ರಾಯಚೂರು: ಪತ್ನಿಯ ಶೀಲಶಂಕಿಸಿ ಮಕ್ಕಳಾದ ಶಿವರಾಜ್(5) ಹಾಗೂ ರಾಜು(3)ನನ್ನ ಕತ್ತು ಹಿಸುಕಿ ಕೊಂದಿರುವ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ಜಕ್ಕಲದೊಡ್ಡಿ ಗ್ರಾಮದಲ್ಲಿ ನಡೆದಿದೆ. ಪತ್ನಿ ಪ್ರಭಾವತಿ ಮೇಲೆ ಅನುಮಾನ ಪಡುತ್ತಿದ್ದ ಪತಿ ನಿಂಗಪ್ಪ, ನಿನ್ನೆ (ಫೆ.11) ಅಜ್ಜ-ಅಜ್ಜಿಯನ್ನು ಭೇಟಿ ಮಾಡಿಸೋದಾಗಿ ಕರೆದೊಯ್ದು ಕತ್ತು ಹಿಸುಕಿ ಇಬ್ಬರು ಮಕ್ಕಳನ್ನು ಕೊಂದಿದ್ದಾನೆ. ಮಕ್ಕಳನ್ನ ಕಳೆದುಕೊಂಡ ತಾಯಿಯ ಆಕ್ರಂಧನ ಮುಗಿಲು ಮುಟ್ಟಿದೆ. ಇನ್ನು ಈ ಕುರಿತು ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ತಂದೆ ನಿಂಗಪ್ಪನನ್ನ ಬಂಧಿಸಲಾಗಿದೆ.
ಕುಡಿದ ಮತ್ತಿನಲ್ಲಿ ಬಿಲ್ ವಿಚಾರವಾಗಿ ಹೋಟೆಲ್ ಸಿಬ್ಬಂದಿ ಜೊತೆ ಗಲಾಟೆ ಮಾಡಿಕೊಂಡ ಯುವಕರ ಗುಂಪು
ಬೆಂಗಳೂರು: ಬರ್ತ್ಡೇ ಪಾರ್ಟಿಗೆ ಹೋಟೆಲ್ಗೆ ಹೋಗಿದ್ದ ಯುವಕರ ಗುಂಪೊಂದು ಕುಡಿದ ಮತ್ತಿನಲ್ಲಿ ಹೋಟೆಲ್ ಸಿಬ್ಬಂದಿ ಜೊತೆ ಗಲಾಟೆ ಮಾಡಿಕೊಂಡ ಘಟನೆ ಎಂ.ಎಸ್ರಾಮಯ್ಯ ಆಸ್ಪತ್ರೆ ಬಳಿ ನಡೆದಿದೆ. ನಿನ್ನೆ ಬರ್ತ್ಡೇ ಪಾರ್ಟಿಗೆಂದು ಹೋಗಿದ್ದ ಹೋಟೆಲ್ಗೆ ಹೋಗಿದ್ದ ಯುವಕರು ಬಿಲ್ ವಿಚಾರವಾಗಿ ಹೋಟೆಲ್ ಸಿಬ್ಬಂದಿಯೊಡನೆ ಜಗಳ ಮಾಡಿಕೊಂಡಿದ್ದಾರೆ. ಇನ್ನು ಈ ಘಟನೆ ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಯಾವುದೇ ಪ್ರಕರಣ ದಾಖಲಾಗಿಲ್ಲ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