Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೂಡಲಸಂಗಮದಲ್ಲಿ 12ನೇ ಶತಮಾನದ ವೈಭವ: ಕಲೆಯಲ್ಲಿ ಅರಳಿದ ವಚನಲೋಕ ಶರಣರ ಜೀವನಚರಿತ್ರೆ

ಕೂಡಲಸಂಗಮದಲ್ಲಿ ಬಸವಣ್ಣನವರ ಹುಟ್ಟಿನಿಂದ ಅವರ ಜೀವನ ಚಿತ್ರಣ ಸಾರುವ ಕಲಾಕೃತಿಗಳನ್ನು ಮಾಡಲಾಗಿದೆ. ಜಗದ ಮೊದಲ ಸಂಸತ್ ಎಂದು ಹೆಸರಾದ ಅನುಭವ ಮಂಟಪದ ಚಿತ್ರಣ ಇಲ್ಲಿದೆ.

ಕೂಡಲಸಂಗಮದಲ್ಲಿ 12ನೇ ಶತಮಾನದ ವೈಭವ: ಕಲೆಯಲ್ಲಿ ಅರಳಿದ ವಚನಲೋಕ ಶರಣರ ಜೀವನಚರಿತ್ರೆ
ಕಲೆಯಲ್ಲಿ ಅರಳಿದ ವಚನಲೋಕ ಶರಣರ ಜೀವನಚರಿತ್ರೆ
Follow us
TV9 Web
| Updated By: ಆಯೇಷಾ ಬಾನು

Updated on:Oct 25, 2022 | 8:09 AM

ಬಾಗಲಕೋಟೆ: 12ನೇ ಶತಮಾನ ಅಂದರೆ ತಕ್ಷಣ ನೆನಪಾಗೋದು ಬಸವಣ್ಣನವರು, ಆ ಸಮಯದಲ್ಲಿನ ಶರಣ ಸಂಸ್ಕೃತಿ. ಅಂತಹ ಸಮಯದಲ್ಲೇ ಅಂತರ್ಜಾತಿ ವಿವಾಹ ಮಾಡಿ ಕ್ರಾಂತಿ ಮಾಡಿದವರು ಬಸವಣ್ಣನವರು. ವಿಶ್ವದ ಮೊದಲ ಸಂಸತ್ ಎಂದು ಹೆಸರಾದ ಅನುಭವ ಮಂಟಪ ಅಂದೇ ಸ್ಥಾಪನೆಯಾಗಿತ್ತು. ಆದರೆ ಈಗ ಅವೆಲ್ಲವನ್ನು ನೋಡೋದಕ್ಕೆ ಸಾಧ್ಯವಿಲ್ಲ. ಆದರೂ ಅದೊಂದು ಸ್ಥಳಕ್ಕೆ ಹೋದರೆ 12ನೇ ಶತಮಾನದ ಶರಣ ಸಂಸ್ಕೃತಿ, ಅನುಭವ ಮಂಟಪ ಎಲ್ಲವೂ ದರ್ಶನವಾಗುತ್ತದೆ.

ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಕೂಡಲಸಂಗಮದಲ್ಲಿ ಬಸವಣ್ಣನವರ ಹುಟ್ಟಿನಿಂದ ಅವರ ಜೀವನ ಚಿತ್ರಣ ಸಾರುವ ಕಲಾಕೃತಿಗಳನ್ನು ಮಾಡಲಾಗಿದೆ. ಜಗದ ಮೊದಲ ಸಂಸತ್ ಎಂದು ಹೆಸರಾದ ಅನುಭವ ಮಂಟಪದ ಚಿತ್ರಣ ಇಲ್ಲಿದೆ. ಅಷ್ಟೇ ಅಲ್ಲ ಅಲ್ಲಮಪ್ರಭು, ಬಸವಣ್ಣ, ಅಕ್ಕಮಹಾದೇವಿ ಸೇರಿದಂತೆ ಅನೇಕ ಶರಣರ ಮೂರ್ತಿಗಳಿವೆ. ಬಸವಣ್ಣನವರ ಐಕ್ಯಸ್ಥಳ ಕೂಡಲಸಂಗಮದ ಬಸವಕಲಾಸಂಗ್ರಹಾಲಯದಲ್ಲೀಗ ಅದ್ಭುತ ಲೋಕವೆ ಸೃಷ್ಟಿಯಾಗಿದೆ. ಇದರ ಒಳಗೆ ಕಾಲಿಟ್ಟ ಜನರನ್ನು ನೇರವಾಗಿ 12ನೇ ಶತಮಾನಕ್ಕೆ ಕರೆದೊಯ್ತುತ್ತದೆ.

