ಆಸೆ ತೋರಿಸಿ ಹೋದ ಮಳೆರಾಯ: ಮಳೆ ಬಂತೆಂದು ಬಿತ್ತನೆ ಮಾಡಿದ್ದ ರೈತರು ಕಂಗಾಲು

| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 30, 2023 | 8:24 AM

ಎರಡು ದಿನ ರೈತರಿಗೆ ಅತಿಯಾಸೆ ತೋರಿಸಿ ಇದೀಗ ಮಳೆರಾಯ ಕೈಕೊಟ್ಟಿದ್ದಾನೆ. ಮಳೆ ಬಂತೆಂದು ಬಿತ್ತನೆ ಮಾಡಿದ್ದ ರೈತರೀಗ ಕಂಗಾಲಾಗಿದ್ದಾರೆ.

ಆಸೆ ತೋರಿಸಿ ಹೋದ ಮಳೆರಾಯ: ಮಳೆ ಬಂತೆಂದು ಬಿತ್ತನೆ ಮಾಡಿದ್ದ ರೈತರು ಕಂಗಾಲು
ಮಳೆ ಬಾರದೇ ಕಂಗಾಲಾದ ರೈತರು
Follow us on

ರಾಯಚೂರು: ರಾಜ್ಯದಲ್ಲಿ ಎಲ್ಲಿಯೂ ಕೂಡ ಹೇಳಿಕೊಳ್ಳುವಷ್ಟು ಮಳೆಯಾಗಿಲ್ಲ. ಅದರಲ್ಲೂ ಉತ್ತರ ಕರ್ನಾಟಕ(Uttara Karnataka) ಭಾಗದ ರೈತರು ಗೋಳು ಹೇಳತೀರದು. ಕುಡಿಯಲಿಕ್ಕೆ ನೀರಿಲ್ಲದ ಪರಿಸ್ಥಿತಿ ಎದುರಾಗಿದೆ. ಈ ಬಾರಿ ಮುಂಗಾರು ಮಳೆ(Mansoon) ಕೈಕೊಟ್ಟಿದೆ. ಮಳೆನಾಡು ಚಿಕ್ಕಮಗಳೂರಿನಲ್ಲಿಯೇ ಕಳೆದ ಬಾರಿ ಆದಷ್ಟು ಮಳೆಯಾಗಿಲ್ಲ. ಇನ್ನು ಮಂಡ್ಯ, ಮೈಸೂರು ಸೇರಿದಂತೆ ಇತರ ಜಿಲ್ಲೆಗಳಿಗೆ ಆಧಾರವಾಗಿದ್ದ ಕೆಆರ್​ಎಸ್ ಜಲಾಶಯದಲ್ಲೂ ನೀರಿನ ಮಟ್ಟ ಕುಸಿದಿದ್ದು, ನೀರಿನ ಅಭಾವ ಎದುರಾಗಿದೆ. ರೈತನೀಗ ಮಳೆಯ ನಿರೀಕ್ಷೆಯಲ್ಲಿದ್ದಾನೆ.​ ಈ ಮಧ್ಯೆ ಬಿಸಿಲುನಾಡು ರಾಯಚೂರು ಜಿಲ್ಲೆಯಲ್ಲಿ ಕಳೆದ ಎರಡು ದಿನಗಳ ಹಿಂದೆ ಮಳೆರಾಯ ಕೃಫೆ ತೋರಿದ್ದು, ಜಿಲ್ಲೆಯಲ್ಲಿ ಮಳೆಯಾಗಿತ್ತು. ಆದರೀಗ ಮತ್ತೆ ವರುಣ ಕೈಕೊಟ್ಟಿದ್ದಾನೆ.

ಎರಡು ದಿನ ಅತಿಯಾಸೆ ತೋರಿಸಿ ರೈತರಿಗೆ ಕೈಕೊಟ್ಟ ಮಳೆರಾಯ

ಹೌದು ಎರಡು ದಿನ ರೈತರಿಗೆ ಅತಿಯಾಸೆ ತೋರಿಸಿ ಇದೀಗ ಮಳೆರಾಯ ಕೈಕೊಟ್ಟಿದ್ದಾನೆ. ಮಳೆ ಬಂತೆಂದು ರೈತರ ಸಂತೋಷಕ್ಕೆ ಪಾರವೇ ಇರಲಿಲ್ಲ. ಅಬ್ಬಾ ಈಗಲಾದರೂ ವರುಣನ ಧಯೆ ಆಯಿತು ಎಂದುಕೊಂಡು ರೈತರು ಹೊಲಗಳನ್ನ ಬಿತ್ತಿದ್ದರು. ಆದರೀಗ ಮಳೆಬಾರದೇ ರೈತರನ್ನ ಸಂಕಷ್ಟಕ್ಕೆ ದೂಡಿದೆ. ಮಳೆರಾಯನ ಚೆಲ್ಲಾಟದಿಂದ ಬಹುತೇಕ ರೈತರು ಬಿತ್ತನೆಯತ್ತ ಮುಖ ಮಾಡುತ್ತಿಲ್ಲ.

