Rains in Raichur: ಧಾರಾಕಾರ ಮಳೆಗೆ ರಾಯಚೂರು ಎಪಿಎಮ್ಸಿ ಯಾರ್ಡ್ನಲ್ಲಿ ಸಂಗ್ರಹಿಸಿಟ್ಟಿದ್ದ ಭತ್ತದ ಮೂಟೆಗಳು ತೊಯ್ದು ಹಾಳು!
ಮಳೆಯ ನೀರು ಎಪಿಎಮ್ ಸಿ ಯಾರ್ಡ್ ಗೆ ನುಗ್ಗಿ ಭತ್ತದ ಚೀಲಗಳನ್ನು ತೊಯಿಸಿಬಿಟ್ಟಿದೆ, ನಷ್ಟ ಅನುಭವಿಸಿರುವ ರೈತರು ಕಂಗಾಲಾಗಿದ್ದಾರೆ.
ರಾಯಚೂರು: ಮಾನ್ಸೂನ್ (Monsoon) ರಾಜ್ಯ ಪ್ರವೇಶಿಸಲು ಇನ್ನೂ ಒಂದು ವಾರಕ್ಕೂ ಹೆಚ್ಚು ಸಮಯ ಇರುವುದರಿಂದ ರಾಯಚೂರ ನಗರದಲ್ಲಿ (Raichur city) ನಿನ್ನೆ ಧಾರಾಕಾರವಾಗಿ ಸುರಿದಿದ್ದು ಅಕಾಲಿಕ ಮಳೆಯೇ. ರಾಯಚೂರು ನಗರ ಭಾಗದಲ್ಲಿ ಮಳೆ ಇದ್ದಕ್ಕಿದ್ದಂತೆ ಸುರಿಯಲಾರಂಭಿಸಿದ್ದರಿಂದ ಜನರಿಗೆ ಬಚಾವಾಗಲು ಸಮಯ ಕೂಡ ಸಿಕ್ಕಿಲ್ಲ. ಇಲ್ಲಿನ ವ್ಯವಸಾಯ ಉತ್ಪನ್ನ ಮಾರಾಟ ಮಳಿಗೆಯಲ್ಲಿ (APMC yard) ಸುತ್ತಮುತ್ತಲಿನ ಗ್ರಾಮಗಳ ಜನರು ಭತ್ತದ (ನೆಲ್ಲು) ಮೂಟೆಗಳನ್ನು ಮಾರಲು ತಂದಿಟ್ಟಿದ್ದಾರೆ. ಆದರೆ ಮಳೆಯ ನೀರು ಎಪಿಎಮ್ ಸಿ ಯಾರ್ಡ್ ಗೆ ನುಗ್ಗಿ ಭತ್ತದ ಚೀಲಗಳನ್ನು ತೊಯಿಸಿಬಿಟ್ಟಿದೆ. ನಷ್ಟ ಅನುಭವಿಸಿರುವ ರೈತರು ಕಂಗಾಲಾಗಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Latest Videos