ದೇವದುರ್ಗ ಜೆಡಿಎಸ್​ ಶಾಸಕಿ ಮನೆಗೆ ನುಗ್ಗಿದ ಬೆನ್ನಲ್ಲೆ ರಾಯಚೂರಿನಲ್ಲಿ ಅಪರಿಚಿತರ ಚಲನವಲನ ಪತ್ತೆ

| Updated By: ವಿವೇಕ ಬಿರಾದಾರ

Updated on: Jan 26, 2025 | 12:42 PM

ರಾಯಚೂರು ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಎರಡು ಘಟನೆಗಳು ಆತಂಕ ಹುಟ್ಟುಹಾಕಿವೆ. ದೇವದುರ್ಗದ ಜೆಡಿಎಸ್ ಶಾಸಕಿ ಕರೆಮ್ಮ ನಾಯಕ ಅವರ ಮನೆಗೆ ಅಪರಿಚಿತರು ನುಗ್ಗಿದ್ದರು. ಇದರ ಬೆನ್ನಲ್ಲೇ ಮಸ್ಕಿ ಪಟ್ಟಣದಲ್ಲಿ ಮುಸುಕುಧಾರಿಗಳು ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾರೆ. ಈ ಎರಡು ಘಟನೆಗಳ ನಡುವೆ ಸಂಬಂಧವಿದೆಯೇ ಎಂಬ ಅನುಮಾನ ಹುಟ್ಟು ಹಾಕಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ದೇವದುರ್ಗ ಜೆಡಿಎಸ್​ ಶಾಸಕಿ ಮನೆಗೆ ನುಗ್ಗಿದ ಬೆನ್ನಲ್ಲೆ ರಾಯಚೂರಿನಲ್ಲಿ ಅಪರಿಚಿತರ ಚಲನವಲನ ಪತ್ತೆ
ರಾಯಚೂರಿನಲ್ಲಿ ಅಪರಿಚಿತರ ಓಡಾಟ
Follow us on

ರಾಯಚೂರು, ಜನವರಿ 26: ಇತ್ತೀಚಿಗಷ್ಟೇ ದೇವದುರ್ಗದ ಜೆಡಿಎಸ್ (JDS) ಶಾಸಕಿ ಕರೆಮ್ಮ ಜಿ.ನಾಯಕ (Karemma G Nayak) ಅವರ ನಿವಾಸಕ್ಕೆ ಹಿಂಬಾಗಿಲಿನಿಂದ ಅಪರಿಚಿತರು ನುಗ್ಗಿದ್ದರು. ಈ ಪ್ರಕರಣ ಮಾಸುವ ಮುನ್ನವೇ ರಾಯಚೂರು (Raichur) ಜಿಲ್ಲೆಯ ಮಸ್ಕಿ ಪಟ್ಟಣದ ಪರಾಪೂರ ರಸ್ತೆಯಲ್ಲಿ ಕೈಯಲ್ಲಿ ಬಡಿಗೆ, ಕಬ್ಬಿಣದ ರಾಡ್ ಹಿಡಿದುಕೊಂಡು ಮುಸುದಾರಿಗಳು ಅನುಮಾನಾಸ್ಪದವಾಗಿ ಓಡಾಡಿದ್ದು, ಅನುಮಾನಕ್ಕೆ ಕಾರಣವಾಗಿದೆ ಜೊತೆಗೆ ಜನರು ಆತಂಕಗೊಂಡಿದ್ದಾರೆ. ಅನುಮಾನಾಸ್ಪದ ವ್ಯಕ್ತಿಗಳು ಓಡಾಡಿದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಅಪರಿಚಿತರು ಬಾಗಿಲು ಸೇರಿದಂತೆ, ಇನ್ನೀತರ ವಸ್ತುಗಳನ್ನು ಕತ್ತರಿಸುವ ಮಷಿನ್ ಕೂಡ ಹೊಂದಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ್ದ ಮಸ್ಕಿ ಠಾಣೆ ಪೊಲೀಸರು, ಸ್ಥಳೀಯರ ಜೊತೆ ಇಡೀ ರಾತ್ರಿ ಮುಸುಕುದಾರಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ, ಮುಸುಕುದಾರಿಗಳು ಪೊಲೀಸರು ಮತ್ತು ಸ್ಥಳೀಯರ ಕೈಗೆ ಸಿಗದಂತೆ ಪರಾರಿಯಾಗಿದ್ದಾರೆ. ಮಸ್ಕಿ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.

ಇದನ್ನೂ ಓದಿ: ರಾಯಚೂರಿನಲ್ಲಿ ಬಾಣಂತಿಯರ ಸರಣಿ ಸಾವು: ರಿಮ್ಸ್ ಆಸ್ಪತ್ರೆಗೆ ಜೆಡಿಎಸ್ ನಿಯೋಗ ಭೇಟಿ,​ ರಿಯಾಲಿಟಿ ಚೆಕ್

ಶಾಸಕಿ ಮನೆಯಲ್ಲಿ ನಡೆದಿದ್ದು ಏನು?

ಎರಡು ದಿನಗಳ ಹಿಂದೆ ಜನವರಿ 24 ರಂದು ದೇವದುರ್ಗ ಕ್ಷೇತ್ರದ ಜೆಡಿಎಸ್ ಶಾಸಕಿ ಕರೆಮ್ಮ ಜಿ.ನಾಯಕ ​​ಅವರ ನಿವಾಸಕ್ಕೆ ಅಪರಿಚಿತರು ನುಗಿದ್ದರು. ಬೈಕ್​ನಲ್ಲಿ ಬಂದಿದ್ದ ಅಪರಿಚಿತರು ಶಾಸಕಿ ಮನೆಯ ಕೂಗಳತೆ ದೂರದಲ್ಲಿ ಬೈಕ್ ನಿಲ್ಲಿಸಿದ್ದರು. ಬಳಿಕ ಹಿಂಬಾಗಿಲಿನಿಂದ ಮನೆಯೊಳಗೆ ನುಗ್ಗಿದ್ದರು. ಈ ವೇಳೆ ಅಕ್ಕಪಕ್ಕದವರು ಕೂಗಿದಾಗ ಅಪರಿಚಿತರು ಪರಾರಿಯಾಗಿದ್ದರು.

ನನ್ನನ್ನು ಕೊಲೆ ಮಾಡುವ ಉದ್ದೇಶವಿದೆ: ಜೆಡಿಎಸ್​ ಶಾಸಕಿ

ಇದರ ಹಿಂದೆ ನನ್ನನ್ನು ಕೊಲೆ ಮಾಡುವ ಉದ್ದೇಶವಿದೆ. ಸಚಿವ ಶರಣಪ್ರಕಾಶ್​ ಪಾಟೀಲ್ ನೇತೃತ್ವದ ಸಭೆಯಲ್ಲೂ ಈ ವಿಚಾರ ಪ್ರಸ್ತಾಪ ಮಾಡಿದ್ದೇನೆ. ಮೂವರು ಅಪರಿಚಿತರು ಕ್ಯಾಪ್ ಧರಿಸಿ ನನ್ನ ಮನೆಗೆ ನುಗ್ಗಿದ್ದರು. ಬೆಳಗ್ಗೆ 6 ಗಂಟೆಯಾದರೂ ನನಗೆ ಎಚ್ಚರವಾಗಿರಲಿಲ್ಲ. ಕಿಟಕಿ ಮೂಲಕ ನನ್ನ ಮೇಲೆ ಯಾವುದೋ ಪುಡಿ ಎರಚಿದ್ದರು ಎಂದು ಹೇಳಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:41 pm, Sun, 26 January 25