ರಾಯಚೂರು, ಸೆ.20: ಅನುಮಾನಾಸ್ಪದ ರೀತಿಯಲ್ಲಿ ಗೃಹಿಣಿ ಮೃತಪಟ್ಟ ಘಟನೆ ರಾಯಚೂರು ಜಿಲ್ಲೆ ನೇತಾಜಿ ನಗರದಲ್ಲಿ ತಡ ರಾತ್ರಿ ನಡೆದಿದೆ. ಶಿಲ್ಪಾ(28) ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ(Death) ಗೃಹಿಣಿ. ಮಗಳು ಸಾವು ಹಿನ್ನೆಲೆ ಘಟನಾ ಸ್ಥಳದಲ್ಲಿ ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದು ಘಟನೆಗೆ ಪತಿ ಶರತ್, ತಾಯಿ ಶಶಿಕಲಾ& ತಂದೆ ಸುರೇಶ್ ಕಾರಣ ಎಂದು ಆರೋಪ ಮಾಡಿದ್ದಾರೆ. ತಡರಾತ್ರಿ ಶಿಲ್ಪಾಳನ್ನ ಎರಡನೇ ಮಹಡಿಯಿಂದ ತಳ್ಳಿ ಕೊಲೆಗೈದಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಶಿಲ್ಪಾ ಸಾವಿಗೆ ಪತಿ ಕುಂಟುಂಬಸ್ಥರು ಕಾರಣ. ಶಿಲ್ಪಾಳನ್ನ ಎರಡನೇ ಮಹಡಿಯಿಂದ ತಳ್ಳಿ ಕೊಲೆಗೈದಿದ್ದಾರೆ ಎಂದು ಆಂಧ್ರ ಮೂಲದ ಶಿಲ್ಪಾ ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದಾರೆ. ಇನ್ನು ಮನೆ ಹೊರಗಿದ್ದ ಮೃತದೇಹವನ್ನು ಮನೆಯೊಳಗೆ ತಂದಿಟ್ಟು, ಪರಾರಿಯಾಗಿರೊ ಪತಿ ಬರೋ ವರೆಗೂ ಮೃತದೇಹ ಶಿಫ್ಟ್ ಮಾಡಲ್ಲ ಎಂದು ಶಿಲ್ಪಾ ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದಾರೆ. ಸ್ಥಳಕ್ಕೆ ನೇತಾಜಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇನ್ನು ಶಿಲ್ಪಾ ಪೋಷಕರು 50 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ವರದಕ್ಷಿಣೆ ಕೊಟ್ಟು ಮದುವೆ ಮಾಡಿಸಿದ್ದರು. ಕಳೆದೊಂದು ವರ್ಷದ ಹಿಂದೆ ಬಿಟೆಕ್ ಮುಗಿಸಿದ್ದ ಶಿಲ್ಪಾಳನ್ನ ರೈಸ್ ಮಿಲ್ ಮಾಲೀಕ ಶರತ್ ಜೊತೆ ಮದುವೆ ಮಾಡಿಸಲಾಗಿತ್ತು. ಮದುವೆಯಾದ ಬಳಿಕ ಪತ್ನಿಗೆ ಶರತ್ ಕಿರುಕುಳ ನೀಡ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ಪತಿ ಟಾರ್ಚರ್ಗೆ ಶಿಲ್ಪಾ ಡಿಪ್ರೆಶನ್ ಗೆ ಒಳಗಾಗಿದ್ದರು ಎನ್ನಲಾಗುತ್ತಿದೆ. ಈ ಹಿನ್ನೆಲೆ ಇಂದು ಕುಟುಂಬ ಸಮೇತ ಮಂತ್ರಾಲಯಕ್ಕೆ ಹೋಗೋಕೆ ಪ್ಲಾನ್ ಮಾಡಿದ್ದರು. ಆದರೆ ಮಗಳ ಮನೆಗೆ ಬಂದು ನೀಡಿದಾಗ ಮಗಳು ಅನುಮಾನಾಸ್ಪದ ರೀತಿಯಲ್ಲಿ ಸತ್ತು ಬಿದ್ದಿದ್ದಳು.
ಇದನ್ನೂ ಓದಿ: ಜಮೀನು ಗಲಾಟೆ ವೇಳೆ ಗರ್ಭಿಣಿ ಹೊಟ್ಟೆಗೆ ಒದ್ದ ದಾಯಾದಿಗಳು, ಗರ್ಭಸ್ಥ ಶಿಶು ಸಾವು
ಗದಗ ಜಿಲ್ಲೆ ತಿಮ್ಮಾಪುರ ಗ್ರಾಮದಲ್ಲಿ ವರದಕ್ಷಣೆ ಕಿರುಕುಳ ಆರೋಪ ಕೇಳಿ ಬಂದಿದ್ದು ಗೃಹಿಣಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಉಮಾ ಎಮ್ಮಿ (21) ಎಂಬ ಗೃಹಿಣಿ ಗಂಡನ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 5 ತಿಂಗಳ ಹಿಂದಷ್ಟೇ ತಿಮ್ಮಾಪುರ ಗ್ರಾಮದ ವಿಷ್ಣು ಎಂಬಾತನೊಂದಿಗೆ ಉಮಾ ಮದ್ವೆಯಾಗಿತ್ತು. ವಿಷ್ಣು ಕುಟುಂಬ ಉಮಾಗೆ ನಾಲ್ಕು ಲಕ್ಷ ರೂಪಾಯಿ ವರದಕ್ಷಿಣೆ ಕೇಳಿದ್ದರು. 4ಲಕ್ಷ ರೂ.ಪೈಕಿ ಉಮಾ ಪೋಷಕರು 3ಲಕ್ಷ 50ಸಾವಿರ ರೂ.ಕೊಟ್ಟಿದ್ದರು. ಆದರೆ ಬಾಕಿ 50 ಸಾವಿರ ರೂ.ಹಣ ತರುವಂತೆ ಗಂಡನ ಮನೆಯವರು ಉಮಾಗೆ ಕಿರುಕುಳ ನೀಡುತ್ತಿದ್ದರು. ಗಂಡ ವಿಷ್ಣು ಮತ್ತು ಅತ್ತೆ ಗಿರಿಜಮ್ಮ ಹಣ ತರುವಂತೆ ದುಂಬಾಲು ಬಿದ್ದಿದ್ದರು. ಕೊನೆಗೆ ಕಿರುಕುಳ ತಾಳಲಾಗದೆ ಗಂಡನ ಮನೆಯಲ್ಲೇ ನೇಣು ಬಿಗಿದುಕೊಂಡು ಉಮಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ತಿಮ್ಮಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