ರಾಮನಗರ: ಚುನಾವಣೆ ಹತ್ತಿರ ಬರುತ್ತಿದ್ದಂತೆ ಒಬ್ಬರ ಮೇಲೊಬ್ಬರು ಕಿಡಿಕಾರುತ್ತಿದ್ದಾರೆ. ಜಿಲ್ಲೆಯ ಚನ್ನಪಟ್ಟಣದ ಬಮೂಲ್ ಕಚೇರಿಯಲ್ಲಿ ಕುರ್ಚಿಯಲ್ಲಿ ಕುಳಿತುಕೊಳ್ಳುವ ವಿಚಾರಕ್ಕೆ ಸರ್ಕಾರದ ನಾಮನಿರ್ದೇಶಿತ ನಿರ್ದೇಶಕ ಎಸ್.ಲಿಂಗೇಶ್ ಕುಮಾರ್ ಹಾಗೂ ಬಮೂಲ್ ನಿರ್ದೇಶಕ ಜಯಮುತ್ತು ಮಧ್ಯೆ ಗಲಾಟೆಯಾಗಿದೆ. ಕುರ್ಚಿ ಮೇಲೆ ಕುಳಿತುಕೊಳ್ಳಲು ಮುಂದಾದ ಉಪ ವ್ಯವಸ್ಥಾಪಕ ಹೇಮಂತ್ನನ್ನ ಜೆಡಿಎಸ್‌ನ ಜಯಮುತ್ತು ಬೆಂಬಲಿಗರು ಅಡ್ಡಿಪಡಿಸಿದ್ದಾರೆ. ಜೆಡಿಎಸ್ ಬೆಂಬಲಿಗರ ಈ ನಡೆಗೆ ಬಿಜೆಪಿಯ ಲಿಂಗೇಶ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವೇಳೆ ಉಭಯ ನಾಯಕರ ಬೆಂಬಲಿಗರ ನಡುವೆ ವಾಗ್ವಾದ ಉಂಟಾಗಿದ್ದು ಕೈ ಕೈ ಮೀಲಾಯಿಸುವ ಹಂತಕ್ಕೆ ಹೋಗಿದೆ.
ಜಿಲ್ಲೆಯಲ್ಲಿ ಪ್ರಬಲ ಜೆಡಿಎಸ್ ಮಣಿಸಲು ಅಶೋಕ್‌ಗೆ ಸಾಧ್ಯವಿಲ್ಲ; ಸ್ಥಳೀಯ ಬಿಜೆಪಿ ಮುಖಂಡರು
ಮಂಡ್ಯ: ವಿಧಾನಸಭೆ ಚುನಾವಣೆ ಇನ್ನೇನು ಕೆಲವೇ ತಿಂಗಳು ಬಾಕಿ ಇದ್ದು, ಉಭಯ ಪಕ್ಷಗಳು ರಾಜಕೀಯ ತಂತ್ರಗಾರಿಕೆ ಶುರು ಮಾಡಿವೆ. ಜಿಲ್ಲೆಯಲ್ಲಿ ಪ್ರಬಲ ಜೆಡಿಎಸ್ ಮಣಿಸಲು ಅಶೋಕ್‌ಗೆ ಸಾಧ್ಯವಿಲ್ಲ. ಮಂಡ್ಯ ರಾಜಕಾರಣದ ಬಗ್ಗೆ ಅಶೋಕ್‌ಗೆ ಸಂಪೂರ್ಣ ಮಾಹಿತಿ ಇಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇರುವ 7 ಕ್ಷೇತ್ರಗಳಲ್ಲಿಯೂ ಜೆಡಿಎಸ್ ವಿಜಯ ಶಾಲಿಯಾಗಿತ್ತು. ಮಂಡ್ಯ ಜೆಡಿಎಸ್‌ನ ಭದ್ರ ಕೋಟೆಯಾಗಿದೆ. ಇಲ್ಲಿ ಅಶೋಕ್ ಗೆಲ್ಲುವುದು ಕಷ್ಟ ಎಂದು ಸ್ಥಳೀಯ ಬಿಜೆಪಿಗರು ಹೇಳುತ್ತಿದ್ದಾರೆ.
ಹಿಂದೆ ಅಪರೇಷನ್ ಕಮಲದಿಂದ ನಾರಾಯಣಗೌಡರು ಬಿಜೆಪಿಗೆ ಬಂದಿದ್ದರು. ಇದರಿಂದ ಉಪಚುನಾವಣೆಯಲ್ಲಿ ನಾರಾಯಣಗೌಡರಿಂದ 1 ಕ್ಷೇತ್ರದಲ್ಲಿ ಜಯಸಾಧಿಸಿದ್ದರು. ಈ ಭಾರಿ ಕನಿಷ್ಠ 4 ಸ್ಥಾನವಾದ್ರು ಮಂಡ್ಯದಲ್ಲಿ ಗೆಲುವು ಸಾಧಿಸಬೇಕೆಂಬ ಗುರಿಯಿದ್ದು, ಅಶೋಕ್ ಉಸ್ತುವಾರಿಯಾದ್ರೆ ಜೆಡಿಎಸ್ ಮಣಿಸಲು ಕಷ್ಟವಾಗುತ್ತೆ. ದೇವೇಗೌಡರ ಫ್ಯಾಮಿಲಿ ಜೊತೆ ಚೆನ್ನಾಗಿರುವ ಕಾರಣ ಇದು ನಡೆಯಲ್ಲ. ಅಲ್ಲದೆ ಗೋಪಾಲಯ್ಯ ಜೆಡಿಎಸ್‌ನಲ್ಲಿ ಇದ್ದು ಬಂದವರು ಅವರು ಜೆಡಿಎಸ್ ಬಗ್ಗೆ ಚೆನ್ನಾಗಿ ಬಲ್ಲವರು. ಜೆಡಿಎಸ್ ಪಕ್ಷದ ಹಾಗೂ ನಾಯಕರ ಜೊತೆ ಹೊಂದಾಣಿಕೆ ರಾಜಕಾರಣ ಮಾಡ್ತಾರೆಂಬ ಮಾತುಗಳು ಕೇಳಿಬಂದಿತ್ತಾದರೂ ಗೋಪಾಲಯ್ಯ ಬಿಜೆಪಿಯಲ್ಲಿ ಆಕ್ಟೀವ್ ಆಗಿದ್ರು ಹೀಗಾಗಿ ಜೆಡಿಎಸ್ ನಾಯಕರ ತಂತ್ರಗಾರಿಕೆ ಒಳ ಮರ್ಮವನ್ನ ಗೋಪಾಲಯ್ಯ ಬಲ್ಲವರಾಗಿದ್ದಾರೆ. ಇದರಿಂದ ಅಶೋಕ್ ಬೇಡ ಎಂದು ಸ್ಥಳೀಯ ಬಿಜೆಪಿ ಮುಖಂಡರು ಹೇಳುತ್ತಿದ್ದಾರೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