Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾಸಕ ಎಂ.ಪಿ. ಕುಮಾರಸ್ವಾಮಿ ವಿರುದ್ಧ ಅಶ್ಲೀಲ ಪದ ಬಳಸಿದ ಶಾಸಕ ವೀರಣ್ಣ, ಆಡಿಯೋ ವೈರಲ್

ಕಲ್ಯಾಣ ಸಮಿತಿ ಅಧ್ಯಕ್ಷ ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಬಗ್ಗೆ ಬಾಗಲಕೋಟೆ ಬಿಜೆಪಿ ಶಾಸಕ ವೀರಣ್ಣ ಚರಂತಿಮಠ ಅಶ್ಲೀಲ ಪದ ಬಳಕೆ ಮಾಡಿದ್ದಾರೆ.

ಶಾಸಕ ಎಂ.ಪಿ. ಕುಮಾರಸ್ವಾಮಿ ವಿರುದ್ಧ ಅಶ್ಲೀಲ ಪದ ಬಳಸಿದ ಶಾಸಕ ವೀರಣ್ಣ, ಆಡಿಯೋ ವೈರಲ್
ಶಾಸಕ ಎಂ.ಪಿ. ಕುಮಾರಸ್ವಾಮಿ, ಶಾಸಕ ವೀರಣ್ಣ ಚರಂತಿಮಠ
Follow us
TV9 Web
| Updated By: ಆಯೇಷಾ ಬಾನು

Updated on:Oct 24, 2022 | 11:39 AM

ಬಾಗಲಕೋಟೆ: ರಾಜ್ಯದಲ್ಲಿ ಮೀಸಲಾತಿ ಹೋರಾಟದ ಪರ್ವಗಳೇ ಶುರುವಾಗಿವೆ. ಒಂದು ಕಡೆ ಪಂಚಮಸಾಲಿ 2ಎ ಮೀಸಲಾತಿಗಾಗಿ ನಿರಂತರ ಹೋರಾಟ ಶುರುವಾಗಿದೆ. ಎಸ್​ಎಸಿ ​ಎಸ್​ಟಿ ಮೀಸಲಾತಿಗಾಗಿ ನಿರಂತರ ಹೋರಾಟದ ಮಧ್ಯೆ ಸರಕಾರ ಮೀಸಲಾತಿ ಹೆಚ್ಚಿಸಿ ಎಸ್​ಸಿ ಎಸ್​ಟಿ ಜನರ ಮನಗೆದ್ದಿದೆ. ಈ ಮಧ್ಯೆ ಬೇಡ ಜಂಗಮ ಪ್ರಮಾಣ ಪತ್ರಕ್ಕಾಗಿ ರಾಜ್ಯದ ಜಂಗಮ ಸಮುದಾಯದವರು ನಿರಂತರ ಹೋರಾಟ ನಡೆಸುತ್ತಲೇ ಇದ್ದಾರೆ‌. ಬೇಡಜಂಗಮ ಜಾತಿ ಪ್ರಮಾಣಪತ್ರ ನಮ್ಮ ಹಕ್ಕು. ನಮಗೆ ಸರಕಾರ ಅದನ್ನು ನೀಡಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ.ಆದರೆ ಬೇಡ ಜಂಗಮ ಹೋರಾಟದ ಬಗ್ಗೆ ಮಾತಾಡುವ ಭರದಲ್ಲಿ ಬಾಗಲಕೋಟೆ ಬಿಜೆಪಿ ಶಾಸಕ ವೀರಣ್ಣ ಚರಂತಿಮಠ ತಮ್ಮ ಪಕ್ಷದ ಶಾಸಕ ಹಾಗೂ ಕಲ್ಯಾಣ ಸಮಿತಿ ಅದ್ಯಕ್ಷ ಎಂ.ಪಿ. ಕುಮಾರಸ್ವಾಮಿ ವಿರುದ್ದವೇ ನಾಲಿಗೆ ಹರಿಬಿಟ್ಟಿದ್ದಾರೆ.

