ರಾಯಚೂರಿನಲ್ಲಿ ಹೂತ ಮೃತದೇಹಗಳ ಮಾರಾಟ ದಂಧೆ: ಕೊನೆಗೂ ಮೂವರು ಅರೆಸ್ಟ್

ರಾಯಚೂರಿನಲ್ಲಿ ಸ್ಮಶಾನದ ಮೃತದೇಹಗಳ ಅಕ್ರಮ ಮಾರಾಟ ದಂಧೆ ಪ್ರಕರಣ ಬೆನ್ನಲ್ಲೇ ಪೊಲೀಸರು ಅಲರ್ಟ್ ಆಗಿದ್ದಾರೆ. ಸದ್ಯ ಮೂವರು ದಂಧೆಕೋರರನ್ನು ಬಂಧಿಸಲಾಗಿದ್ದು, ಓರ್ವ ತಲೆಮರೆಸಿಕೊಂಡಿದ್ದಾನೆ. ನೇತಾಜಿನಗರ ಪೊಲೀಸ್​ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಅಷ್ಟೇ ಅಲ್ಲದೆ ವೈದ್ಯಕೀಯ ಕಾಲೇಜಿಗೂ ನೋಟಿಸ್ ನೀಡಲು ಪೊಲೀಸರು ಮುಂದಾಗಿದ್ದಾರೆ.

ರಾಯಚೂರಿನಲ್ಲಿ ಹೂತ ಮೃತದೇಹಗಳ ಮಾರಾಟ ದಂಧೆ: ಕೊನೆಗೂ ಮೂವರು ಅರೆಸ್ಟ್
ಬಂಧಿತರು
Edited By:

Updated on: Oct 26, 2026 | 5:44 PM

ಮುಖ್ಯಾಂಶಗಳು

  • ರಾಯಚೂರಿನ ಸ್ಮಶಾನದಲ್ಲಿನ ಮೃತದೇಹಗಳ ಮಾರಾಟ ದಂಧೆ ಪ್ರಕರಣ
  • ಟಿವಿ9 ಸರಣಿ ವರದಿ ಬೆನ್ನಲ್ಲೇ ಪೊಲೀಸರು ಅಲರ್ಟ್
  • ಎಫ್​​ಐಆರ್​ ದಾಖಲು, ಮೂವರು ಅರೆಸ್ಟ್​​

ರಾಯಚೂರು, ಅಕ್ಟೋಬರ್​​ 26: ಸ್ಮಶಾನದಲ್ಲಿ ಹೂಳಲಾದ ಮೃತದೇಹಗಳ ಮಾರಾಟ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿವಿ9 ಸರಣಿ ವರದಿ ಬೆನ್ನಲ್ಲೇ ಅಲರ್ಟ್ ಆಗಿರುವ ಪೊಲೀಸರು ಮೂವರು ದಂಧೆಕೋರನ್ನು ಬಂಧಿಸಿದ್ದಾರೆ. ನಾಲ್ವರ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಇನ್ನೊಂದೆಡೆ ತನಿಖೆ ಚುರುಕುಗೊಂಡಿದ್ದು, ಖಾಸಗಿ ಮೆಡಿಕಲ್ ಕಾಲೇಜಿಗೆ ನೋಟಿಸ್ ನೀಡಲು ನೇತಾಜಿ ನಗರ ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ಮೂವರ ಬಂಧನ 

ಸ್ಮಶಾನದ ಸಹಾಯಕ ಈರೇಶ್, ಖಾಸಗಿ ಮೆಡಿಕಲ್ ಕಾಲೇಜಿನ ಸಿಬ್ಬಂದಿ ರಾಜು ಹಾಗೂ ಅಪ್ಸರ್‌ ಬಂಧಿತರು. ಇನ್ನು ಆರೋಪಿ ಈರೇಶ್​​ ಸ್ನೇಹಿತ, ಸ್ಮಶಾನದ ಸಹಾಯಕನಾಗಿರುವ ಹುಲಿಗೆಪ್ಪ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ. ಇನ್ನು ಘಟನೆ ಸಂಬಂಧ ಖಾಸಗಿ ಮೆಡಿಕಲ್ ಕಾಲೇಜು ಹಾಗೂ ಸ್ಮಶಾನದಲ್ಲಿ ಪಂಚನಾಮೆ ಮಾಡಲಾಗಿದೆ. ಈ ವೇಳೆ ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಕೆಲ ಮೂಳೆಗಳು, ಅಸ್ತಿಪಂಜರ ಪತ್ತೆಯಾಗಿದ್ದು, ಸೀಜ್ ಮಾಡಲಾಗಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಆರೋಪಿಗಳ ಮೊಬೈಲ್ ಫೋನ್​ಗಳು ಜಪ್ತಿ 

ಸದ್ಯ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಳಿಸಿರುವ ನೇತಾಜಿ ನಗರ ಪೊಲೀಸರು, ಆರೋಪಿಗಳ ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ. ಫೋನ್‌ಗಳಲ್ಲಿನ ಮಾಹಿತಿ, ಕರೆಗಳ ವಿವರ ಹಾಗೂ ಇತರ ಡಿಜಿಟಲ್ ಸಾಕ್ಷ್ಯಗಳು ತನಿಖೆಗೆ ಮಹತ್ವದ ಸುಳಿವು ನೀಡುವ ನಿರೀಕ್ಷೆಯಿದೆ.

