ಕಳ್ಳರಿಗೆ ರಾಯಚೂರಿನ ಈ ಸರ್ಕಾರಿ ಶಾಲೆಯೇ ಟಾರ್ಗೆಟ್; ಒಂದಲ್ಲ, ಎರಡಲ್ಲ ನಾಲ್ಕು ಬಾರಿ ಕಳ್ಳತನ

| Updated By: sandhya thejappa

Updated on: Dec 08, 2021 | 9:13 AM

ಗ್ಯಾಸ್ ಸಿಲಿಂಡರ್ ಕೂಡ ಕಳ್ಳತನವಾಗಿದೆ. ಈಗ ನಾಲ್ಕನೇ ಬಾರಿ ಹತ್ತಕ್ಕೂ ಹೆಚ್ಚು ಕಂಪ್ಯೂಟರ್​ಗಳನ್ನ ಕಳ್ಳರು ಕದ್ದೊಯ್ದಿದ್ದಾರೆ. ಈ ಹಿನ್ನೆಲೆ ಸರ್ಕಾರಿ ಶಾಲೆಗೆ ಸೆಕ್ಯುರಿಟಿ ಗಾರ್ಡ್ ನೇಮಿಸಲು ಮನವಿ ಮಾಡುತ್ತಿದ್ದಾರೆ.

ಕಳ್ಳರಿಗೆ ರಾಯಚೂರಿನ ಈ ಸರ್ಕಾರಿ ಶಾಲೆಯೇ ಟಾರ್ಗೆಟ್; ಒಂದಲ್ಲ, ಎರಡಲ್ಲ ನಾಲ್ಕು ಬಾರಿ ಕಳ್ಳತನ
ಪ್ರಾತಿನಿಧಿಕ ಚಿತ್ರ
Follow us on

ರಾಯಚೂರು: ಜಿಲ್ಲೆಯ ಲಿಂಗಸೂರು ತಾಲೂಕಿನ ಯರಡೋಣ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಕಳ್ಳರಿಗೆ ಟಾರ್ಗೆಟ್ ಆಗಿದೆ. ಈ ಶಾಲೆಯಲ್ಲಿ ಒಂದಲ್ಲ ಎರಡಲ್ಲ ನಾಲ್ಕು ಬಾರಿ ಕಳ್ಳರು ಕೃತ್ಯ ಎಸಗಿದ್ದಾರೆ. ಯರಡೋಣ ಸರ್ಕಾರಿ ಶಾಲೆ 400 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನ ಹೊಂದಿದೆ. ಈ ಶಾಲೆಯಲ್ಲಿದ್ದ ಹತ್ತಕ್ಕೂ ಹೆಚ್ಚು ಹೊಸ ಕಂಪ್ಯೂಟರ್ಗಳು ಕಳ್ಳತನವಾಗಿದೆ. ಈ ಹಿಂದೆ ಎರಡು ವಾಟರ್ ಪ್ಯೂರಿಫೈಯರ್, ಮತ್ತೊಮ್ಮೆ ಬಿಸಿಯೂಟದ ರೇಷನ್ ಕಿಟ್ ಕಳ್ಳತನವಾಗಿತ್ತು.

ಇದಲ್ಲದೇ ಗ್ಯಾಸ್ ಸಿಲಿಂಡರ್ ಕೂಡ ಕಳ್ಳತನವಾಗಿದೆ. ಈಗ ನಾಲ್ಕನೇ ಬಾರಿ ಹತ್ತಕ್ಕೂ ಹೆಚ್ಚು ಕಂಪ್ಯೂಟರ್​ಗಳನ್ನ ಕಳ್ಳರು ಕದ್ದೊಯ್ದಿದ್ದಾರೆ. ಈ ಹಿನ್ನೆಲೆ ಸರ್ಕಾರಿ ಶಾಲೆಗೆ ಸೆಕ್ಯುರಿಟಿ ಗಾರ್ಡ್ ನೇಮಿಸಲು ಮನವಿ ಮಾಡುತ್ತಿದ್ದಾರೆ. ಯಾರೋ ತಿಳಿದವರೇ ಈ ಕೃತ್ಯ ಎಸಗುತ್ತಿರುವ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಲಿಂಗಸೂರು ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ವಾಹನ ಡಿಕ್ಕಿ ಪಾದಚಾರಿ ಸ್ಥಳದಲ್ಲೇ ಸಾವು
ಅಪರಿಚಿತ ವಾಹನ ಡಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಬಿಳಿಕೆರೆ ಸಮೀಪದ ಕೊಳಘಟ್ಟ ಬಳಿ ಸಂಭವಿಸಿದೆ. ಡಿಕ್ಕಿ ಹೊಡೆದ ವಾಹನ ಮತ್ತು ಮೃತನ ಗುರುತು ಪತ್ತೆಯಾಗಿಲ್ಲ. ಸದ್ಯ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ

ಅಳು ಬಂದಾಗ ಮುಕ್ತವಾಗಿ ಅತ್ತು ಬಿಡಿ; ಕಣ್ಣೀರನ್ನು ತಡೆಹಿಡಿಯುವುದರಿಂದ ಕಾಯಿಲೆಗೆ ತುತ್ತಾಗುವಿರಿ ಎಚ್ಚರ

ಪ್ರಧಾನಿ ನರೇಂದ್ರ ಮೋದಿ ವಾರಾಣಸಿ ಭೇಟಿ ಹಿನ್ನೆಲೆ; ರಸ್ತೆ ಬದಿಯಲ್ಲಿದ್ದ ಮಸೀದಿಗೆ ಕೇಸರಿ ಬಣ್ಣದಿಂದ ಪೇಂಟಿಂಗ್​​ !

Published On - 9:10 am, Wed, 8 December 21