ಏಮ್ಸ್ ಸ್ಥಾಪನೆಗೆ ಮಾತು ತಪ್ಪಿದ ಬೊಮ್ಮಾಯಿ ಸರ್ಕಾರ, ಕೊತ ಕೊತ ಕುದಿಯುತ್ತಿರುವ ಸ್ಥಳೀಯರು, ಮಾ 24 ರಂದು ಅಮಿತ್​ ಶಾಗೆ ರಾಯಚೂರು ಬಂದ್ ಬಿಸಿ

| Updated By: ಸಾಧು ಶ್ರೀನಾಥ್​

Updated on: Mar 19, 2023 | 8:59 AM

Raichur AIMS Hospital: ರಾಜಕೀಯ ಒತ್ತಡಗಳಿಂದ ರಾಯಚೂರಿನಲ್ಲಿ ಸ್ಥಾಪನೆಯಾಗಬೇಕಿದ್ದ ಏಮ್ಸ್ ಹುಬ್ಬಳ್ಳಿ-ಧಾರವಾಡಕ್ಕೆ ಶಿಫ್ಟ್ ಆಗಿದೆ.. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅಂತ ಏಮ್ಸ್ ಹೋರಾಟ ಸಮೀತಿ ಕೊತಕೊತ ಕುದಿಯುತ್ತಿದೆ..

ಏಮ್ಸ್ ಸ್ಥಾಪನೆಗೆ ಮಾತು ತಪ್ಪಿದ ಬೊಮ್ಮಾಯಿ ಸರ್ಕಾರ, ಕೊತ ಕೊತ ಕುದಿಯುತ್ತಿರುವ ಸ್ಥಳೀಯರು, ಮಾ 24 ರಂದು ಅಮಿತ್​ ಶಾಗೆ ರಾಯಚೂರು ಬಂದ್ ಬಿಸಿ
ಮಾ 24 ರಂದು ಅಮಿತ್​ ಶಾಗೆ ರಾಯಚೂರು ಬಂದ್ ಬಿಸಿ
Follow us on

ರಾಜ್ಯದಲ್ಲೇ ತೀರಾ ಹಿಂದುಳಿದ ಜಿಲ್ಲೆ ಅನ್ನೋ ಕುಖ್ಯಾತಿ ಪಡೆದಿರೊ ರಾಯಚೂರಿನ ಜನ ಈಗ ರಾಜ್ಯ ಸರ್ಕಾರದ‌ ವಿರುದ್ಧ (Basavaraj Bommai) ಕೊತ ಕೊತ ಕುದಿಯುತ್ತಿದ್ದಾರೆ. ರಾಯಚೂರಿಗೆ ಏಮ್ಸ್ (Raichur AIMS Hospital) ಕೊಡ್ತೀವಿ ಅಂತ ಮಾತು ಕೊಟ್ಟಿದ್ದ ಸರ್ಕಾರ ಈಗ ಮಾತು ತಪ್ಪಿದ್ದು, ಏಮ್ಸ್ ಹೋರಾಟ ಸಮಿತಿ ಕೆರಳಿ‌ ಕೆಂಡವಾಗಿದೆ. ಇದೇ ಮಾರ್ಚ್ ನಲ್ಲಿ ಕೇಂದ್ರ ಸಚಿವ ಅಮಿತ್ ಶಾ ಬಿಸಿಲುನಾಡಿಗೆ ಆಗಮಿಸುತ್ತಿದ್ದು, ಅಂದು ರಾಯಚೂರು ಬಂದ್ ಗೆ ಕರೆ ನೀಡಲಾಗಿದೆ. ಹೌದು.. ಆಂಧ್ರ ತೆಲಂಗಾಣ ಗಡಿಯಲ್ಲಿರೊ ರಾಯಚೂರು ಜಿಲ್ಲೆ ರಾಜ್ಯದಲ್ಲೇ ತೀರಾ ಹಿಂದುಳಿದ ಜಿಲ್ಲೆ ಅನ್ನೊ ಹಣೆ ಪಟ್ಟಿಕಟ್ಟಿಕೊಂಡಿದೆ. ಜೊತೆಗೆ ರಾಯಚೂರು ಜಿಲ್ಲೆ ಅಪೌಷ್ಟಿಕತೆಗೆ ಕುಖ್ಯಾತಿ ಪಡೆದಿದೆ.. ಹೀಗಾಗಿ ರಾಯಚೂರು ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆಯಾಗಲೇ ಬೇಕು ಅನ್ನೋ ಕೂಗು (Agitation) ಈ ಹಿಂದಿನಿಂದಲೂ ಇತ್ತು.. ನಂತರ ಇಲ್ಲಿನ ಜನರ ಆಶಯದಂತೆ ಏಮ್ಸ್ ರಾಯಚೂರಿನಲ್ಲಿ ಸ್ಥಾಪನೆ ಕುರಿತು ಫೈನಲ್ ಕೂಡ ಆಗಿತ್ತು..

ಆದ್ರೆ ರಾಜಕೀಯ ಒತ್ತಡಗಳಿಂದ ರಾಯಚೂರಿನಲ್ಲಿ ಸ್ಥಾಪನೆಯಾಗಬೇಕಿದ್ದ ಏಮ್ಸ್ ಹುಬ್ಬಳ್ಳಿ-ಧಾರವಾಡಕ್ಕೆ ಶಿಫ್ಟ್ ಆಗಿದೆ.. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅಂತ ಏಮ್ಸ್ ಹೋರಾಟ ಸಮಿತಿ ಕೊತಕೊತ ಕುದಿಯುತ್ತಿದೆ.. ಏಮ್ಸ್ ಸ್ಥಾಪನೆಯಾಗಲೇ ಬೇಕು ಅಂತ ಏಮ್ಸ್ ಹೋರಾಟ ಸಮಿತಿ ಹಠ ಹಿಡಿದಿತ್ತು.

