ರಾಯಚೂರು: ಅಬಾರ್ಷನ್ ಮಾಡಿದ್ದ ನೋವು ತಾಳಲಾರದೇ ಬಾಣಂತಿ ಆತ್ಮಹತ್ಯೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 13, 2023 | 2:41 PM

ರಾಯಚೂರು(Raichur) ನಗರದ ಸಂತೋಷ ಸರೋವರ ಲಾಡ್ಜ್ ಕಂ ಹೋಟೆಲ್​ನಲ್ಲಿ ಅಬಾರ್ಷನ್ ಮಾಡಿಸಿದ್ದ ನೋವು ತಾಳಲಾರದೇ ಬಾಣಂತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಉತ್ತರ ಪ್ರದೇಶದ ಸೋನಿ ಮೃತ ಮಹಿಳೆ.

ರಾಯಚೂರು: ಅಬಾರ್ಷನ್ ಮಾಡಿದ್ದ ನೋವು ತಾಳಲಾರದೇ ಬಾಣಂತಿ ಆತ್ಮಹತ್ಯೆ
ಮೃತ ಬಾಣಂತಿ
Follow us on

ರಾಯಚೂರು, ಡಿ.13: ಅಬಾರ್ಷನ್ ಮಾಡಿಸಿದ್ದ ನೋವು ತಾಳಲಾರದೇ ಬಾಣಂತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಯಚೂರು(Raichur) ನಗರದ ಸಂತೋಷ ಸರೋವರ ಲಾಡ್ಜ್ ಕಂ ಹೋಟೆಲ್​ನಲ್ಲಿ ನಡೆದಿದೆ. ಸೋನಿ (23) ಮೃತ ಗೃಹಿಣಿ. ಮೂಲತಃ ಉತ್ತರ ಪ್ರದೇಶದ ಮೃತ ಸೋನಿ ಹಾಗೂ ಪತಿ ಅವಿನಾಶ್ ಹೋಟೆಲ್ ರೂಂವೊಂದರಲ್ಲಿ ವಾಸವಿದ್ದರು. ಕಳೆದ 20 ದಿನಗಳ ಹಿಂದೆ ಸೋನಿ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದೀಗ ಸಿಸೇರಿಯನ್ ಮಾಡಿಸಿದ್ದ ನೋವು ತಾಳಲಾರದೇ ಫ್ಯಾನ್​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇಡೀ ರಾತ್ರಿ ಮೃತ ತಾಯಿ ಬಳಿಯೇ ಅಳುತ್ತಾ ಕಾಲ ಕಳೆದ 20 ದಿನದ ಹಸುಗೂಸು

ನಿನ್ನೆ(ಡಿ.12) ಮೃತ ಬಾಣಂತಿಯ ಪತಿ ಇಂಡಿಯಾ ಮತ್ತು ದಕ್ಷಿಣ ಆಫ್ರಿಕಾ ಮ್ಯಾಚ್ ನೋಡಲು ಹೋಗಿದ್ದ. ರಾತ್ರಿ ಮ್ಯಾಚ್ ಮುಗಿದ ಬಳಿಕ ಪತ್ನಿ ರೂಂನಲ್ಲಿ ಬಂದು ಪತಿ ಅವಿನಾಶ್ ಮಲಗಿದ್ದ. ಬಳಿಕ ತಡರಾತ್ರಿ ಪತ್ನಿ ಸೋನಿ‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಡೀ ರಾತ್ರಿ ಮೃತ ತಾಯಿ ಬಳಿಯೇ 20 ದಿನಗಳ ಮಗು ಅಳುತ್ತಾ ಕಾಲ ಕಳೆದಿದೆ. ಬೆಳಗಿನ ಜಾವ ಮಗು ಅಳುವುದನ್ನು ಕೇಳಿ ಎಚ್ಚರಗೊಂಡ ತಂದೆ ಅವಿನಾಶ್ ನೋಡಿದಾಗ ಪತ್ನಿ ಸೋನಿ ಆತ್ಮಹತ್ಯೆ ಮಾಡಿಕೊಂಡಿರೋದು ಬೆಳಕಿಗೆ ಬಂದಿದೆ. ಸ್ಥಳಕ್ಕೆ ರಾಯಚೂರು ಎಸ್ ಪಿ ನಿಖಿಲ್.ಬಿ ಹಾಗೂ ಪಶ್ಚಿಮ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ತಾಯಿ ಮೃತದೇಹ ರವಾನೆ ವೇಳೆ ತಾಯಿ ಶವದ ಹಿಂದೆಯೇ ಹಸುಗೂಸನ್ನು ಓರ್ವ ಮಹಿಳೆ ಒಳಗಡೆ ಕರೆದೊಯ್ದಿದ್ದಾರೆ.

ಇದನ್ನೂ ಓದಿ:ಹಂತಕನಾದ ಸೋಮಾರಿ, ದುಡಿಯಲು ಹೋಗು ಅಂದಿದ್ದಕ್ಕೆ ಪ್ರಾಣಿಯಂತೆ ಪತ್ನಿಯ ಕತ್ತು ಕತ್ತರಿಸಿ, ಸೀರೆಯಿಂದ ತಾನೂ ಆತ್ಮಹತ್ಯೆಗೆ ಶರಣಾದ

2 ಬೈಕ್​​ಗಳ ನಡುವೆ ಮುಖಾಮುಖಿ ಡಿಕ್ಕಿ; ಓರ್ವ ಸಾವು

ಹಾವೇರಿ: ಹಾನಗಲ್ ತಾಲೂಕಿನ ಅಕ್ಕಿಆಲೂರು ಬಳಿ ಎರಡು ಬೈಕ್​​ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಗಂಗಪ್ಪ ಹಲಸೂರು(42) ಎಂಬಾತ ಸ್ಥಳದಲ್ಲೇ ಸಾವನ್ನಪ್ಪಿದರೆ, ಮತ್ತೋರ್ವನಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಕುರಿತು ಹಾನಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:36 pm, Wed, 13 December 23