ರಾಮನಗರ: ಮಕ್ಕಳ ದಿನಾಚರಣೆಗೆ ಬಂಪರ್​ ಆಫರ್​; ವಂಡರ್ ಲಾ ವತಿಯಿಂದ ಉಚಿತ ಪಾಸ್

| Updated By: preethi shettigar

Updated on: Nov 12, 2021 | 8:08 AM

ನವೆಂಬರ್ 12 ರಿಂದ 14ರವರೆಗೂ ಈ ಆಫರ್ ಜಾರಿಯಲ್ಲಿದ್ದು, ತಮ್ಮ ಪೋಷಕರೊಂದಿಗೆ ಬರುವ ಒಂದು ಮಗುವಿಗೆ ಮಾತ್ರ ಈ ಕೊಡುಗೆ ಅನ್ವಯಿಸಲಿದೆ. ಮಕ್ಕಳ ದಿನವನ್ನು ಇನ್ನಷ್ಟು ಚೆಂದ ಗೊಳಿಸುವ ನಿಟ್ಟಿನಲ್ಲಿ ವಂಡರ್‌ ಲಾ ಈ ಕೊಡುಗೆ ನೀಡಿದೆ.

ರಾಮನಗರ: ಮಕ್ಕಳ ದಿನಾಚರಣೆಗೆ ಬಂಪರ್​ ಆಫರ್​; ವಂಡರ್ ಲಾ ವತಿಯಿಂದ ಉಚಿತ ಪಾಸ್
ವಂಡರ್​ಲಾ (ಸಂಗ್ರಹ ಚಿತ್ರ)
Follow us on

ರಾಮನಗರ: ಮಕ್ಕಳ ದಿನಾಚರಣೆ (children’s day 2021) ಪ್ರಯುಕ್ತವಾಗಿ ರಾಮನಗರ ತಾಲೂಕಿನ ಬಿಡದಿ ಸಮೀಪ ಇರುವ ವಂಡರ್‌ ಲಾ (wonderla) ಸಂಸ್ಥೆ ಮಕ್ಕಳಿಗೆ ಉಚಿತ ಟಿಕೆಟ್ ನೀಡುತ್ತಿದೆ. ನವೆಂಬರ್ 12 ರಿಂದ 14ರವರೆಗೂ ಈ ಆಫರ್ ಜಾರಿಯಲ್ಲಿದ್ದು, ತಮ್ಮ ಪೋಷಕರೊಂದಿಗೆ ಬರುವ ಒಂದು ಮಗುವಿಗೆ ಮಾತ್ರ ಈ ಕೊಡುಗೆ ಅನ್ವಯಿಸಲಿದೆ. ಮಕ್ಕಳ ದಿನವನ್ನು ಇನ್ನಷ್ಟು ಚೆಂದ ಗೊಳಿಸುವ ನಿಟ್ಟಿನಲ್ಲಿ ವಂಡರ್‌ ಲಾ ಈ ಕೊಡುಗೆ ನೀಡಿದೆ. ಇದಲ್ಲದೆ, ಮಕ್ಕಳಿಗಾಗಿ ಚಿತ್ರಕಲೆ, ಅಡುಗೆ ತಯಾರಿಸುವುದು, ಪೇಂಟಿಂಗ್ ಸೇರಿದಂತೆ ಇತರೆ ಚಟುವಟಿಕೆಯನ್ನು ವಂಡರ್‌ ಲಾದಲ್ಲಿ ಆಯೋಜಿಸಲಾಗಿದೆ.

ಈ ಚಟುವಟಿಕೆಯಲ್ಲಿ ಪಾಲ್ಗೊಂಡು ವಿಜೇತರಾಗುವ ಮಗುವಿಗೆ ಬಹುಮಾನ ಸಿಗಲಿದೆ. ಜೊತೆಗೆ ವಂಡರ್‌ ಲಾದಲ್ಲಿನ ವಿವಿಧ ರೀತಿಯ ಆಟಗಳು ಮಕ್ಕಳನ್ನು ಇನ್ನಷ್ಟು ಮನರಂಜಿಸಲಿವೆ. ಆನ್‌ಲೈನ್ ಹಾಗೂ ಆಫ್‌ಲೈನ್ ಬುಕ್ಕಿಂಗ್‌ಗೆ ಅವಕಾಶವಿದೆ. ಹೆಚ್ಚಿನ ವಿವರಗಳಿಗೆ https://www.wonderla.com ವೆಬ್‌ಸೈಟ್‌ಗೆ ಭೇಟಿ ನೀಡಿ ಅಥವಾ 080 37230333, 080 35073966 ಈ ಸಂಖ್ಯೆಗೆ ಕರೆ ಮಾಡಿ. ಆ ಮೂಲಕ ಈ ಬಾರಿಯ ಮಕ್ಕಳ ದಿನಾಚರಣೆಯನ್ನು ಹೆಚ್ಚು ಉತ್ಸಾಹಕತೆಯಿಂದ ಆಚರಿಸಬಹುದು.

ವರದಿ: ಪ್ರಶಾಂತ್ ಹುಲಿಕೆರೆ

ಇದನ್ನೂ ಓದಿ:
SBI Card Dumdar Dus Offer: ಎಸ್​ಬಿಐ ಕಾರ್ಡ್​ನಿಂದ ಆನ್​ಲೈನ್​ ಶಾಪಿಂಗ್​ಗೆ ಆಫರ್​ ಘೋಷಣೆ; ಅಕ್ಟೋಬರ್ 3ರಿಂದ ಶುರು

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ; ಪ್ರಧಾನಿ ನರೇಂದ್ರ ಮೋದಿ ಸಹಿತ ಗಣ್ಯರಿಂದ ಶುಭಾಶಯ