ರಾಯಚೂರು: ವಿದ್ಯಾರ್ಥಿನಿ ಮೇಲೆ ಪ್ರಿನ್ಸಿಪಾಲ್ ಅತ್ಯಾಚಾರವೆಸಗಿ, ಕೊಲೆ ಮಾಡಿದ ಆರೋಪ; ಪೋಷಕರಿಂದ ಹಾಸ್ಟೆಲ್​ ಎದುರು ಆಕ್ರೋಶ

| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 04, 2023 | 10:52 AM

ಜಿಲ್ಲೆಯ ಲಿಂಗಸುಗೂರು ಪಟ್ಟಣದ ಖಾಸಗಿ ಕಾಲೇಜಿನಲ್ಲಿ ಪ್ರಥಮ PU ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದ 17 ವರ್ಷದ ವಿದ್ಯಾರ್ಥಿನಿ ಐಶ್ವರ್ಯ (17) ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಕಾಲೇಜಿನ ಪ್ರಾಂಶುಪಾಲರೆ ಕಾರಣ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಯಚೂರು: ವಿದ್ಯಾರ್ಥಿನಿ ಮೇಲೆ ಪ್ರಿನ್ಸಿಪಾಲ್ ಅತ್ಯಾಚಾರವೆಸಗಿ, ಕೊಲೆ ಮಾಡಿದ ಆರೋಪ; ಪೋಷಕರಿಂದ ಹಾಸ್ಟೆಲ್​ ಎದುರು ಆಕ್ರೋಶ
ಸಾಂದರ್ಭಿಕ ಚಿತ್ರ
Follow us on

ರಾಯಚೂರು: ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ ಕೊಂದು ಹಾಸ್ಟೆಲ್​ ಕೊಠಡಿಯಲ್ಲಿ ನೇಣಿಗೆ ಹಾಕಿರುವ ಘಟನೆ ಜಿಲ್ಲೆಯ ಲಿಂಗಸುಗೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪಟ್ಟಣದ ಸರ್ ಎಂ ವಿಶ್ವೇಶ್ವರಯ್ಯ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ PU ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದ 17 ವರ್ಷದ ವಿದ್ಯಾರ್ಥಿನಿ ಐಶ್ವರ್ಯ (17) ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಕಾಲೇಜಿನ ಪ್ರಾಂಶುಪಾಲ ರಮೇಶ್ ಎಂಬಾತನೆ ಕೊಲೆ ಮಾಡಿ ತನ್ನ ವಿರುದ್ಧ ಆರೋಪ ಬರದಂತೆ ಹಾಸ್ಟೆಲ್​ ಕೊಠಡಿಯಲ್ಲಿ ನೇಣಿಗೆ ಹಾಕಿದ್ದಾರೆ ಎಂದು ಮೃತ ವಿದ್ಯಾರ್ಥಿನಿ ಫೋಷಕರು, ಸಂಬಂಧಿಕರು ಆರೋಪಿಸಿ ವಸತಿ ಕಾಲೇಜಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿನ್ನೆ ಸಂಜೆ ನಡೆದಿರೊ ಘಟನೆ ಇದಾಗಿದ್ದು, ಪ್ರಥಮ PU ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ, ವಿಸಿಬಿ ಶಿಕ್ಷಣ ಸಂಸ್ಥೆ ಹಾಸ್ಟೆಲ್​ನಲ್ಲಿ ವಾಸವಿದ್ದಳು. ಆಗಾಗ ಪ್ರಿನ್ಸಿಪಾಲ್ ತನ್ನ ರೂಮ್​ಗೆ ಕರೆಸಿಕೊಳ್ಳುತ್ತಿದ್ದನಂತೆ. ಹೀಗಾಗಿ ನಿರಂತರವಾಗಿ ಲೈಂಗಿಕ ಕಿರುಕುಳ ನೀಡಿ ಪ್ರಾಂಶುಪಾಲರೇ ಕೊಂದು ನೇಣು ಹಾಕಿದ್ದಾರೆ ಎಂದು ಆರೋಪ ಮಾಡಿ ವಸತಿ ಕಾಲೇಜಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರಾಂಶುಪಾಲ ರಮೇಶ್ ಮೇಲೆ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಸ್ತೆ ದಾಟುವಾಗ ವಿದ್ಯಾರ್ಥಿನಿಗೆ ಡಿಕ್ಕಿ ಹೊಡೆದ ಕಾರು; ಡಿಕ್ಕಿ ರಭಸಕ್ಕೆ ಹಾರಿಬಿದ್ದ ವಿದ್ಯಾರ್ಥಿನಿ

ಬೆಂಗಳೂರು: ಫೆಬ್ರವರಿ 2 ರಂದು ಮಧ್ಯಾಹ್ನ 1.30 ರ ಸುಮಾರಿಗೆ ಆರ್ ವಿ ಕಾಲೇಜು ಕಡೆಯಿಂದ BIMS ಕಾಲೇಜು ಕಡೆಗೆ ರಸ್ತೆ ದಾಟುತ್ತಿದ್ದ 21 ವರ್ಷದ ಸ್ವಾತಿ ಎಂಬಾಕೆಗೆ ಕೆಂಗೇರಿ ಕಡೆಯಿಂದ ವೇಗವಾಗಿ ಬರುತ್ತಿದ್ದ KA 51 MH 7575 ನಂಬರ್​ನ ಕಾರು ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ವಿದ್ಯಾರ್ಥಿನಿ‌ ಸ್ವಾತಿಗೆ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಂಗೇರಿ ಟ್ರಾಫಿಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮುಲ್ಕಿ ಅಪಘಾತ ಪ್ರಕರಣ; ಮಂಗಳೂರಿನ ಯೂಟ್ಯೂಬರ್ ಬಂಧನ

