ಹೆಚ್ಚಾದ ವಿದ್ಯುತ್ ಬೇಡಿಕೆ: ನಿರಂತರ ವಿದ್ಯುತ್ ಉತ್ಪಾದನೆಗೆ ಆರ್‌ಟಿಪಿಎಸ್ ಅಧಿಕಾರಿಗಳಿಂದ ಭರ್ಜರಿ ತಯಾರಿ

|

Updated on: Feb 20, 2024 | 10:24 AM

ಕರ್ನಾಟಕದಲ್ಲಿ ನಿರೀಕ್ಷಿತ ಮಟ್ಟದಲ್ಲಿ ವಿದ್ಯುತ್ ಉತ್ಪಾದನೆಯಾಗಿಲ್ಲ. ಅಲ್ಲದೆ ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಬೇಸಿಗೆ ಹೆಚ್ಚಾಗುವ ಹಿನ್ನೆಲೆ ವಿದ್ಯುತ್​ನ ಬೇಡಿಕೆ ಹೆಚ್ಚಾಗಲಿದೆ. ಹೀಗಾಗಿ ವಿದ್ಯುತ್ ಕೇಂದ್ರಗಳ ಮೇಲೆ ಒತ್ತಡ ಹಾಕಲಾಗುತ್ತಿದ್ದು ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ (ಆರ್‌ಟಿಪಿಎಸ್) ಅಧಿಕಾರಿಗಳು ನಿರಂತರ ವಿದ್ಯುತ್ ಉದ್ಪಾದನೆ ಸಜ್ಜಾಗಿದ್ದಾರೆ. ಈ ಮೂಲಕ ಮುಂದಿನ ದಿನಗಳಲ್ಲಿ ಭಾರೀ ಪ್ರಮಾಣದಲ್ಲಿ ವಿದ್ಯುತ್ ಸಮಸ್ಯೆಗೆ ಕಡಿವಾಣ ಹಾಕಲು ಮುಂದಾಗಿದ್ದಾರೆ.

ಹೆಚ್ಚಾದ ವಿದ್ಯುತ್ ಬೇಡಿಕೆ: ನಿರಂತರ ವಿದ್ಯುತ್ ಉತ್ಪಾದನೆಗೆ ಆರ್‌ಟಿಪಿಎಸ್ ಅಧಿಕಾರಿಗಳಿಂದ ಭರ್ಜರಿ ತಯಾರಿ
ಆರ್‌ಟಿಪಿಎಸ್
Follow us on

ರಾಯಚೂರು, ಫೆ.20: ಬೇಸಿಗೆ ಆರಂಭಕ್ಕೂ ಮುನ್ನವೇ ರಾಜ್ಯದಲ್ಲಿ ನೀರಿನ ಸಮಸ್ಯೆ (Drinking Water Crisis) ಎದುರಾಗಿದೆ. ಜೊತೆಗೆ ವಿದ್ಯುತ್ ಸಮಸ್ಯೆ (Power) ಕೂಡ ಎದುರಾಗಲಿದ್ದು ರಾಯಚೂರು ಶಾಖೋತ್ಪನ್ನ ವಿದ್ಯುತ್ ಘಟಕಗಳಿಂದ ನಿರಂತರ ವಿದ್ಯುತ್ ಉತ್ಪಾದನೆಗೆ ತೊಡಗಿಸಲು ಆರ್‌ಟಿಪಿಎಸ್ (RTPS) ಅಧಿಕಾರಿಗಳ ತಂಡ ಸಿದ್ಧತೆ ಮಾಡಿಕೊಳ್ಳುತ್ತಿದೆ.

ನಿರೀಕ್ಷಿತ ಮಟ್ಟದಲ್ಲಿ ಜಲವಿದ್ಯುತ್ ಉತ್ಪಾದನೆಯಾಗದ ಕಾರಣ, ರಾಜ್ಯದ ಉಷ್ಣ ವಿದ್ಯುತ್ ಕೇಂದ್ರಗಳ ಮೇಲೆ ಅಪಾರ ಒತ್ತಡವಿದೆ. ಮತ್ತು ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ (ಆರ್‌ಟಿಪಿಎಸ್) ಅಧಿಕಾರಿಗಳು ಈ ಕಾರ್ಯಕ್ಕೆ ಸಜ್ಜಾಗಿದ್ದಾರೆ. ಮಾರ್ಚ್, ಏಪ್ರಿಲ್ ಮತ್ತು ನಂತರದ ಬೇಸಿಗೆಯ ತಿಂಗಳುಗಳಲ್ಲಿ ವಿದ್ಯುತ್ ಬೇಡಿಕೆಯು ತೀವ್ರವಾಗಿ ಹೆಚ್ಚಾಗಲಿದೆ. ಬೇಡಿಕೆಯು ಈಗಾಗಲೇ ದಿನಕ್ಕೆ 300 ಮಿಲಿಯನ್ ಯುನಿಟ್ (MU) ಆಗಿದೆ.

