ರಾಯಚೂರು; 20 ದಿನಗಳಿಂದ ನೀರಿಲ್ಲದೆ ಹಾಸ್ಟೆಲ್ ವಿದ್ಯಾರ್ಥಿನಿಯರ ಪರದಾಟ, ಹೆಣ್ಮಕ್ಕಳ ಗೋಳು ಹೇಳುವವರಿಲ್ಲ

ಊರು, ಮನೆ, ಮಠ ಬಿಟ್ಟು ಶಿಕ್ಷಣಕ್ಕಾಗಿ ರಾಯಚೂರಿಗೆ ಬಂದಿದ್ದ ವಿದ್ಯಾರ್ಥಿನಿಯರು ಪರದಾಡುತ್ತಿದ್ದಾರೆ. ಕಳೆದ 20 ದಿನಗಳಿಂದ ಕುಡಿಯಲು ನೀರಿಲ್ಲಾ, ಬಳಕೆಗೂ ನೀರಿಲ್ಲದೇ ವಿದ್ಯಾರ್ಥಿನಿಯರು ಕಂಗಾಲಾಗಿದ್ದಾರೆ. ಊಟ ಮಾಡಿ ಪೇಪರ್ನಿಂದ ಕೈ ಒರೆಸಿಕೊಳ್ಳೊ ದುಸ್ಥಿತಿ ದೇವರಾಜ್ ಅರಸು ಮೆಟ್ರಿಕ್ ನಂತರದ ವೃತ್ತಿಪರ ಮಹಿಳಾ ಹಾಸ್ಟೆಲ್​ನಲ್ಲಿ ಬಂದಿದೆ.

ರಾಯಚೂರು; 20 ದಿನಗಳಿಂದ ನೀರಿಲ್ಲದೆ ಹಾಸ್ಟೆಲ್ ವಿದ್ಯಾರ್ಥಿನಿಯರ ಪರದಾಟ, ಹೆಣ್ಮಕ್ಕಳ ಗೋಳು ಹೇಳುವವರಿಲ್ಲ
ಹಾಸ್ಟೆಲ್ ಹೊರಗೆ ವಿದ್ಯಾರ್ಥಿನಿಯರ ಪ್ರತಿಭಟನೆ
Follow us
ಭೀಮೇಶ್​​ ಪೂಜಾರ್
| Updated By: ಆಯೇಷಾ ಬಾನು

Updated on: Dec 13, 2023 | 10:55 AM

ರಾಯಚೂರು, ಡಿ.13: ರಾಯಚೂರು ನಗರದಲ್ಲಿರುವ ದೇವರಾಜ್ ಅರಸು ಮೆಟ್ರಿಕ್ ನಂತರದ ವೃತ್ತಿಪರ ಮಹಿಳಾ ಹಾಸ್ಟೆಲ್ (Devaraj Arasu Women’s Hostel)  ವಿದ್ಯಾರ್ಥಿನಿಯರು ನೀರಿಲ್ಲದೇ (Water) ಅಕ್ಷರಶಃ ಪರದಾಡುತ್ತಿದ್ದಾರೆ. ಈ ಹಾಸ್ಟೆಲ್​ನಲ್ಲಿ ಸಮಸ್ಯೆಗಳ ಆಗರವೇ ಬಿಚ್ಚಿಕೊಂಡಿದೆ. ಪ್ರತಿಭಟನೆಗೆ (Protest) ಮುಂದಾಗಿರುವ ವಿದ್ಯಾರ್ಥಿಯರೆಲ್ಲಾ (Students) ಈಗ ಸಮಸ್ಯೆ ಬಗೆಹರಿಯುತ್ತೆ, ನಾಳೆ ಪರಿಹಾರವಾಗುತ್ತೆ ಅಂತ ಸುಮ್ಮನಿದ್ರು. ಆದರೆ ಈ ಹಾಸ್ಟೆಲ್​ನಲ್ಲಿ ವಾರ್ಡನ್ ಆಗಲೀ, ಮೇಲಾಧಿಕಾರಿಗಳಾಗಲೀ ಯಾರೂ ಈ ಬಗ್ಗೆ ಗಮನವನ್ನೇ ಹರಿಸಿಲ್ಲ. ಹೀಗಾಗಿ ವಿದ್ಯಾರ್ಥಿನಿಯರು ಆಕ್ರೋಶ ಹೊರ ಹಾಕಿದ್ದಾರೆ.

