ದೇಶಪ್ರೇಮ ಮೆರೆಯಲು ಹೋಗಿ ಕಾರ್ಮಿಕನ‌ ಹುಚ್ಚಾಟ, 150 ಮೀಟರ್ ಎತ್ತರದ ಆರ್​ಟಿಪಿಎಸ್ ಮೇಲೇರಿ ಧ್ವಜ ಹಾರಿಸಿದ

| Updated By: ಆಯೇಷಾ ಬಾನು

Updated on: Aug 14, 2023 | 3:18 PM

ರಾಯಚೂರು ತಾಲೂಕಿನ ಶಕ್ತಿನಗರ ಬಳಿಯ ಆರ್​ಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕದ ಮೇಲೇರಿ ಸುನೀಲ್ ಎಂಬ ಕಾರ್ಮಿಕ ಹುಚ್ಚಾಟ ಮೆರೆದಿದ್ದಾನೆ. ಸುಮಾರು‌ 150 ಕ್ಕೂ ಹೆಚ್ಚು ಮೀಟರ್ ಎತ್ತರದ ಆರ್​ಟಿಪಿಎಸ್​ನ ಏಳನೇ ಯುನಿಟ್ ಮೇಲೇರಿ ಕಾರ್ಮಿಕ ಸುನೀಲ್ ಭಾರತದ ಧ್ವಜ ಹಾರಿಸಿದ್ದಾನೆ. ಈ ಹಿಂದೆ ಅಧಿಕಾರಿಗಳ ಕಿರುಕುಳ, ವೇತನ ಸಮಸ್ಯೆ ಅಂತ ಆರೋಪಿಸಿ ಇದೇ ಘಟಕದ ಮೇಲೇರಿ ಸುನೀಲ್ ಆತ್ಮಹತ್ಯೆಗೆ ಯತ್ನಿಸಿದ್ದ.

ದೇಶಪ್ರೇಮ ಮೆರೆಯಲು ಹೋಗಿ ಕಾರ್ಮಿಕನ‌ ಹುಚ್ಚಾಟ, 150 ಮೀಟರ್ ಎತ್ತರದ ಆರ್​ಟಿಪಿಎಸ್ ಮೇಲೇರಿ ಧ್ವಜ ಹಾರಿಸಿದ
ದೇಶಪ್ರೇಮ ಮೆರೆಯಲು ಆರ್ ಟಿಪಿಎಸ್ ಘಟಕದ ಮೇಲೇರಿದ ಕಾರ್ಮಿಕ
Follow us on

ರಾಯಚೂರು, ಆ.14: 76ನೇ ಸ್ವಾತಂತ್ರ್ಯೋತ್ಸವಕ್ಕೆ(Independence Day) ಕೇವಲ ಒಂದೇ ಒಂದು ದಿನ ಮಾತ್ರ ಬಾಕಿ ಇದ್ದು ಇಡೀ ಭಾರತ ಸಜ್ಜಾಗುತ್ತಿದೆ. ನರೇಂದ್ರ ಮೋದಿಯವರ(Narendra Modi) ಕರೆಯಂತೆ ಮನೆ ಮನೆಗಳಲ್ಲಿ ತಿರಂಗಾ ಹಾರಾಡಲು ತಯಾರಿ ನಡೆಯುತ್ತಿದೆ. ಆದ್ರೆ ರಾಯಚೂರಲ್ಲೊಬ್ಬ ಕಾರ್ಮಿಕ ದೇಶ ಪ್ರೇಮ ಮೆರೆಯಲೆಂದು 150 ಮೀಟರ್ ಮೇಲೇರಿ ಧ್ವಜ ಹಾರಿಸಿದ್ದಾನೆ. ಕಾರ್ಮಿಕನನ್ನು ಕೆಳಗಿಳಿಸುವುದೇ ಆರ್ ಟಿಪಿಎಸ್‌ ಸಿಬ್ಬಂದಿ, ಪೊಲೀಸ್ ಸಿಬ್ಬಂದಿಗೆ ತಲೆ ನೋವಾಗಿದ್ದು ಹುಚ್ಚು ಪ್ರೇಮಕ್ಕೆ ಅಧಿಕಾರಿಗಳು ಸುಸ್ತಾಗಿದ್ದಾರೆ.