ಇದನ್ನೂ ಓದಿ:Belagavi News: ಮುಂಗಾರು ಮಳೆ ವಿಳಂಬ; ಜಲ ದಿಗ್ಬಂಧನ ಹಾಕಿ ದೇವರಿಗೆ ಶಿಕ್ಷೆ ನೀಡಿದ ಗ್ರಾಮಸ್ಥರು

ಮಳೆ ಅಭಾವದಿಂದ ಜಿಲ್ಲೆಯಲ್ಲಿ ಅತೀ ಕಡಿಮೆ ಪ್ರಮಾಣದಲ್ಲಿ ಬಿತ್ತನೆ ಕಾರ್ಯ

ಇನ್ನು ಮಳೆ ಅಭಾವದಿಂದ ಜಿಲ್ಲೆಯಲ್ಲಿ ಅತೀ ಕಡಿಮೆ ಪ್ರಮಾಣದಲ್ಲಿ ಬಿತ್ತನೆ ಕಾರ್ಯ ನಡೆದಿದೆ. ಜಿಲ್ಲೆಯಾದ್ಯಂತ ಒಟ್ಟು 5,41,953 ಹೆಕ್ಟೆರ್ ಪ್ರದೇಶದಲ್ಲಿ ಬಿತ್ತನೆ ಗುರಿಯಿದ್ದು, ಮುಂಗಾರು ಮಳೆ ಕೈ ಕೊಟ್ಟ ಹಿನ್ನೆಲೆ ಅತೀ ಕಡಿಮೆ ಪ್ರಮಾಣದಲ್ಲಿ ಬಿತ್ತನೆಯಾಗಿದೆ. ಒಟ್ಟು 5,41,953 ಹೆಕ್ಟೆರ್ ಪೈಕಿ ಕೇವಲ 5,827 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಆಗಿದ್ದು, ಈ ಮೂಲಕ ರಾಯಚೂರು ಜಿಲ್ಲೆಯಲ್ಲೀಗ ಶೇಕಡಾ 1.08 ರಷ್ಟು ಮಾತ್ರ ಬಿತ್ತನೆಯಾಗಿದೆ.

ಭತ್ತದ ನಾಡೆಂದು ಕರೆಸಿಕೊಳ್ಳುವ ಸಿಂಧನೂರು ತಾಲ್ಲೂಕಿನಲ್ಲೇ ಅತಿ ಕಡಿಮೆ ಬಿತ್ತನೆ

ಭತ್ತದ ನಾಡು ಎಂದು ಕರೆಸಿಕೊಳ್ಳುವ ಸಿಂಧನೂರು ತಾಲ್ಲೂಕಿನಲ್ಲೇ ಅತಿ ಕಡಿಮೆ ಬಿತ್ತನೆಯಾಗಿದೆ. 81,943 ಹೆಕ್ಟೆರ್ ಪೈಕಿ ಕೇವಲ 258 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಸಿಂಧನೂರು ತಾಲ್ಲೂಕಿನಲ್ಲಿ ಅತೀ ಕಡಿಮೆ ಅಂದ್ರೆ ಶೇಕಡಾ 0.31 ರಷ್ಟು ಮಾತ್ರ ಬಿತ್ತನೆ. ಇತ್ತ ಬಿತ್ತನೆಗಾಗಿ ಕೃಷಿ ಇಲಾಖೆಯಿಂದ ಒಟ್ಟು 2360 ಕ್ವಿಂಟಲ್ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದ್ದು, ಇದೀಗ ಮಳೆ ಕೈ ಕೊಟ್ಟ ಹಿನ್ನಲೆ ಜಿಲ್ಲೆಯ ಒಟ್ಟು 37 ರೈತ ಸಂಪರ್ಕ ಕೇಂದ್ರದಲ್ಲಿ 2360 ಕ್ವಿಂಟಲ್ ಬಿತ್ತನೇ ಬೀಜ ಸ್ಟಾಕ್ ಆಗಿದೆ. ಆದ್ರೆ, ಬಿತ್ತನೆ ಕಾರ್ಯ ಕುಂಠಿತವಾಗಿರೊ ಹಿನ್ನೆಲೆ ಅಪಾರಪ್ರಮಾಣದಲ್ಲಿ ಗೋಡೌನ್ನಲ್ಲೇ ಉಳಿದ ಬಿತ್ತನೆ ಬೀಜ

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