ಇಂದು ರಾಯರ 427ನೇ ವರ್ಧಂತಿ ಉತ್ಸವ; ಗುರು ವೈಭವೋತ್ಸವ ಸಂಭ್ರಮಕ್ಕೆ ಸಾಕ್ಷಿಯಾದ ನೂರಾರು ಭಕ್ತರು

| Updated By: preethi shettigar

Updated on: Mar 09, 2022 | 3:07 PM

ವರ್ಧಂತೋತ್ಸವ (ಹುಟ್ಟುಹಬ್ಬ) ಹಿನ್ನಲೆ ವಿಶೇಷವಾಗಿ ತಿರುಮಲ ತಿರುಪತಿ ದೇವಸ್ಥಾನ ಸಮಿತಿಯಿಂದ ಶೇಷವಸ್ತ್ರ ಬರ ಮಾಡಿಕೊಂಡು ಪೂಜೆ ಸಲ್ಲಿಸಿ ರಾಯರಿಗೆ ಸಮರ್ಪಿಸಲಾಯಿತು.

ಇಂದು ರಾಯರ 427ನೇ ವರ್ಧಂತಿ ಉತ್ಸವ; ಗುರು ವೈಭವೋತ್ಸವ ಸಂಭ್ರಮಕ್ಕೆ ಸಾಕ್ಷಿಯಾದ ನೂರಾರು ಭಕ್ತರು
ರಾಯರ ಪಟ್ಟಾಭಿಷೇಕ ಹಾಗೂ ವರ್ಧಂತಿ‌ ಮಹೋತ್ಸವ
Follow us on

ರಾಯಚೂರು: ಕಲಿಯುಗದ ಕಾಮಧೇನು ಮಂತ್ರಾಲಯದ ಶ್ರೀ ರಾಯರ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮೀಜಿಗಳ(Raghavendra Swamy) 427 ನೇ ಹುಟ್ಟುಹಬ್ಬದ(Birthday) ಉತ್ಸವ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಇಂದು (ಮಾರ್ಚ್​ 09) ನಾದ ಪ್ರಿಯನಾದ ಶ್ರೀ ರಾಯರಿಗೆ ‌ನಾದಾಹಾರ ಸಮರ್ಪಣೆಯೂ‌ ನಡೆಯಿತು. ಬೆಳಗ್ಗೆಯಿಂದಲೇ ‌ಶ್ರೀಮಠದಲ್ಲಿ ರಾಘವೇಂದ್ರ ಸ್ವಾಮಿಗಳ ಮೂಲ ಬೃದಾಂವನಕ್ಕೆ ವಿಶೇಷ ಪೂಜೆ, ಪಂಚಾಮೃತಾಭಿಷೇಕ ಮಾಡಲಾಯ್ತು. ವರ್ಧಂತೋತ್ಸವ (ಹುಟ್ಟುಹಬ್ಬ) ಹಿನ್ನಲೆ ವಿಶೇಷವಾಗಿ ತಿರುಮಲ ತಿರುಪತಿ ದೇವಸ್ಥಾನ(Tirupati) ಸಮಿತಿಯಿಂದ ಶೇಷವಸ್ತ್ರ ಬರ ಮಾಡಿಕೊಂಡು ಪೂಜೆ ಸಲ್ಲಿಸಿ ರಾಯರಿಗೆ ಸಮರ್ಪಿಸಲಾಯಿತು.

ಬಳಿಕ ಶ್ರೀ ಮಠದ ಪ್ರಾಂಗಣದಲ್ಲಿ ನಡೆದ ವೇದಿಕೆಯಲ್ಲಿ ಕೆಲ ಭಕ್ತರು ಶ್ರೀಮಠಕ್ಕೆ ಲಕ್ಷಾಂತರ ರೂಪಾಯಿ ‌ಮೌಲ್ಯದ ಬೆಳ್ಳಿ ಮತ್ತು ಬಂಗಾರದ ಆಭರಣಗಳನ್ನು ರಾಯರಿಗೆ ಅರ್ಪಿಸಿದ್ರು‌‌. ಶ್ರೀ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು, ಸ್ತೋತ್ರ ಪಠಣಗಳನ್ನು ಮಾಡುವ ಮೂಲಕ ಭಕ್ತರಿಗೆ ಆಶಿರ್ವದಿಸಿದರು.