ನಂತ್ರ ಸರ್ಕಾರ ರಾಯಚೂರು ಜಿಲ್ಲೆ ಜನರ ಕಣ್ಣೊರೆಸುವುದಕ್ಕೆ ಏಮ್ಸ್ ಮಾದರಿ ಆಸ್ಪತ್ರೆ ನಿರ್ಮಿಸಲಾಗತ್ತೆ ಅಂತ ಬಜೆಟ್ ನಲ್ಲಿ ಘೋಷಣೆ ಮಾಡಿತ್ತು.. ಇದಾದ ಬಳಿಕ ಅಕ್ಷರಶಃ ಕೆರಳಿದ್ದ ಏಮ್ಸ್ ಹೋರಾಟ ಸಮಿತಿ ಉಗ್ರ ಹೋರಾಟದ ಎಚ್ಚರಿಕೆ‌ ನೀಡಿತ್ತು.. ಈ ಮಧ್ಯೆ ಮಂತ್ರಾಲಯ ಪೀಠಾಧಿಪತಿಗಳಾದ ಡಾ. ಸುಬುಧೇಂದ್ರ ತೀರ್ಥರು ಕೂಡ ಏಮ್ಸ್ ಹೋರಾಟ ಸಮಿತಿ ಬೆಂಬಲಕ್ಕೆ ನಿಂತಿದ್ದಾರೆ.. ಅನ್ನ,ಚಿನ್ನ ನೀಡೋ ರಾಯಚೂರು ಜಿಲ್ಲೆಗೆ ಏಮ್ಸ್ ದಕ್ಕುವ ವರೆಗೂ ಹೋರಾಟ ಅಂತ ಕರೆ ನೀಡಿದ್ದಾರೆ.

ಹೌದು..ರಾಯಚೂರಿನ ಜನ ಕೆರಳೋಕೆ ಕಾರಣ ರಾಜ್ಯ ಸರ್ಕಾರ.. ಏಮ್ಸ್ ಸ್ಥಾಪನೆಗಾಗಿ ಸಿಎಂ ಬಸವರಾಜ ಬೊಮ್ಮಾಯಿಗೆ ಎರಡು ಬಾರಿ ಮನವಿ ಪತ್ರ ಸಲ್ಲಿಸಲಾಗಿತ್ತು.. ನಂತರ ರಾಯಚೂರು ಉಸ್ತುವಾರಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ, ಸಚಿವ ಆರ್. ಅಶೋಕ್ ಗೆ ಕೂಡ ಮನವಿ ಸಲ್ಲಿಸಲಾಗಿತ್ತು.. ಇದಾದ ಬಳಿಕ ನಟ ಶಿವರಾಜ್​​ ಕುಮಾರ್ ರಾಯಚೂರಿಗೆ ಆಗಮಿಸಿದ್ದಾಗ, ಅವರಿಗೆ ಈ ಬಗ್ಗೆ ಮನವಿ ಮಾಡಿ ಹೋರಾಟಕ್ಕೆ ಕೈ ಜೋಡಿಸುವಂತೆ ಕೇಳಿಕೊಳ್ಳಲಾಗಿತ್ತು..

ಏಮ್ಸ್ ಸ್ಥಾಪನೆಗೆ ಮಾತು ತಪ್ಪಿದ ಬೊಮ್ಮಾಯಿ ಸರ್ಕಾರ

ನಟ ಶಿವಣ್ಣ ರಾಯಚೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಕುರಿತು ಸಿಎಂ ಜೊತೆ ಮಾತನಾಡುತ್ತೇನೆ.. ನಿಮ್ಮ ಹೋರಾಟಗಳಿಗೆ ಸಹಕಾರ ಇದೆ ಅಂತ ಬಹಿರಂಗವಾಗಿ ಹೇಳಿದ್ರು.. ಇದನ್ನೆಲ್ಲಾ ಗಮನಿಸುತ್ತಿದ್ದರೂ ಸಿಎಂ ಬೊಮ್ಮಾಯಿ ಸರ್ಕಾರ ಕೊನೆಗೂ ರಾಯಚೂರಿಗೆ ಏಮ್ಸ್ ನೀಡಲೇ ಇಲ್ಲ..

ಹೀಗಾಗಿ ಏಮ್ಸ್ ಹೋರಾಟ ಸಮಿತಿ ಸರ್ಕಾರಕ್ಕೆ ಬುದ್ದಿ ಕಲಿಸಲು ಮುಂದಾಗಿದೆ‌‌.. ಇದೇ ಮಾರ್ಚ್ 24 ರಂದು ಕೇಂದ್ರ ಸಚಿವ ಅಮಿತ್ ಶಾ ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಗಬ್ಬೂರಿಗೆ ಆಗಮಿಸುತ್ತಿದ್ದಾರೆ. ಅಂದು ರಾಯಚೂರು ಬಂದ್ ಮಾಡೋ ಮೂಲಕ ಅಮಿತ್ ಶಾಗೆ ಬಿಸಿ ಮುಟ್ಟಿಸೋಕೆ ಹೋರಾಟಗಾರರು ಇದೇ ಮಾರ್ಚ್ 24 ರಂದು ರಾಯಚೂರು ಬಂದ್ ಗೆ ಕರೆ ನೀಡಿದ್ದಾರೆ.

ವರದಿ: ಭೀಮೇಶ್ ಪೂಜಾರ್, ಟಿವಿ9, ರಾಯಚೂರು