ಫೆ.18ರಂದು ತಾಂತ್ರಿಕ ಸಮಸ್ಯೆಯಿಂದಾಗಿ ಆರ್‌ಟಿಪಿಎಸ್‌ನ 210 ಮೆಗಾವ್ಯಾಟ್ 2ನೇ ವಿದ್ಯುತ್ ಘಟಕದ ಉತ್ಪಾದನೆ ಸ್ಥಗಿತಗೊಳಿಸಲಾಗಿತ್ತು. ವಾರ್ಷಿಕ ನಿರ್ವಹಣೆಗಾಗಿ 3ನೇ ವಿದ್ಯುತ್ ಘಟಕದ ಉತ್ಪಾದನೆ ಬಂದ್ ಮಾಡಲಾಗಿದೆ. ಜಲಾಶಯಗಳಲ್ಲಿನ ಕಡಿಮೆ ನೀರಿನ ಮಟ್ಟವು ವಿದ್ಯುತ್ ಉತ್ಪಾದನೆಯಲ್ಲಿ ಕುಸಿತಕ್ಕೆ ಕಾರಣವಾಗಿದೆ. ದುರಸ್ತಿ ಕಾರ್ಯದ ನಂತರ ಎರಡನೇ ಘಟಕದಲ್ಲಿ ವಿದ್ಯುತ್ ಉತ್ಪಾದನೆ ಪುನರಾರಂಭಿಸಲು ಪ್ರಯತ್ನಗಳು ನಡೆಯುತ್ತಿವೆ. ಘಟಕ I ಉತ್ಪಾದನೆಯನ್ನೂ ನಿಲ್ಲಿಸಿದೆ. ಇತರೆ ಘಟಕಗಳು ನಿತ್ಯ 880 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುತ್ತಿವೆ.

ಇದನ್ನೂ ಓದಿ: 1 ಕೋಟಿ ವಿದ್ಯುತ್​ ಬಿಲ್​ ಬಾಕಿ ಉಳಿಸಿಕೊಂಡ ವಿಶ್ವವಿದ್ಯಾಲಯ: ಕರೆಂಟ್​​​ ಕಟ್ ಆತಂಕ

ಆರ್‌ಟಿಪಿಎಸ್ ಮತ್ತು ಯರ್ಮರಸ್ ಥರ್ಮಲ್ ಪವರ್ ಸ್ಟೇಷನ್ (ವೈಟಿಪಿಎಸ್) ಗಳಲ್ಲಿ ಹೈಡಲ್ ಕೇಂದ್ರಗಳು ಮತ್ತು ಸೌರ ಮತ್ತು ಪವನ ಶಕ್ತಿಯ ಕೊರತೆಯನ್ನು ನೀಗಿಸಲು ಉತ್ಪಾದನೆಯನ್ನು ಹೆಚ್ಚಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಪ್ರಸ್ತುತ, ವೈಟಿಪಿಎಸ್‌ನ ಎರಡು ಘಟಕಗಳಿಂದ ಪ್ರತಿದಿನ 1,060 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಪ್ರಸ್ತುತ ಆರ್‌ಟಿಪಿಎಸ್‌ಗೆ ಕಲ್ಲಿದ್ದಲು ಕೊರತೆ ಇಲ್ಲ, 2.5 ಲಕ್ಷ ಮೆಟ್ರಿಕ್ ಟನ್ ದಾಸ್ತಾನು ಇದೆ. ಆರ್‌ಟಿಪಿಎಸ್‌ನ ಎಂಟು ಘಟಕಗಳು ಪ್ರಸ್ತುತ ದಿನಕ್ಕೆ 30 ಎಂಯು ವಿದ್ಯುತ್ ಅನ್ನು ರಾಜ್ಯ ಗ್ರಿಡ್‌ಗೆ ಪೂರೈಸುತ್ತಿವೆ ಎಂದು ಆರ್‌ಟಿಪಿಎಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಾಬು ಅವರು ಖಾಸಗಿ ಸುದ್ದಿ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