ರಾಮನಗರ: ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನಲ್ಲಿ ದೊಡ್ಡ ಮಠ ಅಂತಾನೇ ಹೆಸರು ಪಡೆದಿರುವ ಬಂಡೆ ಮಠದ ಬಸವಲಿಂಗ ಸ್ವಾಮೀಜಿ ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಈ ಸಂಬಂಧ ಪೊಲೀಸರು ತನಿಖೆ ಶುರು ಮಾಡಿದ್ದು ಕೆಲವು ಸ್ವಾಮೀಜಿ ಆತ್ಮಹತ್ಯೆಗೂ ಮುನ್ನ ಫೋನ್ ಸಂಭಾಷಣೆಯಲ್ಲಿದ್ದರು ಎಂಬ ಸಂಗತಿ ಪತ್ತೆಯಾಗಿದೆ.
ರಾತ್ರಿ 2 ಗಂಟೆಯಿಂದ 4 ಗಂಟೆಯ ಅವಧಿಯಲ್ಲಿ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಇದಕ್ಕೂ ಮುನ್ನ ರಾತ್ರಿ 1.30ರವರೆಗೂ ಸ್ವಾಮೀಜಿ ಪ್ರಭಾವಿ ಮುಖಂಡನೊಬ್ಬನ ಜೊತೆಗೆ ಫೋನ್ ಸಂಭಾಷಣೆಯಲ್ಲಿದ್ದರು ಎಂಬ ಮಾಹಿತಿ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಸ್ವಾಮೀಜಿ ಅವರ ಮೊಬೈಲ್ ನಂಬರ್ ಕಾಲ್ ಡೀಟೈಲ್ಸ್ ಪರಿಶೀಲನೆ ಮಾಡುತ್ತಿದ್ದಾರೆ. ಸ್ವಾಮೀಜಿಗೆ ಬಂದಿರುವ ಲಾಸ್ಟ್ ಕಾಲ್ ಮೇಲೆ ಅನುಮಾನಗಳು ಹೆಚ್ಚಾಗಿವೆ. ಇದರ ಜೊತೆಗೆ ಸ್ವಾಮೀಜಿ ಜೊತೆಗೆ ನಿರಂತರ ಸಂಪರ್ಕ ಹೊಂದಿದ್ದವರ ಬಗ್ಗೆ ಸಹ ಮಾಹಿತಿ ಸಂಗ್ರಹಿಸಲು ಕಾಲ್ ಡೀಟೈಲ್ಸ್ ನೆರವಾಗಿದೆ. ಇದನ್ನೂ ಓದಿ: ಕೂಡಲಸಂಗಮದಲ್ಲಿ 12ನೇ ಶತಮಾನದ ವೈಭವ: ಕಲೆಯಲ್ಲಿ ಅರಳಿದ ವಚನಲೋಕ ಶರಣರ ಜೀವನಚರಿತ್ರೆ
ಇನ್ನು ಪೊಲೀಸರು ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡ ಕೊಠಡಿ ಸೀಲ್ ಮಾಡಿದ್ದಾರೆ. ಬಸವಲಿಂಗ ಸ್ವಾಮೀಜಿ ಮೊಬೈಲ್, ಡೈರಿ, ಡೆತ್ ನೋಟ್ ಜಪ್ತಿ ಮಾಡಿ ಮೊಬೈಲ್ನಲ್ಲಿರುವ ಮಾಹಿತಿ ಕಲೆಹಾಕಲು FSLಗೆ ರವಾನಿಸಿದ್ದಾರೆ. ಎಫ್ಎಸ್ಎಲ್ ವರದಿ ಆಧರಿಸಿ ಮುಂದಿನ ತನಿಖೆ ನಡೆಸಲಾಗುತ್ತೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸೂಕ್ತ ತನಿಖೆ ಮಾಡುವುವಂತೆ ಸಿದ್ಧಗಂಗಾ ಶ್ರೀಗಳಿಂದ ಮನವಿ
ಕಂಚುಗಲ್ ಬಂಡೆಮಠದ ಬಸವಲಿಂಗಶ್ರೀ ಆತ್ಮಹತ್ಯೆ ಪ್ರಕರಣ ಸಂಬಂಧ ಸೂಕ್ತ ತನಿಖೆ ಮಾಡುವಂತೆ ಸಿದ್ಧಗಂಗಾ ಶ್ರೀಗಳು ಪೊಲೀಸರಿಗೆ ಮನವಿ ಮಾಡಿದ್ದಾರೆ. ಬಂಡೆಮಠದ ಬಸವಲಿಂಗಶ್ರೀಗಳು ಸಿದ್ದಗಂಗಾ ಮಠದ ಸಿದ್ದಲಿಂಗಶ್ರೀಗಳ ಜೊತೆ ನಿಖಟ ಸಂಬಂಧ ಹೊಂದಿದ್ದರು. ಆದ್ರೆ ಮೊನ್ನೆ ರಾತ್ರಿ ವಿದೇಶದಿಂದ ಆಗಮಿಸಿದ್ದ ಸಿದ್ದಗಂಗಾ ಶ್ರೀಗಳನ್ನು ಭೇಟಿ ಮಾಡಲು ಬಂಡೆಮಠದ ಶ್ರೀಗಳು ಹೋಗಿರಲಿಲ್ಲ. ತಮ್ಮ ಕಾರಿನ ಚಾಲಕನಿಗೆ ಬೆಳಗಿನ ಜಾವ ಮೂರು ಗಂಟೆಗೆ ಹೋಗೋಣಾ ಅಂದಿದ್ದರಂತೆ. ಸದ್ಯ ಪ್ರಕರಣ ಸಂಬಂಧ ಸೂಕ್ತ ತನಿಖೆ ಮಾಡುವುವಂತೆ ಪೊಲೀಸರಿಗೆ ಸಿದ್ದಗಂಗಾ ಶ್ರೀಗಳು ಮನವಿ ಮಾಡಿದ್ದಾರೆ.