ದೇವರಾಜ್ ಅರಸು ಮೆಟ್ರಿಕ್ ನಂತರದ ವೃತ್ತಿಪರ ಮಹಿಳಾ ಹಾಸ್ಟೆಲ್​ನಲ್ಲಿ ಕಳೆದ 20 ದಿನಗಳಿಂದ ನೀರಿಲ್ಲ. ವಿದ್ಯಾರ್ಥಿನಿಯರು ಹನಿ ನೀರಿಗೂ ಪರದಾಡುತ್ತಿದ್ದಾರೆ. ನಮಗೆ ಕುಡಿಯಲು ನೀರಿಲ್ಲ, ಬಳಕೆಗೂ ನೀರಿಲ್ಲ ಅಂತ ವಿದ್ಯಾರ್ಥಿನಿಯರು ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ. 150 ಜನ ವಿದ್ಯಾರ್ಥಿನಿಯರಿಗೆ ಕೇವಲ ಒಂದೇ ಒಂದು ಟ್ಯಾಂಕರ್ ಮೂಲಕ ನೀರನ್ನ ಸಪ್ಲೈ ಮಾಡಲಾಗುತ್ತಿದೆ. ನಾವು ಹೆಣ್ಮಕ್ಕಳು ಹತ್ತಾರು ಸಮಸ್ಯೆ ಇರತ್ತೆ. ಇದನ್ನ ಬಾಯ್ಬಿಟ್ಟು ಹೇಳಿದ್ರೂ ನಮಗೆ ನೀರಿನ ವ್ಯವಸ್ಥೆ ಮಾಡ್ತಿಲ್ಲ ಎಂದು ವಿದ್ಯಾರ್ಥಿನಿಯಲು ಕಣ್ಣೀರು ಹಾಕ್ತಿದ್ದಾರೆ.

ದೇವರಾಜ್ ಅರಸು ಮೆಟ್ರಿಕ್ ನಂತರದ ವೃತ್ತಿಪರ ಮಹಿಳಾ ಹಾಸ್ಟೆಲ್​ನಲ್ಲಿ ನರ್ಸಿಂಗ್ ,ಬಿಇಡಿ, ಇಂಜಿನಿಯರಿಂಗ್ ಸೇರಿ ವಿವಿಧ ವಿಭಾಗಗಳ ವಿದ್ಯಾರ್ಥಿನಿಯರಿದ್ದಾರೆ. ಎಲ್ರೂ ಬೆಳಿಗ್ಗೆ 5 ಗಂಟೆಗೆ ಎದ್ದು ಕಾಲೇಜುಗಳಿಗೆ ಹೋಗುತ್ತಾರೆ. ಆದರೆ ನೀರಿಲ್ಲದ ಹಿನ್ನೆಲೆ ತರಗತಿಗಳಿಗೆ ಹೋಗೋದಕ್ಕೂ ಸಮಸ್ಯೆಯಾಗ್ತಿದೆ. ಯಾಕಂದ್ರೆ ನೀರು ಸಿಗುವವರೆಗೂ ಹಾಸ್ಟೆಲ್​ನಲ್ಲಿ ಕಾಯಲೇಬೇಕಾದ ಅನಿವಾರ್ಯತೆ ಇದೆ. ಇದಷ್ಟೇ ಅಲ್ಲ ವಿದ್ಯಾರ್ಥಿನಿಯರು ಊಟ ಮಾಡಿದ ಬಳಿಕ ಕೈತೊಳೆದುಕೊಳ್ಳಲೂ ನೀರಿಲ್ಲ. ಹೀಗಾಗಿ ಪೇಪರ್ನಿಂದ ಕೈ ಒರೆಸಿಕೊಳ್ಳುವಂತಾಗಿದೆ. ಉಪಹಾರ ಸೇವಿಸಿ ಕಾಲೇಜುಗಳಿಗೆ ಹೋಗಿ ನೀರು ಕುಡಿಯೋ ದುಸ್ಥಿತಿ ಎದುರಾಗಿದೆ.