ಇದನ್ನೂ ಓದಿ: ಸ್ಮಶಾನದಲ್ಲಿ ಹೂಳಲಾದ ಮೃತದೇಹಗಳ ಮಾರಾಟ ದಂಧೆ ಕೇಸ್​​: ಮತ್ತಷ್ಟು ಸ್ಫೋಟಕ ವಿಚಾರಗಳು ಬಯಲು

ದಂಧೆಯಲ್ಲಿ ಖಾಸಗಿ ಮೆಡಿಕಲ್ ಕಾಲೇಜಿನ ಸಿಬ್ಬಂದಿ ನೇರವಾಗಿ ಭಾಗಿಯಾಗಿದ್ದು, ಮೃತದೇಹಗಳನ್ನ ಖರೀದಿಸುತ್ತಿದ್ದೆವು ಅಂತ ಹೇಳಿಕೆ ನೀಡಿರುವ ಹಿನ್ನೆಲೆ ಅವರು ಕೆಲಸ ಮಾಡುತ್ತಿದ್ದ ಖಾಸಗಿ ಮೆಡಿಕಲ್ ಕಾಲೇಜಿಗೂ ನೋಟಿಸ್ ನೀಡಲು ಪೊಲೀಸರು ಮುಂದಾಗಿದ್ದಾರೆ. ಈ ದಂಧೆಯಲ್ಲಿ ತಮ್ಮ ಸಿಬ್ಬಂದಿ ಭಾಗಿಯಾಗಿರುವ ಹಿನ್ನೆಲೆ ಇದರಲ್ಲಿ ಖಾಸಗಿ ಮೆಡಿಕಲ್ ಕಾಲೇಜಿನ ಪಾತ್ರವೇನು? ತಮ್ಮ ಸಂಸ್ಥೆಯ ಸಿಬ್ಬಂದಿ ಈ ದಂಧೆಯಲ್ಲಿ ಭಾಗಿಯಾಗಿದ್ದು, ಆ ಬಗ್ಗೆ ಸ್ಪಷ್ಟನೆ ಜೊತೆಗೆ ಮೆಡಿಕಲ್ ಕಾಲೇಜಿನಲ್ಲಿ ಯಾರ ಸೂಚಿಸಿದಂತೆ ಮೃತದೇಹಗಳನ್ನ ಪಡೆಯಲಾಗುತ್ತಿತ್ತು ಎನ್ನುವುದರ ಮಾಹಿತಿ ಕೋರಿ ಪೊಲೀಸರು ನೋಟಿಸ್ ನೀಡಲು ಸಿದ್ಧತೆ ನಡೆಸಿದ್ದಾರೆ.

ಸೂಕ್ತ ತನಿಖೆಗೆ ಬಿಜೆಪಿ ಮುಖಂಡ ರವಿ ಜಲದಾರ್ ಆಗ್ರಹ 

ಇತ್ತ ಸ್ಮಶಾನದಲ್ಲಿ ಹೂಳಲಾದ ಮೃತದೇಹಗಳು ಕಾಲೇಜು ತಲುಪಿದ್ದು ಹೇಗೆ? ಈ ಅಕ್ರಮ ಜಾಲದ ಹಿಂದೆ ಇನ್ನೂ ಯಾರಾದರೂ ಇದ್ದಾರಾ? ಆರೋಪಿಗಳ ಮೊಬೈಲ್ ಫೋನ್‌ಗಳಲ್ಲಿರುವ ಅಸಲಿ ಸತ್ಯ ಪೊಲೀಸರ ತನಿಖೆಯಿಂದ ಬಯಲಾಗಬೇಕಿದೆ. ಆರೋಪಿಗಳು ಧರಿಸಿದ್ದ ಗುರುತಿನ ಚೀಟಿಗಳೇ ಸಾಕ್ಷಗಳಾಗಿದ್ದು, ಸೂಕ್ತ ತನಿಖೆ ಆಗಬೇಕು ಅಂತ ಬಿಜೆಪಿ ಮುಖಂಡ ರವಿ ಜಲದಾರ್ ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಭೀಮೇಶ್​​ ಪೂಜಾರ್

ಕಳೆದ 10 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.ಈ ಹಿಂದೆ ಬೆಂಗಳೂರು ನಗರದಲ್ಲಿ ಕ್ರೈಂ ರಿಪೋರ್ಟರ್ ಆಗಿ ಎಂಟು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದೇನೆ.ಟಿವಿ9 ಸಂಸ್ಥೆಯಲ್ಲಿ ಕಳೆದ ಎರಡು ವರ್ಷಗಳಿಂದ ರಾಯಚೂರು ಜಿಲ್ಲಾ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.ನನ್ನ ಹವ್ಯಾಸ ಕ್ರಿಕೆಟ್ ಆಡುವುದು.

Read More
Loading...
Unable to load recommendations.
Follow Us