Bengaluru-Mysore Expressway Accident: ಮೊದಲ ಹಂತದ ಸಮೀಕ್ಷೆ ಪೂರ್ಣಗೊಳಿಸಿದ ಎನ್​ಹೆಚ್ಎ​ಐನ ವಿಶೇಷ ಸಮಿತಿ

ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​​ ವೇಯಲ್ಲಿ ಕಳೆದ ಮೂರು ತಿಂಗಳುಗಳಲ್ಲಿ ಸಂಭವಿಸಿದ ಅಪಘಾತಕ್ಕೆ ಕಾರಣವೇನೆಂದು ತಿಳಿಯಲು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ವಿಶೇಷ ಸಮಿತಿ ಸ್ಥಳಕ್ಕೆ ಭೇಟಿ ನೀಡಿ ಮೊದಲ ಹಂತದ ಸಮೀಕ್ಷೆಯನ್ನು ಪೂರ್ಣಗೊಳಿಸಿದೆ.

Bengaluru-Mysore Expressway Accident: ಮೊದಲ ಹಂತದ ಸಮೀಕ್ಷೆ ಪೂರ್ಣಗೊಳಿಸಿದ ಎನ್​ಹೆಚ್ಎ​ಐನ ವಿಶೇಷ ಸಮಿತಿ
ಬೆಂಗಳೂರು-ಮೈಸೂರು ಎಕ್ಸಪ್ರೆಸ್​ ವೇ
Follow us
ಸೈಯ್ಯದ್​ ನಿಜಾಮುದ್ದೀನ್​, ರಾಮನಗರ
| Updated By: ವಿವೇಕ ಬಿರಾದಾರ

Updated on: Jul 19, 2023 | 2:10 PM

ರಾಮನಗರ: ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​​ ವೇನಲ್ಲಿ (Bengaluru-Mysore Expressway) ಕಳೆದ ಮೂರು ತಿಂಗಳುಗಳಲ್ಲಿ ಸಂಭವಿಸಿದ ಅಪಘಾತಗಳಲ್ಲಿ (Accident) ನೂರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಹೆಚ್ಚಿನ ಅಪಘಾತಗಳು ರಾಮನಗರ (Ramnagar) ಮತ್ತು ಮಂಡ್ಯ (Mandya) ಜಿಲ್ಲಾಡಳಿತ ವ್ಯಾಪ್ತಿಯಲ್ಲಿ ಸಂಭವಿಸಿವೆ. ಈ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ (NHAI) ಮೂವರು ತಜ್ಞರನ್ನೊಳಗೊಂಡ ವಿಶೇಷ ಸಮಿತಿಯೊಂದನ್ನು ರಚನೆ ಮಾಡಿದೆ. ಇದೀಗ ಸಮಿತಿ ಮೊದಲ ಹಂತದ ಸಮೀಕ್ಷೆಯನ್ನು ಪೂರ್ಣಗೊಳಿಸಿದೆ.

ವಿಶೇಷ ಸಮಿತಿ ಅಪಘಾತದ ಸ್ಥಳ, ಸಾವು ನೋವು ಹೆಚ್ಚಾದ ಕಡೆ ಭೇಟಿ ನೀಡಿ ವಾಹನದ ವೇಗ, ಟೆಕ್ನಿಕಲ್ ರೀಸನ್, ರಸ್ತೆ ತಿರುವು, ರಸ್ತೆ ಅನುಪಾತ ಕುರಿತು ಗೌಪ್ಯವಾಗಿ ಮಾಹಿತಿಯನ್ನು ಸಂಗ್ರಹಿದೆ. ತಜ್ಞರ ತಂಡ ಪೊಲೀಸರು, ಸ್ಥಳೀಯರಿಂದ ಮಾಹಿತಿ ಸಂಗ್ರಹಿಸುತ್ತಿದೆ. ಒಟ್ಟು ಮೂರು ಹಂತಗಳಲ್ಲಿ ಪರಿಶೀಲನೆ ನಡೆಯಲಿದ್ದು, ಇಂದು (ಜು.19) ಎರಡನೇ ಹಂತದ ಪರಿಶೀಲನೆ ನಡೆಸುತ್ತಿದೆ.

ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ವೇನಲ್ಲಿ ಆತಂಕ ಸೃಷ್ಟಿಸಿದ ಕೆಎಸ್​ಆರ್​ಟಿಸಿ ಬಸ್, ವಿಡಿಯೋ ನೋಡಿ

ಎಕ್ಸ್​ಪ್ರೆಸ್​ ವೇ ಸುರಕ್ಷತೆ ಬಗ್ಗೆ ಪರಿಶೀಲನೆ ನಡೆಸಿ 10 ದಿನದೊಳಗೆ ವರದಿ ನೀಡುವಂತೆ ಸಮಿತಿಗೆ ಪ್ರಾಧಿಕಾರ ಸೂಚಿಸಿದೆ. ಅಲ್ಲದೇ ಕಳೆದ 9 ತಿಂಗಳಿನಲ್ಲಿ ಎಕ್ಸ್​ಪ್ರೆಸ್​ ಹೈವೇಯಲ್ಲಿ 550ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿವೆ. ಈ ಅಪಘಾತಗಳಲ್ಲಿ ಮೃತಪಟ್ಟವರ ಬಗ್ಗೆ ಮಾಹಿತಿ ನೀಡುವಂತೆಯೂ ಪ್ರಾಧಿಕಾರ ಆದೇಶಿಸಿದೆ.

ವೇಗದ ಚಾಲನೆ ಅಪಘಾತಕ್ಕೆ ಕಾರಣ

ಹೆದ್ದಾರಿಯಲ್ಲಿ ವೇಗವಾಗಿ ವಾಹನ ಬಂದಾಗ ಅಪಘಾತಗಳಾಗುತ್ತಿವೆ. ಮಾರ್ಚ್​ನಲ್ಲಿ 62 ಅಪಘಾತವಾಗಿದ್ದು, 20 ಜನ ಮೃತಪಟ್ಟಿದ್ದಾರೆ. 63 ಜನ ಗಾಯಗೊಂಡಿದ್ದಾರೆ. ಏಪ್ರಿಲ್​ನಲ್ಲಿ 23 ಜನ ಸಾವು, 83 ಗಾಯ. ಮೇ ತಿಂಗಳಲ್ಲಿ 29 ಸಾವು, 93 ಗಾಯ. ಜೂನ್ 28 ಸಾವು, 96 ಗಾಯ. ಮಾರ್ಚ್​​ನಿಂದ ಜೂನ್​ವರೆಗೆ ಒಟ್ಟು 100 ಸಾವು ಸಂಭವಿಸಿದ್ದು 335 ಜನರಿಗೆ ಗಾಯಗಳಾಗಿವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿಧಾನಸಭೆಯ ಅದಿವೇಶನದಲ್ಲಿ ತಿಳಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