ಇದನ್ನೂ ಓದಿ: ಚಿನ್ನದ ನಾಡಿನ ಕರಾಟೆ ಲೇಡಿ! ಕೋಲಾರದ ರುಮಾನಾ ಕೌಸರ್ ಕೊರಳಿಗೆ ಚಿನ್ನದ ಪದಕ, ತಂದೆ ಆಟೋ ಚಾಲಕ

ಕಳಪೆ ಗುಣಮಟ್ಟದ ಆಹಾರ

ಮೊನ್ನೆಯಷ್ಟೇ ರಾಯಚೂರು ಜಿಲ್ಲೆ ಮಾನ್ವಿ ಪಟ್ಟಣದಲ್ಲಿನ ಸರ್ಕಾರಿ ಹಾಸ್ಟೆಲ್​ನಲ್ಲಿ ಫುಡ್ ಪಾಯ್ಸನ್ ನಿಂದ 14 ಜನ ವಿದ್ಯಾರ್ಥಿನಿಯರು ಉಸಿರಾಟದ ತೊಂದರೆ, ಹೊಟ್ಟೆ ನೋವಿನಿಂದ ಆಸ್ಪತ್ರೆ ಸೇರಿದ್ದರು. ಅದೇ ರೀತಿ ಈ ದೇವರಾಜ್ ಅರಸು ಮೆಟ್ರಿಕ್ ನಂತರದ ವೃತ್ತಿಪರ ಮಹಿಳಾ ಹಾಸ್ಟೆಲ್​ನಲ್ಲಿ ಅಡುಗೆ ವಿಚಾರದಲ್ಲೂ ಅವಾಂತರಗಳು ಆಗ್ತಿವೆ. ಅಕ್ಕಿ ಸ್ವಚ್ಛಗೊಳಿಸಲ್ಲ, ಹುಳು ಬಿದ್ದಿರೋ ರೀತಿ ಅನ್ನ ಇರತ್ತೆ. ಸಾಂಬಾರ್ ಕೇಳಲೇ ಬೇಡಿ. ಅದು ನೀರಾ, ಸಾಂಬರ್ನಾ ಅನ್ನೋದೇ ಗೊತ್ತಾಗಲ್ಲ. ಬಾತ್ರೂಂಗಳಂತೋ ಹಾಳಾಗಿ ಹೋಗಿವೆ ಅಂತ ವಿದ್ಯಾರ್ಥಿನಿಯರು ಸಮಸ್ಯೆಗಳ ಸರಮಾಲೆಯನ್ನ ಬಿಚ್ಚಿಟ್ಟಿದ್ದಾರೆ.

ವಿದ್ಯಾರ್ಥಿನಿಯರು ಕುಡಿಯೋ ನೀರಿಗಾಗಿ ಪರದಾಡಿ ಪ್ರತಿಭಟಿಸುತ್ತಿದ್ರೆ, ಲೇಡಿ ವಾರ್ಡನ್ ಗಿರಿಜಾ ಮೇಡಂ ಬಂದು ವಿದ್ಯಾರ್ಥಿಗಳನ್ನ ಹತ್ತಿಕ್ಕೊ ಕೆಲಸ ಮಾಡಿದ್ರು. ಮಾದ್ಯಮಗಳ ಎದುರೇ ಪ್ರತಿಭಟನೆ ಮಾಡ್ಬೇಡಿ ಅಂತ ವಾರ್ನ್ ಮಾಡಿದ್ರು. ಬೋರ್ವೇಲ್ ಅಪ್ರೂವ್ ಆಗಿದ್ದು ಸಮಸ್ಯೆ ಬಗೆಹರಿಯುತ್ತೆ ಎಂದಿದ್ದಾರೆ. ಅದೇನೆ ಇರ್ಲಿ, ಕೂಡಲೇ ಜಿಲ್ಲಾಡಳಿತವಾಗ್ಲಿ ಇಲ್ಲ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಈ ಬಗ್ಗೆ ಎಚ್ಚೆತ್ತುಕೊಂಡು ನೀರಿನ ಸಮಸ್ಯೆ ಪರಿಹರಿಸಬೇಕಿದೆ.

ರಾಯಚೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