basavanna

ಕಲಾಸಂಗ್ರಹಾಲಯದ ಆವರಣದಲ್ಲಿ ಮೊದಲಿಗೆ ಬಸವಣ್ಣನವರ ಕಾಲದ ಸಮಾಜ ಪದ್ದತಿ, ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಶೂದ್ರ ಜಾತಿ ವ್ಯವಸ್ಥೆ, ಜೀವನಪದ್ದತಿ ಹೇಗಿತ್ತು? ದಲಿತರ ಮೇಲೆ ಹೇಗೆಲ್ಲ ಶೋಷಣೆ ನಡೆಯುತ್ತಿತ್ತು ಎಂಬ ನಿಜಸಂಗತಿಯನ್ನು ಸಿಮೆಂಟ್ ಮೂರ್ತಿಗಳ ಮೂಲಕ ದರ್ಶನ ಮಾಡಿಸಲಾಗಿದೆ. ಒಳಗೆ ಕಾಲಿಟ್ಟರೆ ಉಬ್ಬು ಶಿಲ್ಪಗಳಲ್ಲಿ ಬಸವಣ್ಣನವರ ‌ಜನ್ಮದಿಂದ ಹಿಡಿದು ಅವರ ರಾಜಕೀಯ ಜೀವನ, ವಚನ ಸಾಹಿತ್ಯ ಸೇವೆ ಎಲ್ಲವನ್ನು ಉಬ್ಬು ಚಿತ್ರಗಳ‌ ಮೂಲಕ ಕಟ್ಟಿಕೊಡಲಾಗಿದೆ. ಬಸವಕಲಾನಿಕೇತನ ಸಂಸ್ಥೆಯ ಕಲಾವಿದರು ಇಂತಹದ್ದೊಂದು ಅದ್ಬುತ ಲೋಕ ಸೃಷ್ಟಿ ಮಾಡಿದ್ದಾರೆ. ಆ ಮೂಲಕ ಶರಣರ ಕಾಲದ ಜೀವನ ದರ್ಶನ ಮಾಡಿಸಿದ್ದಾರೆ.

ಕಲಾ ಸಂಗ್ರಹಾಲಯದಲ್ಲಿ ಸುವರ್ಣಭೂಮಿ 

ಕಲಾ ಸಂಗ್ರಹಾಲಯದಲ್ಲಿ ಇರುವ ಸುವರ್ಣಭೂಮಿ ಕೂಡಲಸಂಗಮ, ಬಸವಣ್ಣನವರ ಐಕ್ಯಮಂಟಪ, ಜಗದ ಮೊದಲ ಸಂಸತ್ ಎಂದು ಹೆಸರಾದ ಅನುಭವಮಂಟಪ, ಅನುಭವಮಂಟಪದಲ್ಲಿ‌ ನಡೆಯುತ್ತಿದ್ದ ಚರ್ಚೆ, ಅಲ್ಲಮಪ್ರಭು, ಅಕ್ಕಮಹಾದೇವಿ ಸೇರಿದಂತೆ ಅನೇಕ ಶರಣರ ಮೂರ್ತಿಗಳು ನೈಜ ಎನ್ನುವಂತೆ ಕಂಡುಬರುತ್ತವೆ. ಬಸವಣ್ಣನವರ ಜೀವನ ಚರಿತ್ರೆ ಇರುವ ಉಬ್ಬು ಶಿಲ್ಪಗಳು ರಾಜ್ಯದ ವಿವಿಧ ಕಲಾವಿದರ ಕೈಯಲ್ಲಿ ಅರಳಿದ 200ಕ್ಕೂ ಹೆಚ್ಚು ಪೇಂಟಿಂಗ್ ಭಾವಚಿತ್ರಗಳ ಗ್ಯಾಲರಿ ಇದೆ. ಮೊನೊಕಲರ್ ನಲ್ಲಿ ಗೋಡೆಗೆ ಹಾಕಿದ ಸಾಲು ಸಾಲು ಚಿತ್ರಗಳು ಎಲ್ಲವೂ ಅಮೋಘ. ಸತತ 20 ವರ್ಷಗಳಿಂದ ಈ ಪ್ರಯತ್ನ ನಡೆಯುತ್ತಿದೆ.

ಇದುವರೆಗೂ ಬಸವರಾಜ ಅವರು ಐದುವರೆ ಕೋಟಿ ರೂಗಳನ್ನು ಇದಕ್ಕಾಗಿ ಖರ್ಚು ಮಾಡಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದಕ್ಕೆ ಒಂದು ಕೋಟಿ ಧನಸಹಾಯ ನೀಡಿದೆ. ಹೆಚ್ಚಿನ ಅನುದಾನಕ್ಕಾಗಿ ಸರಕಾರಕ್ಕೆ ಕಲಾವಿದರು ಮನವಿ ಮಾಡುತ್ತಿದ್ದಾರೆ. ಬಸವಣ್ಣನ ಐಕ್ಯಮಂಟಪ, ಸಂಗಮನಾಥ ದರ್ಶನ ಮಾಡುವ ಪ್ರವಾಸಿಗರು ಈ ಕಲಾಸಗ್ರಹಾಲಯಕ್ಕೆ ಭೇಟಿ ಕೊಡಲೇಬೇಕು. ಕಲಾಸಂಗ್ರಹಾಲಯದ ಒಳಗೆ ಕಾಲಿಟ್ಟರೆ 12ನೇ ಶತಮಾನಕ್ಕೆ‌ ಹೋದ ಅನುಭವವಾಗುತ್ತದೆ. ಇಂತಹ ಕಲಾಸಂಗ್ರಹಾಲಯ ಪ್ರವಾಸಿಗರನ್ನು ತನ್ನತ್ತ ಕೈ ಮಾಡಿ ಕರೆಯುತ್ತಿದೆ.

