ಮುಸ್ಲಿಂ ಮಹಿಳೆಯರ ಬಗ್ಗೆ ಅವಹೇಳನಕಾರಿ ಸ್ಟೇಟಸ್: RSS ಕಾರ್ಯಕರ್ತನ ಬಂಧನ

|

Updated on: Jun 02, 2023 | 7:54 AM

ಮುಸ್ಲಿಂ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದಡಿ ಆರ್​ಎಸ್​ಎಸ್ ಕಾರ್ಯಕರ್ತನನ್ನು ಲಿಂಗಸೂರು ಪೊಲೀಸರು ಬಂಧಿಸಿದ್ದಾರೆ.

ಮುಸ್ಲಿಂ ಮಹಿಳೆಯರ ಬಗ್ಗೆ ಅವಹೇಳನಕಾರಿ ಸ್ಟೇಟಸ್:  RSS ಕಾರ್ಯಕರ್ತನ ಬಂಧನ
ರಾಜು ಬಂಧಿತ RSS ಕಾರ್ಯಕರ್ತ
Follow us on

ರಾಯಚೂರು: ಮುಸ್ಲಿಂ ಮಹಿಳೆಯರ ಬಗ್ಗೆ ಅವಹೇಳನಕಾರಿ ವಾಟ್ಸಪ್​ ಸ್ಟೇಟಸ್ ಹಾಕಿದ ಆರೋಪದಡಿ ಆರ್​ಎಸ್​ಎಸ್​ (RSS) ಕಾರ್ಯಕರ್ತನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ರಾಯಚೂರು(Raichur) ಜಿಲ್ಲೆ ಲಿಂಗಸುಗೂರು ಪಟ್ಟಣದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಮುಸ್ಲೀಂ ಹೆಣ್ಮಕ್ಕಳು ಬರೀ ಮಕ್ಕಳನ್ನ ಹೇರುವ ಮಷಿನ್ ಎಂದು ಆರ್​ಎಸ್​ಎಸ್​ ಸ್ವಯಂ ಸೇವಕ ರಾಜು ಎಂಬಾತ ವಾಟ್ಸಪ್​ ಸ್ಟೇಟಸ್ ಹಾಕಿದ್ದ. ಇದು ಸೋಷಿಯಲ್‌ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಮುಸ್ಲಿಂ ಸಮಯದಾಯ ಜನ ಆಕ್ರೋಶಗೊಂಡು ಲಿಂಗಸುಗೂರು ಪೊಲೀಸ್ ಠಾಣೆ ಮುಂದೆ ಪ್ರತಿಭಟಿಸಿ, ರಾಜುನನ್ನು ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಬಳಿಕ ಪ್ರಕರಣ ದಾಖಲಿಸಿಕೊಂಡ ಲಿಂಗಸೂರು ಪೊಲೀಸರು ಆರೋಪಿ ರಾಜುನನ್ನ ಬಂಧಿಸಿದ್ದಾರೆ.

ಇದನ್ನೂ ಓದಿ: Chikkamagaluru News: ಫೇಸ್​ಬುಕ್​ನಲ್ಲಿ ಸ್ಪೀಕರ್​ ಯುಟಿ ಖಾದರ್ ವಿರುದ್ಧ ಶ್ರೀರಾಮಸೇನೆ ಮುಖಂಡ ಅವಹೇಳನಕಾರಿ ಪೋಸ್ಟ್; ದೂರು ದಾಖಲು

ಮುಸ್ಲೀಂ ಹೆಣ್ಮಕ್ಕಳು ಬರೀ ಮಕ್ಕಳನ್ನ ಹೇರುವ ಮಷಿನ್ ಎಂದು ಲಿಂಗಸೂರಿನ ಆರ್​ಎಸ್​ಎಸ್​ ಕಾರ್ಯಕರ್ತ ರಾಜು ಎಂಬಾತ ವಾಟ್ಸಪ್ ಸ್ಟೇಟಸ್​ ಹಾಕಿಕೊಂಡಿದ್ದ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದು ಮುಸ್ಲಿಂ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ. ಬಳಿಕ ಸ್ಥಳೀಯ ನೂರಾರು ಮುಸ್ಲಿಂ ಸಮುದಾಯದ ಜನ ನಿನ್ನೆ (ಜೂನ್ 01) ತಡ ರಾತ್ರಿ ಲಿಂಗಸೂರು ಪೊಲೀಸ್​ ಠಾಣೆ ಮುಂದೆ ಜಮಾಯಿಸಿ ಪ್ರತಿಭಟನೆ ಮಾಡಿದ್ದು, ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿದ್ದರು. ಮುಸ್ಲಿಂ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದಡಿ ರಾಜು ಎಂಬಾತನನ್ನು ಕೂಡಲೇ ಬಂಧಿಸಬೇಕೆಂದು ಪಟ್ಟು ಹಿಡಿದಿದ್ದು, ಬಳಿಕ ಪೊಲೀಸರು ರಾಜು ವಿರುದ್ಧ ಎಫ್​ಐಆರ್ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ‌ ಒಪ್ಪಿಸಿದ್ದಾರೆ.

ಪೊಲೀಸ್ ಠಾಣೆಯಲ್ಲಿ ಬರ್ತಡೇ ಆಚರಿಸಿಕೊಂಡ ಸಿಪಿಐ

ತುಮಕೂರು: ಜಿಲ್ಲೆಯ ಶಿರಾ ನಗರ ಸಿಪಿಐ ಪ್ರಕಾಶ್ ಅವರು ಪೊಲೀಸ್ ಠಾಣೆಯಲ್ಲಿ ಜನ್ಮದಿನ ಆಚರಣೆ ಮಾಡಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಠಾಣೆಯಲ್ಲೇ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡಿರುವ ಸಿಪಿಐ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದಕ್ಕೆ ಕೆಲರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 7:47 am, Fri, 2 June 23