ಮಂಗಳೂರು: ಜ.31 ರಂದು ನಗರದ ಹೊರವಲಯದ ಪಡುಪಣಂಬೂರು ಬಳಿ ಲಾರಿ ಟೈಯರ್ ಚೇಂಜ್ ಮಾಡುತ್ತಿದ್ದ ಮೂವರಿಗೆ ಕಾರು ಡಿಕ್ಕಿಯಾಗಿದ್ದು, ಮದ್ಯಪ್ರದೇಶದ ಬಬುಲು(23), ಅಚಲ್ ಸಿಂಗ್(30) ಎಂಬಿಬ್ಬರು ಮೃತಪಟ್ಟಿದ್ದರು. ಆದರೆ ಡಿಕ್ಕಿ ಮಾಡಿದ ಕಾರು ಚಾಲಕ ನಿಲ್ಲಿಸದೆ ಹಾಗೆಯೇ ಹೋಗಿ ಪರಾರಿಯಾಗಿದ್ದ. ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿತ್ತು. ಇದೀಗ ಮ್ಯಾಡ್ ಇನ್ ಕುಡ್ಲ ಯುಟ್ಯೂಬ್​ನ ಅರ್ಪಿತ್ ಎಂಬಾತನನ್ನ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ:ಬೆಂಗಳೂರು: ವಿಡಿಯೋ ಕಾಲ್ ಮಾಡಿ ಪತ್ನಿಯನ್ನು ತೋರಿಸಲಿಲ್ಲ ಎಂದು ಸಹೋದ್ಯೋಗಿ ಹೊಟ್ಟೆಗೆ ಇರಿದು ಕೊಲೆ

ಚಾಲಕನ ನಿಯಂತ್ರಣ ತಪ್ಪಿ ನದಿಗೆ ಉರುಳಿದ ಅಟೋ ರಿಕ್ಷಾ

ದಕ್ಷಿಣ ಕನ್ನಡ: ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಬಳಿ ನಿನ್ನೆ ರಾತ್ರಿ 11 ಗಂಟೆಗೆ ಕಾಜೂರು ಉರುಸ್​ಗೆ ಹೋಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾವೊಂದು ಮೃತ್ಯುಂಜಯ ನದಿಗೆ ಉರುಳಿ ಬಿದ್ದಿದ್ದು, ರಿಕ್ಷಾದಲ್ಲಿದ್ದ ಮಹಿಳೆ ಸಫೀಯ(57) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಳಿದ ಪ್ರಯಾಣಿಕರಾದ ಮಹಮ್ಮದ್ ಆಶ್ರಫ್ ,ಮರಿಯಮ್ಮರಿಗೆ ಗಾಯಗಳಾಗಿದ್ದು, ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಗಣಿಗಾರಿಕೆ ವೇಳೆ ಬಂಡೆ ಬಿದ್ದು ವ್ಯಕ್ತಿ ದುರ್ಮರಣ

ಕೋಲಾರ: ಜಿಲ್ಲೆಯ ಮಾಲೂರು ತಾಲೂಕಿನ ಟೇಕಲ್ ಉಳ್ಳೇರಹಳ್ಳಿ ಬೆಟ್ಟದಲ್ಲಿ ಅಕ್ರಮ ಗಣಿಗಾರಿಕೆ ವೇಳೆ ಬಂಡೆ ಬಿದ್ದು ತಮಿಳುನಾಡು ಮೂಲದ ಮಹೇಂದ್ರ(38) ಸಾವನ್ನಪ್ಪಿರುವ ಘಟನೆ ನಡೆದಿದೆ. ಇಟಾಚಿಯಲ್ಲಿ ಬಂಡೆ ಹೊಡೆಯುವ ವೇಳೆ ಬಂಡೆ ಉರುಳಿಬಿದ್ದಿದೆ. ಈ ಕುರಿತು ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಸಾರ್ವಜನಿಕರಿಂದ ಹಣ, ಮೊಬೈಲ್​ ಸುಲಿಗೆ ಮಾಡುತ್ತಿದ್ದ ಇಬ್ಬರ ಸೆರೆ

ಕಲಬುರಗಿ: ಸಾರ್ವಜನಿಕರಿಂದ ಹಣ, ಮೊಬೈಲ್​ ಸುಲಿಗೆ ಮಾಡುತ್ತಿದ್ದ ಸೈಯದ್ ಅಲ್ತಾಫ್ ಸೇರಿ ಇಬ್ಬರನ್ನ ಸಬ್​ಅರ್ಬನ್​ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 3 ಮೊಬೈಲ್​ ಜಪ್ತಿಮಾಡಲಾಗಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:01 am, Sat, 4 February 23