ವರದಿ: ರವಿ ಮೂಕಿ, ಟಿವಿ9 ಬಾಗಲಕೋಟೆ

Published On - 8:09 am, Tue, 25 October 22

‘ಇಂಟರ್​ವಲ್​’ ಸಿನಿಮಾ ಗೆದ್ದಿದ್ದು ಹೇಗೆ? 25 ಡೇಸ್ ಸಂಭ್ರಮದಲ್ಲಿ ಚಿತ್ರತಂಡ
‘ಇಂಟರ್​ವಲ್​’ ಸಿನಿಮಾ ಗೆದ್ದಿದ್ದು ಹೇಗೆ? 25 ಡೇಸ್ ಸಂಭ್ರಮದಲ್ಲಿ ಚಿತ್ರತಂಡ
ಪತಿರಾನ ಓವರ್​ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ ಪ್ರಿಯಾಂಶ್
ಪತಿರಾನ ಓವರ್​ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ ಪ್ರಿಯಾಂಶ್
ಬಿಸಿಲ ತಾಪದಿಂದ ಅಹಮದಾಬಾದ್‌ನಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಪಿ. ಚಿದಂಬರಂ
ಬಿಸಿಲ ತಾಪದಿಂದ ಅಹಮದಾಬಾದ್‌ನಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಪಿ. ಚಿದಂಬರಂ
ಹಣದ ಕೊರತೆಯಿಂದ ಕಾರು ಮಾರಿದ ಅಜಯ್ ರಾವ್; ಕಣ್ಣೀರು ಹಾಕಿದ ಮಗಳು
ಹಣದ ಕೊರತೆಯಿಂದ ಕಾರು ಮಾರಿದ ಅಜಯ್ ರಾವ್; ಕಣ್ಣೀರು ಹಾಕಿದ ಮಗಳು
ಬಂಗಾಳದಲ್ಲಿ ವಕ್ಫ್ ಮಸೂದೆ ಹಿಂಪಡೆಯಲು ಒತ್ತಾಯಿಸಿ ಭುಗಿಲೆದ್ದ ಹಿಂಸಾಚಾರ
ಬಂಗಾಳದಲ್ಲಿ ವಕ್ಫ್ ಮಸೂದೆ ಹಿಂಪಡೆಯಲು ಒತ್ತಾಯಿಸಿ ಭುಗಿಲೆದ್ದ ಹಿಂಸಾಚಾರ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಿನಿಮಾ ವಾಹನಗಳ ಪ್ರವೇಶ: ಆಕ್ರೋಶ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಿನಿಮಾ ವಾಹನಗಳ ಪ್ರವೇಶ: ಆಕ್ರೋಶ
ಯತ್ನಾಳ್ ಅಸಲಿಗೆ ಒಬ್ಬ ನಕಲಿ ಹಿಂದೂ ಹುಲಿ: ರೇಣುಕಾಚಾರ್ಯ
ಯತ್ನಾಳ್ ಅಸಲಿಗೆ ಒಬ್ಬ ನಕಲಿ ಹಿಂದೂ ಹುಲಿ: ರೇಣುಕಾಚಾರ್ಯ
ರಹಾನೆ ಸ್ಫೋಟಕ ಬ್ಯಾಟಿಂಗ್​ಗೆ ದಂಗಾದ ಲಕ್ನೋ ಬೌಲರ್ಸ್
ರಹಾನೆ ಸ್ಫೋಟಕ ಬ್ಯಾಟಿಂಗ್​ಗೆ ದಂಗಾದ ಲಕ್ನೋ ಬೌಲರ್ಸ್
ಮೃತ್ಯುಂಜಯ ಸ್ವಾಮೀಜಿ ಯತ್ನಾಳ್​ಗೆ ಬುದ್ಧಿ ಹೇಳಲಿ: ಚಂದ್ರಶೇಖರ್ ಪೂಜಾರ್
ಮೃತ್ಯುಂಜಯ ಸ್ವಾಮೀಜಿ ಯತ್ನಾಳ್​ಗೆ ಬುದ್ಧಿ ಹೇಳಲಿ: ಚಂದ್ರಶೇಖರ್ ಪೂಜಾರ್
ಕೆಕೆಆರ್​ ಬೌಲರ್‌ಗಳ ಬೆವರಿಳಿಸಿದ ಪೂರನ್
ಕೆಕೆಆರ್​ ಬೌಲರ್‌ಗಳ ಬೆವರಿಳಿಸಿದ ಪೂರನ್