ರಾಯಚೂರು, ಡಿ.15: ನಗರದಲ್ಲಿರುವ ಬಿಸಿಎಂ ಮಹಿಳಾ ಹಾಸ್ಟೆಲ್(Women’s Hostel)ನಲ್ಲಿ ನೀರಿನ ಸಮಸ್ಯೆ(Water) ವಿಚಾರಕ್ಕೆ ಸಂಬಂಧಿಸಿದಂತೆ ಟಿವಿ9 ವರದಿ ಬೆನ್ನಲ್ಲೇ ಲೇಡಿ ವಾರ್ಡನ್ ಗಿರಿಜಾ ಎಂಬುವವರನ್ನು ಅಮಾನತು ಮಾಡಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತ ಕೆ.ಎ.ದಯಾನಂದ್ ಅವರು ಆದೇಶಿಸಿದ್ದಾರೆ. ಕರ್ತವ್ಯಲೋಪ ಹಿನ್ನೆಲೆ ಅಮಾನತುಗೊಳಿಸಲಾಗಿದೆ. ಇದೀಗ ಹಾಸ್ಟೆಲ್‌ನ ಪ್ರಭಾರಿ ವಾರ್ಡನ್ ಆಗಿ ಈರಮ್ಮ ಪತ್ತಾರ ಅವರನ್ನು ನೇಮಕ ಮಾಡಲಾಗಿದೆ. ಇನ್ನು ನೀರಿನ ಸಮಸ್ಯೆ ಪರಿಹರಿಸುವಂತೆ ಸೂಚಿಸಿದ್ದರೂ ಕೂಡ ನೀರು ಪೂರೈಕೆ ಮಾಡದ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಪ್ರತಿಭಟಿಸಿದ್ದ ವಿದ್ಯಾರ್ಥಿನಿಯರಿಗೆ ಅವಾಚ್ಯ ಶಬ್ಧಗಳಿಂದ ನಿಂದನೆ ಹಾಗೂ ಹಾಸ್ಟೆಲ್ನಿಂದ ಹೊರ ಹಾಕೋದಾಗಿ ಬೆದರಿಕೆ ಕೂಡ ಒಡ್ಡಲಾಗಿತ್ತು. ಈ ಕುರಿತು ಇಲಾಖಾ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗಿದೆ.
ವಿದ್ಯಾರ್ಥಿನಿಯರು ನಗ್ನ ಸ್ಥಿತಿಯಲ್ಲಿ ವಿಡಿಯೋ ಕಾಲ್ ಮಾಡುತ್ತಾರೆ ಎಂದು ವಾರ್ಡನ್ ಗಿರಿಜಾ ಅವರು ಹಾಸ್ಟೆಲ್‌ನಲ್ಲಿ ನೀರಿನ ಸಮಸ್ಯೆ ಮುಚ್ಚಿಹಾಕಲು ಆರೋಪಿಸಿದ್ದರು.ಈ ಆರೋಪದಿಂದ ವಿದ್ಯಾರ್ಥಿನಿಯರು ಭವಿಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಈ ಬಗ್ಗೆ ಟಿವಿ9 ನಲ್ಲಿ ವರದಿ ಮಾಡಿದ ಹಿನ್ನೆಲೆಯಲ್ಲಿ ಇದೀಗ ವಾರ್ಡನ್ನನ್ನು ಎತ್ತಂಗಡಿ ಮಾಡಲಾಗಿದೆ.
ಇದನ್ನೂ ಓದಿ:ರಾಯಚೂರು; 20 ದಿನಗಳಿಂದ ನೀರಿಲ್ಲದೆ ಹಾಸ್ಟೆಲ್ ವಿದ್ಯಾರ್ಥಿನಿಯರ ಪರದಾಟ, ಹೆಣ್ಮಕ್ಕಳ ಗೋಳು ಹೇಳುವವರಿಲ್ಲ
ರಾಯಚೂರು ನಗರದಲ್ಲಿರುವ ದೇವರಾಜ್ ಅರಸು ಮೆಟ್ರಿಕ್ ನಂತರದ ವೃತ್ತಿಪರ ಮಹಿಳಾ ಹಾಸ್ಟೆಲ್ ವಿದ್ಯಾರ್ಥಿನಿಯರು ನೀರಿಲ್ಲದೇ ಅಕ್ಷರಶಃ ಪರದಾಡುತ್ತಿದ್ದರು. ಈ ಸಮಸ್ಯೆ ಪರಿಹಾರವಾಗುತ್ತೆ ಎಂದು ಸುಮ್ಮನಿದ್ರು. ಆದರೆ, ಹಾಸ್ಟೆಲ್‌ನ ವಾರ್ಡನ್ ಆಗಲೀ, ಮೇಲಾಧಿಕಾರಿಗಳಾಗಲೀ ಯಾರೂ ಈ ಬಗ್ಗೆ ಗಮನವನ್ನೇ ಹರಿಸಿಲ್ಲ. ಹೀಗಾಗಿ ವಿದ್ಯಾರ್ಥಿನಿಯರು ಆಕ್ರೋಶ ಹೊರ ಹಾಕಿ ಪ್ರತಿಭಟನೆಗೆ ಮುಂದಾಗಿದ್ದರು. ‘ನಮಗೆ ಕುಡಿಯಲು ನೀರಿಲ್ಲ, ಬಳಕೆಗೂ ನೀರಿಲ್ಲ ಎಂದು ವಿದ್ಯಾರ್ಥಿನಿಯರು ತಮ್ಮ ಅಳಲನ್ನ ತೋಡಿಕೊಂಡಿದ್ದರು. ಇದೀಗ ಹಾಸ್ಟೇಲ್ ವಾರ್ಡ್ನ್ನ ಅವರನ್ನು ಅಮಾನತುಗೊಳಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