ರಾಯಚೂರು, ಡಿಸೆಂಬರ್ 24: ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಕೈಹಾಕಿ ಈ ಹಿಂದೆ ಸಿಎಂ ಸಿದ್ದರಾಮಯ್ಯ (Siddaramaiah) ಮತ್ತು ಸಚಿವ ಎಂ.ಬಿ.ಪಾಟೀಲ್ ಕೈಸುಟ್ಟುಗೊಂಡಿದ್ದಾರೆ. ಮತ್ತೊಮ್ಮೆ ಅಂತಹ ಹುಚ್ಚು ಕೆಲಸವನ್ನು ಮಾಡೋದಕ್ಕೆ ಹೋಗಬಾರದು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ಮಾಡಿದ್ದಾರೆ. ಜಿಲ್ಲೆಯ ಲಿಂಗಸುಗೂರು ತಾಲೂಕಿನ ಯರಡೋಣಿ ಗ್ರಾಮದಲ್ಲಿ 2ಎ ಮೀಸಲಾತಿಗೆ ಆಗ್ರಹಿಸಿ ಸಮಾವೇಶದಲ್ಲಿ ಮಾತನಾಡಿದ ಅವರು, ವೀರಶೈವ ಲಿಂಗಾಯತರನ್ನು ಕೂಡಿಸುವಂತಹ ಕೆಲಸ ಮಾಡಬೇಕು ಆದರೆ ಕೂಡಿಸುವಂತಹ ಕೆಲಸವನ್ನು ವೀರಶೈವ ಮಹಾಸಭಾ ಮಾಡಿಲ್ಲ ಎಂದಿದ್ದಾರೆ.
ಈವರೆಗೂ ವೀರಶೈವ ಪರಂಪರೆ, ಬಸವಣ್ಣನ ಪರಂಪರೆ ಜಗಳಗಳಿವೆ. ಈಗಲೂ ಸಮಾಜ ಒಡೆಯುವ ಕೆಲಸವನ್ನೇ ಮಹಾಸಭಾ ಮಾಡುತ್ತಿದೆ. ನಮಗೆ 2ಡಿ ಕೊಟ್ಟಿದಾರೆ, ರಾಜ್ಯ ಸರ್ಕಾರ ನೋಟಿಫಿಕೇಷನ್ ಮಾಡಿದೆ. ಎಲ್ಲಾ ಸಮುದಾಯಕ್ಕೂ ನಾವು ನ್ಯಾಯ ಕೊಡುವ ಕೆಲಸ ಮಾಡಿದ್ದೇವೆ. ಈಗ ಠರಾವು ಮಾಡುವ ಅವಶ್ಯಕತೆ ಏನಿಲ್ಲ ಎಂದು ಹೇಳಿದ್ದಾರೆ.
ಸಮಾವೇಶಕ್ಕೆ ಜಯಮೃತ್ಯುಂಜಯ ಸ್ವಾಮೀಜಿಗೆ ಆಹ್ವಾನ ನೀಡದ ವಿಚಾರವಾಗಿ ಮಾತನಾಡಿದ ಅವರು, ನಮ್ಮನ್ನು ನಿರ್ಲಕ್ಷಿಸಿದರೆ ವೀರಶೈವ ಮಹಾಸಭಾದವರಿಗೆ ಗೌರವ ಇರುತ್ತೆ. ಪಂಚಮಸಾಲಿ ದೊಡ್ಡ ಸಮಾಜ, ಹೀಗಾಗಿ ನಮ್ಮ ಸ್ವಾಮೀಜಿಗೆ ಕರೆದಿಲ್ಲ ಎಂದಿದ್ದಾರೆ.
ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯತ ಉಪಜಾತಿ ಬರೆಯುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ರೀತಿ ಬರೆದಿದ್ದರಿಂದಲೇ ಅನೇಕ ಉಪ ಜಾತಿಗಳು ಬಿಟ್ಟು ಹೋಗಿವೆ. ಲಿಂಗಾಯತ ಸಮುದಾಯದಲ್ಲಿ ಒಳ ಪಂಗಡಗಳಿಗೆ ಮೀಸಲಾತಿ ಸಿಗುತ್ತಿದೆ. ಹಾಗಾಗಿ ಅವರೆಲ್ಲಾ ವೀರಶೈವ ಸಮುದಾಯದಿಂದ ಬಿಟ್ಟು ಹೋಗುತ್ತಿದ್ದಾರೆ.
ಇದನ್ನೂ ಓದಿ: ವೀರಶೈವ ಲಿಂಗಾಯತ ಸಮಾವೇಶಕ್ಕೆ ಜಯಮೃತ್ಯುಂಜಯ ಸ್ವಾಮೀಜಿ ಠಕ್ಕರ್
ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಉಪಜಾತಿಗಳನ್ನು ಸೇರಿಸಿಕೊಂಡಿದ್ದಾರೆ. ಜಾತಿಗಣತಿಯಲ್ಲಿ ಇಂದು ವೀರಶೈವ ಸಮಾಜ 4ನೇ ಸ್ಥಾನಕ್ಕೆ ಹೋಗಿದೆ. ವೀರಶೈವ ಲಿಂಗಾಯತ ಎಂದು ಬರೆಸಿದರೆ ಮೀಸಲಾತಿ ಸಿಗೋದಿಲ್ಲ ಅಂತಾ ಸಮಾಜದ ಬಹಳಷ್ಟು ಜನರ ಭಾವನೆಯಲ್ಲಿ ಬಂದಿದೆ. ಹೀಗಾಗಿ ಹಿಂದೂ ಎಂದು ಬರೆಸಿ ತಮ್ಮ ಉಪಜಾತಿಗಳು ಬರೆಸುತ್ತಿದ್ದಾರೆ ಎಂದಿದ್ದಾರೆ.
ವೀರಶೈವ ಲಿಂಗಾಯತ ಎಂದು ಬರೆಸಿದರೆ ಮೀಸಲಾತಿ ಸಿಗುವುದಿಲ್ಲ. ವೀರಶೈವ ಸಮಾಜದಲ್ಲಿ ಲಿಂಗಾಯತರು ಅಂತಾ ಬರೆಸಿದವರು ನಾವೇ. ಆದರೆ ಬೇರೆಯವರೆಲ್ಲಾ ಬೇರೆ ಬೇರೆ ಕೆಟಗರಿಯಲ್ಲಿ ಹೋಗಿಬಿಟ್ಟಿದ್ದಾರೆ. ಬಣಜಿಗರು 2Aದಲ್ಲಿ ಹೋಗಿದ್ದಾರೆ, ಅಲ್ಲಿಂದ ಗಾಣಿಗ ಸಮಾಜ ಹೋಗಿದೆ. ತಮ್ಮ ಮಕ್ಕಳಭವಿಷ್ಯದ ಸಲುವಾಗಿ ಹೋಗಿದ್ದಾರೆ, ಉಳಿದವರು ನಾವಷ್ಟೇ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.