ರಾಯರು ಸಂಗೀತ ಪ್ರಿಯರಾಗಿದ್ರು. ರಾಯರ ವರ್ಧಂತಿ ಮಹೋತ್ಸವ ಪ್ರಯುಕ್ತ ‌ಪ್ರತಿ ವರ್ಷದಂತೆ ಈ ವರ್ಷವೂ ಸಹ ಚೆನ್ನೈ ಮೂಲದ ನಾದಾಹಾರ ಟ್ರಸ್ಟ್​ನಿಂದ ನಾದಾಹಾರ ಕಾರ್ಯಕ್ರಮ ‌ನಡೆಸಲಾಯ್ತು. ರಾಯರ ಸನ್ನಿಧಿಯಲ್ಲಿ ಕಳೆದ 18 ವರ್ಷಗಳಿಂದ ಸಂಗೀತ ಸೇವೆ ಮಾಡಲು ನಮಗೆ ಅವಕಾಶ ಸಿಕ್ಕಿದೆ ಎಂದು ಸಂಗೀತಗಾರರು ಸಂತಸಪಟ್ಟರು.

150ಕ್ಕೂ ಹೆಚ್ಚು ಜನರು ಏಕಕಾಲಕ್ಕೆ ರಾಯರಿಗೆ ಹಾಡಿ ನಾದಹಾರ ಸಲ್ಲಿಸಿ, ಹಳೆ ಸಂಪ್ರದಾಯಕ್ಕೆ ಹೊಸ ಮೆರುಗು ಕೊಟ್ಟರು. ಆರು ದಿನಗಳಿಂದ ನಡೆಯುತ್ತಿರುವ ಗುರು ವೈಭವೋತ್ಸವ ಸಂಭ್ರಮದಲ್ಲಿ ‌ನಾಡಿನ ನಾನಾ ಕಡೆಗಳಿಂದ ಆಗಮಿಸಿದ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿ ರಾಯರ ದರ್ಶನ ಪಡೆದ್ರು. ಶ್ರೀ ಮಂಜುನಾಥ್ ದೇವಸ್ಥಾನದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ, ನಟ ಸುದೀಪ್ ಸೇರಿ ಹಲವು ಗಣ್ಯರು ಇದೇ ಉತ್ಸವದಲ್ಲಿ ಈಗಾಗಲೇ ಭಾಗಿಯಾಗಿದ್ದಾರೆ. ಅದರಂತೆ ಇಂದು ರಾಯರ ಮಠಕ್ಕೆ ಕಿರುತೆರೆ ನಟಿ ಲಕ್ಷೀ ಸಿದ್ದಯ್ಯ ಭೇಟಿ ನೀಡಿ, ರಾಯರ ದರ್ಶನ ಪಡೆದರು. ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಕಿರುತೆರೆ ನಟಿ ಲಕ್ಷ್ಮೀ ಸಿದ್ದಯ್ಯ, ರಾಯರ ಅನುಗ್ರಹ ಇದ್ರೆ ಮಾತ್ರ ಮಂತ್ರಾಲಯಕ್ಕೆ ‌ಬರಲು ಸಾಧ್ಯವೆಂದು ಹೇಳಿದರು.

ಒಟ್ಟಿನಲ್ಲಿ ಭಕ್ತರ ಪಾಲಿನ ಕಾಮಧೇನು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ 6 ದಿನಗಳಿಂದ ನಡೆದ ಗುರು ವೈಭವೋತ್ಸವ, ರಾಯರ ಪಟ್ಟಾಭಿಷೇಕ ಹಾಗೂ ವರ್ಧಂತಿ‌ ಮಹೋತ್ಸವಕ್ಕೆ ಇಂದು ತೆರೆ ಬಿದ್ದಿದೆ. ಲಕ್ಷಾಂತರ ಭಕ್ತರು ಪ್ರತಿವರ್ಷದಂತೆ ಈ ವರ್ಷವೂ ರಾಯರ ಉತ್ಸವದಲ್ಲಿ ಭಾಗಿಯಾಗಿ ಪುನೀತರಾಗಿದ್ದಾರೆ.

ವರದಿ: ಭೀಮೇಶ್ ಪೂಜಾರ್

ಇದನ್ನೂ ಓದಿ:
3 ತಿಂಗಳ ರಾಯರ ಸೇವೆ ಬಳಿಕ ನಡೆದಿದ್ದು ಪವಾಡ; ಬದುಕಿನ ಅಚ್ಚರಿಯ ವಿಚಾರ ತೆರೆದಿಟ್ಟ ನಟ ಜಗ್ಗೇಶ್​

Odinangala : ವರ್ಷಾಂತ್ಯ ವಿಶೇಷ ; ‘ಇಂಥದೊಂದು ಪುಸ್ತಕ ಕನ್ನಡಕ್ಕೆ ಬೇಕು’ ಎಚ್ಎಸ್​ ರಾಘವೇಂದ್ರ ರಾವ್ ‘ಓದಿನಂಗಳ’ದೊಳಗೆ ಹೇಳುತ್ತಿದ್ದಾರೆ