ಕಲ್ಯಾಣಸಮಿತಿ ಅಧ್ಯಕ್ಷ ಹಾಗೂ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಬಗ್ಗೆ ಅಶ್ಲೀಲ ಪದ ಬಳಕೆ ಮಾಡಿದ್ದಾರೆ. ಆ ಲೋಪರ್ ಸೂ..ಮಗ ನನ್ನ ಭೇಟಿಯೇ ಆಗಿಲ್ಲ. ಸುಮ್ಮನೆ ನಾ‌ನು ಏನೋ ಹೇಳಿದ್ದೀನಿ ಅಂತ ಹೇಳಿದಾನಂತೆ ಎಂದು ಫೋನ್​ನಲ್ಲಿ ಮಾತಾಡಿದ್ದಾನೆ. ಕರ್ನಾಟಕ ಬೇಡ ಜಂಗಮ ಸಮಾಜ ಸಂಘಟನಾ ಕಾರ್ಯದರ್ಶಿ ರವಿ ಹಿರೆಮಠ ಎಂಬುವರ ಜೊತೆ ಮಾತಾಡುವಾಗ ಇಂತಹ ಅಶ್ಲೀಲ ಪದ ಬಳಸಿದ್ದಾರೆ. ತಮ್ಮದೇ ಪಕ್ಷದ ಶಾಸಕ ಕಲ್ಯಾಣ ಸಮಿತಿ ಅಧ್ಯಕ್ಷ ಎಂಪಿ ಕುಮಾರಸ್ವಾಮಿ ವಿರುದ್ಧ ಮಾತಾಡಿದ ಅಡಿಯೋ ಈಗ ವೈರಲ್ ಆಗಿದೆ. ಇದನ್ನೂ ಓದಿ: ಸಾವರ್ಕರ್ ಸಾಮ್ರಾಜ್ಯ ಕಾರ್ಯಕ್ರಮ: ವಾಹನಗಳ ಜಖಂ ಗೊಳಿಸಿದ ಆರೋಪದಡಿ ಮೃತ ಹರ್ಷ ಸಹೋದರಿ ಸೇರಿದಂತೆ 15 ಮಂದಿ ವಿರುದ್ಧ ಎಫ್​ಐಆರ್

ಇಲ್ಲಿ ಕುಮಾರಸ್ವಾಮಿ ಚರಂತಿಮಠ ಬಗ್ಗೆ ಯಾವ ವಿಚಾರವಾಗಿ ‌ಮಾತಾಡಿದ್ದಾರೆ, ಏನು ಮಾತಾಡಿದ್ದಾರೆ ಎಂಬ ಬಗ್ಗೆ ಸ್ಪಷ್ಟತೆ ಸದ್ಯಕ್ಕೆ ಸಿಕ್ಕಿಲ್ಲ ಆದರೆ ಒಬ್ಬ ಶಾಸಕನಾಗಿ ಇಂತಹ ಪದ ಬಳಸಿದ್ದು ವಿವಾದ ಸೃಷ್ಟಿ ಮಾಡಿದೆ.

ದಲಿತರ ಬಗ್ಗೆಯೂ ಹಗುರವಾಗಿ ಮಾತಾಡಿದ ಚರಂತಿಮಠ

ಇದೆ ವೇಳೆ ಮಾತನಾಡುವ ಬರದಲ್ಲಿ ದಲಿತರ ಬಗ್ಗೆಯೂ ವೀರಣ್ಣ ಚರಂತಿಮಠ ಹಗುರವಾಗಿ ಮಾತಾಡಿದ್ದಾರೆ.ಇದರಿಂದ ವೀರಣ್ಣ ಚರಂತಿಮಠ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶದ ಮಾತುಗಳು ಹರಿದಾಡುತ್ತಿವೆ. ಜಂಗಮರಿಗೆ ಬೇಡ ಜಂಗಮ ಪ್ರಮಾಣ ಪತ್ರ ನೀಡಬೇಕು ಅಂತ ನಾವು ರಾಜಕಾರಣಿಗಳು ಬಹಿರಂಗವಾಗಿ ಮಾತಾಡಿದ್ರೆ.ಈ ಎಸ್​ಸಿಗಳು ಮೈ ಮೇಲೆ ಬೀಳ್ತಾವೆ ಎಂದು ಹಗುರವಾಗಿ ಮಾತಾಡಿದ್ದಾರೆ. ಈ ಎಲ್ಲ ಅಡಿಯೊ ಇದೀಗ ಎಲ್ಲ ಕಡೆ ಹರಿದಾಡುತ್ತಿದೆ.

ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ವೀರಣ್ಣ ಚರಂತಿಮಠ ಬಗ್ಗೆ ಆಕ್ರೋಶ ಮೊಳಗಿದೆ. ಇನ್ನು ಶಾಸಕರ ಈ ಆಡಿಯೋ ಸಂಬಂಧ ಮಾತಾಡಿದ ಜಿಲ್ಲಾ ಕಾಂಗ್ರೆಸ್ ಎಸ್ಸಿ​ ವಿಭಾಗದ ಜಿಲ್ಲಾಧ್ಯಕ್ಷ ಮುಖಂಡ ರಾಜು ಮನ್ನಿಕೇರಿ, ಒಬ್ಬ ಶಾಸಕರಾಗಿ ಈ ರೀತಿ ಪದ ಬಳಸಿ ದಲಿತರ ಬಗ್ಗೆ ಹಗುರವಾಗಿ ಮಾತಾಡಿದ್ದು ಸರಿಯಲ್ಲ. ಕೂಡಲೆ ಅವರು ಬಹಿರಂಗ ಕ್ಷಮೆ ಕೇಳಬೇಕೆಂದು ಆಗ್ರಹ ಮಾಡಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್  ಮಾಡಿ

Published On - 11:17 am, Mon, 24 October 22