ರಾಯಚೂರು ತಾಲೂಕಿನ ಶಕ್ತಿನಗರ ಬಳಿಯ ಆರ್​ಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕದ ಮೇಲೇರಿ ಸುನೀಲ್ ಎಂಬ ಕಾರ್ಮಿಕ ಹುಚ್ಚಾಟ ಮೆರೆದಿದ್ದಾನೆ. ಸುಮಾರು‌ 150 ಕ್ಕೂ ಹೆಚ್ಚು ಮೀಟರ್ ಎತ್ತರದ ಆರ್​ಟಿಪಿಎಸ್​ನ ಏಳನೇ ಯುನಿಟ್ ಮೇಲೇರಿ ಕಾರ್ಮಿಕ ಸುನೀಲ್ ಭಾರತದ ಧ್ವಜ ಹಾರಿಸಿದ್ದಾನೆ. ಈ ವಿಚಾರ ತಿಳಿಯುತ್ತಿದ್ದಂತೆ ಆರ್​ಟಿಪಿಎಸ್‌ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ತಲೆ ಬಿಸಿ ಮಾಡಿಕೊಂಡಿದ್ದು ಸುನೀಲನನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ.

ಇದನ್ನೂ ಓದಿ: ಶಕ್ತಿ ಯೋಜನೆ ಎಫೆಕ್ಟ್, ಸೀಟ್ ಮೇಲೇರಿ ಟಿಕೆಟ್​ ನೀಡಿದ ಬಸ್ ಕಂಡಕ್ಟರ್: ವಿಡಿಯೋ ವೈರಲ್

ಈ ಹಿಂದೆ ಅಧಿಕಾರಿಗಳ ಕಿರುಕುಳ, ವೇತನ ಸಮಸ್ಯೆ ಅಂತ ಆರೋಪಿಸಿ ಇದೇ ಘಟಕದ ಮೇಲೇರಿ ಸುನೀಲ್ ಆತ್ಮಹತ್ಯೆಗೆ ಯತ್ನಿಸಿದ್ದ. ನಂತರ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ಬಂದು ಮೇಲೇರಿದ್ದ ಸುನೀಲ್ ಗೆ ಕರೆ ಮಾಡಿ ಸಮಾಧಾನ ಪಡಿಸಿ ಕೆಳಗಿಳಿಸಿದ್ರು. ಇಂದು ಕೂಡ ವಿದ್ಯುತ್ ಉತ್ಪಾದನಾ ಘಟಕ ಮೇಲೇರುವುದನ್ನು ನೋಡಿದ ಅಧಿಕಾರಿಗಳು ಕಂಗಾಲಾಗಿದ್ದರು. ಈ ಬಾರಿ ಕೂಡ ಆತ್ಮಹತ್ಯೆ ಮಾಡಿಕೊಳ್ಳಲು ಮೇಲೇರುತ್ತಿದ್ದಾನೆಂದು ಕೊಂಡು ಅಧಿಕಾರಿಗಳು ಶಕ್ತಿನಗರ ಪೊಲೀಸರನ್ನ ಕರೆಸಿದ್ದಾರೆ. ಸ್ಥಳದಲ್ಲಿ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಆದರೆ ಈ ಬಾರಿ ಆತ್ಮಹತ್ಯೆಗೆ ಯತ್ನಿಸದೆ ಸುನೀತ್ ದೇಶ ಪ್ರೇಮ ಮೆರೆಯಲು ಸಾಹಸಕ್ಕೆ ಕೈ ಹಾಕಿದ್ದ. ಆರ್​ಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕದ ಮೇಲೆ ಭಾರತದ ಧ್ವಜವನ್ನ ಹಾರಿಸಿದ್ದಾನೆ. ಸದ್ಯ ಭಾರತ ಧ್ವಜವನ್ನ ಹಾರಿಸಿ ಕಾರ್ಮಿಕ ಸುನೀಲ್ ಕೆಳಗಿಳಿದಿದ್ದು ಪೊಲೀಸರು, ಅಧಿಕಾರಿಗಳು ನಿಟ್ಟುಸಿರುಬಿಟ್ಟಿದ್ದಾರೆ.

ರಾಯಚೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 3:13 pm, Mon, 14 August 23