ರಾಮನಗರ, ಜುಲೈ 27: ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ (students) ಕೂದಲನ್ನು ಶಿಕ್ಷಕರು (Teachers) ಕತ್ತರಿಸಿರುವಂತಹ ಘಟನೆ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಅರಳಾಳುಸಂದ್ರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ. ಶಾಲೆಗೆ ಬರುವಾಗ ಎರಡು ಜಡೆ ಹಾಕಿಲ್ಲವೆಂದು 8ನೇ ತರಗತಿಯ ಮೂವರು ವಿದ್ಯಾರ್ಥಿನಿಯರ ಕೂದಲಿಗೆ ಕತ್ತರಿ ಹಾಕಿದ್ದಾರೆ. ದೈಹಿಕ ಶಿಕ್ಷಕ ಶಿವಕುಮಾರ, ಸಹಶಿಕ್ಷಕಿ ಪವಿತ್ರಾರಿಂದ ಅಮಾನುಷ ಕೃತ್ಯವೆಸಗಲಾಗಿದೆ.
ಶಿಕ್ಷಕರ ಅಮಾನವೀಯ ಕೃತ್ಯಕ್ಕೆ ವಿದ್ಯಾರ್ಥಿನಿಯರ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಶಾಲೆಗೆ ಆಗಮಿಸಿದ ಪೋಷಕರು ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಘಟನೆ ಬೆನ್ನಲ್ಲೇ ಅರಳಾಳುಸಂದ್ರ ಶಾಲೆಗೆ ಅಕ್ಕೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಗದಗ: ಶಿಕ್ಷಕಿಯೊಬ್ಬರು ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದಿರುವ ಘಟನೆ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಕಾಲಕಾಲೇಶ್ವರದಲ್ಲಿ ಇತ್ತೀಚೆಗೆ ನಡೆದಿತ್ತು. ಕಾಲಕಾಲೇಶ್ವರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ರೇಣುಕಾ ಎಂಬುವರು ವಿರ್ಥಿಗೆ ಮನಬಂದಂತೆ ಥಳಿಸಿದ್ದರು. ಶಿಕ್ಷಕಿ ಹೊಡೆತಕ್ಕೆ ವಿದ್ಯಾರ್ಥಿ ನರಳಾಡಿದ್ದ.
ಇದನ್ನೂ ಓದಿ: ಅಂಗನವಾಡಿ ಕೇಂದ್ರಗಳಲ್ಲಿ ಎಲ್ಕೆಜಿ, ಯುಕೆಜಿ ಆರಂಭ, ಇಲ್ಲಿದೆ ವಿಶೇಷತೆ
ಬೆನ್ನು ಮೇಲೆ ಶಿಕ್ಷಕಿ ಹೊಡೆದಿದ್ದರಿಂದ ಬಾಸುಂಡೆ ಬಂದಿತ್ತು. ಇದು ಪೊಷಕರು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಗಿತ್ತು. ಸಿಟ್ಟಿಗೆದ್ದ ಪೋಷಕರು ಶಾಲೆಗೆ ಬೀಗ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು. ತರಗತಿ ಬಹಿಷ್ಕರಿಸಿದ ವಿದ್ಯಾರ್ಥಿಗಳು ಪೋಷಕರಿಗೆ ಸಾಥ್ ನೀಡಿದ್ದರು. ತಕ್ಷಣ ಶಿಕ್ಷಕಿಯನ್ನ ಅಮಾನತು ಮಾಡಬೇಕು ಅಂತ ಒತ್ತಾಯಿಸಿದ್ದು, ಇಲ್ಲಾಂದ್ರೆ ಬೇರೆ ಶಾಲೆಗೆ ವರ್ಗಾವಣೆ ಮಾಡಬೇಕು ಆಗ್ರಹಿಸಿದ್ದರು.
ಇದನ್ನೂ ಓದಿ: ಒತ್ತಡಕ್ಕೆ ಮಣಿದ ಸರ್ಕಾರ: ಅಂಗನವಾಡಿ ಕೇಂದ್ರಲ್ಲೇ ಎಲ್ಕೆಜಿ, ಯುಕೆಜಿ ಆರಂಭ
ಸಾಕಷ್ಟು ಬಾರಿ ಬಿಇಓ ಗಮನಕ್ಕೆ ತಂದ್ರು ಡೋಂಟ್ ಕೇರ್ ಎಂದಿದ್ದರು. ಸ್ಥಳಕ್ಕೆ ಡಿಡಿಪಿಐ ಬರುವಂತೆ ಪೋಷಕರು ಪಟ್ಟು ಹಿಡಿದ್ದರು. ವಿಷಯ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಬಿಇಓ ಕಚೇರಿಗೆ ಬಂದ ಅಧಿಕಾರಿಗಳು ಸೂಕ್ತ ಕ್ರಮದ ಭರವಸೆ ನೀಡಿದ ಬಳಿಕ ಪ್ರತಿಭಟನೆ ವಾಪಸ ಪಡೆದಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:49 pm, Sat, 27 July 24