ಟ ರೆಡ್ಡಿ 

ದಕ್ಷಿಣ ಭಾರತದಲ್ಲಿ ಭಾರತೀಯ ಜನತಾ ಪಕ್ಷವನ್ನ ಅಧಿಕಾರಕ್ಕೆ ತಂದಿದ್ದ ನಾನು ಎಂದು ಪರೋಕ್ಷವಾಗಿ ಬಿಜೆಪಿಗೆ ಕೌಂಟರ್​ ನೀಡಿದರು. 12 ವರ್ಷಗಳ ಕಾಲ ಮನೆಯಲ್ಲೆ ಉಳಿದಿದ್ದೆ. 2018 ರಲ್ಲೇ ಹೊಸ ಪಕ್ಷ ಮಾಡಬೇಕಿತ್ತು. ಆ ಯಡಿಯೂರಪ್ಪ ಅವರನ್ನು ಸಿಎಂ ಅಭ್ಯರ್ಥಿ ಅಂತ ಘೋಷಿಸಲಾಗಿತ್ತು. ಆಗ ಬಿಎಸ್​ವೈಗೆ ಸಿಎಂ ಆಗೋದನ್ನ ತಪ್ಪುಸುವುದರಿಂದ ಆ ಆಪಾದನೆ ನನಗೆ ಬರತ್ತೆ ಅಂತ ಸುಮ್ಮನಾದೆ. ಜೊತೆಗೆ ಯಡಿಯೂರಪ್ಪನವರಿಗೂ ವಯಸ್ಸಾಗಿತ್ತು ಎಂದು ಹೇಳಿದರು.

ನಮ್ಮ ಪಕ್ಷ ಕಲ್ಯಾಣ ಕರ್ನಾಟಕ್ಕೆ ಸೀಮಿತವಾಗಿಲ್ಲ

ಕೇವಲ ನಮ್ಮ ಪಕ್ಷ ಕಲ್ಯಾಣ ಕರ್ನಾಟಕ್ಕೆ ಸೀಮಿತವಾಗಿಲ್ಲ. ಚಾಮರಾಜನಗರ ಸೇರಿ 18-20 ಜಿಲ್ಲೆಗಳು ಹಿಂದುಳಿದಿವೆ. ಎಲ್ಲವನ್ನೂ ಅಭಿವೃದ್ಧಿ ಮಾಡುತ್ತೇವೆ. ಸಿಂಧನೂರು ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಮುಂದೆ ಇಟ್ಟು, ರಾಜಕೀಯ ಮಾಡುತ್ತಾರೆ. ಆದರೆ ನಮ್ಮನ್ನ ಗೆಲ್ಲಿಸಿದರೆ, ನೀವು ಶಾಸಕರ ಮನೆ ಎದುರು ಹೋಗುವುದು ಬೇಡ. ನಿಮಗೆ ನಾವು ನ್ಯಾಯ ಕೊಡುತ್ತೇವೆ. ರೆಡ್ಡಿ ಪಕ್ಷಕ್ಕೆ ಪ್ರಮುಖರಿಲ್ಲ ಅನ್ನೊ ಆರೋಪ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದ್ದು, ನನ್ನ ಶ್ರೀಮತಿ ಗಂಗಾವತಿಯಲ್ಲಿ ಗೃಹ ಪ್ರವೇಶ ಮಾಡಿದ್ದರು. ಬಸವಣ್ಣ, ಭಗವಂತ, ಜನರನ್ನ ನಂಬಿ ರಾಜಕೀಯಕ್ಕೆ ಬಂದಿದ್ದೇನೆ. ಕಲ್ಯಾಣ ಕರ್ನಾಟಕದಲ್ಲಿ ಗೆಲ್ಲಿಸುವ ತಾಕತ್ತು ನನಗಿದೆ. ಅದಕ್ಕೆ ನೀವೆಲ್ಲಾ ಬಂದಿದ್ದೀರಿ.‌ ವಿಧಾನಸೌಧದ ಮೂರನೇ ಮಹಡಿಯಲ್ಲಿ ಆಡಳಿತ ನಡೆಸೋದಲ್ಲ. ಜನರ ಮನೆಗಳಿಗೆ ಹೋಗಿ ಕೆಲಸ ಮಾಡಬೇಕು‌ ಎಂದು ಹರಿಹಾಯ್ದರು.

ಇದನ್ನೂ ಓದಿ: Breaking News: ಹೊಸ ರಾಜಕೀಯ ಪಕ್ಷ ಘೋಷಿಸಿದ ಜನಾರ್ದನ ರೆಡ್ಡಿ

ಮಗನ ಸಿನಿಮಾ ಮುಂದಿಟ್ಟು ಚುನಾವಣೆ ಮಾಡಲ್ಲ  

ಜಾತಿ, ಮತ, ಧರ್ಮ ಇಲ್ಲದೇ ಕೆಆರ್​ಪಿ ಪಕ್ಷವನ್ನ ಜನ ಬೆಂಬಲಿಸುತ್ತಿದ್ದಾರೆ‌.‌ ಜನಾರ್ದನ ರೆಡ್ಡಿ ಓಬ್ಬನೇ ಅಂತ ಮಾತನಾಡುತ್ತಿದ್ದಾರೆ‌.‌ ಹೌದು ನಾನೂ ಒಬ್ಬನೇ. ಅದಕ್ಕೆ ಬೆಂಗಳೂರಿನಲ್ಲಿ ಓಬ್ಬನೇ ಕೂತು ಪ್ರೆಸ್ ಮೀಟ್ ಮಾಡಿದೆ. ಮಗನ ಸಿನಿಮಾ ಚುನಾವಣೆಗೂ ಮುನ್ನ ರಿಲೀಸ್ ಮಾಡಲ್ಲ. ಅದನ್ನ ಮುಂದಿಟ್ಟುಕೊಂಡು ಚುನಾವಣೆನೂ ಮಾಡಲ್ಲ ಎಂದು ಜನಾರ್ದನ ರೆಡ್ಡಿ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 4:10 pm, Fri, 6 January 23