AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮನಗರದಲ್ಲಿ ಇಬ್ಬರಿಗೆ ಹೃದಯಾಘಾತ, ಚೇರಿನಲ್ಲಿ ಕುಳಿತಲ್ಲೇ ಅಟೆಂಡರ್ ಸಾವು, ಎಲೆಕ್ಷನ್​ ಕರ್ತವ್ಯದಲ್ಲಿದ್ದ ಅಧಿಕಾರಿಗೆ ಆರ್ಟ್​ ಅಟ್ಯಾಕ್

ರಾಮನಗರದಲ್ಲಿ ಇಬ್ಬರಿಗೆ ಹೃದಯಾಘಾತವಾಗಿದ್ದು, ಓರ್ವ ಕೋರ್ಟ್ ಅಟೆಂಡರ್ ಚೇರಿನಲ್ಲಿ ಕುಳಿತುಕೊಂಡಲ್ಲೇ ಜೀವ ಬಿಟ್ಟರೆ, ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಕರ್ತವ್ಯದಲ್ಲಿ ಪಶು ವೈದ್ಯಕೀಯ ಸಹಾಯಕ ನಿರ್ದೇಶಕರಿಗೆ ಹೃದಯಾಘಾತವಾಗಿದೆ.

ರಾಮನಗರದಲ್ಲಿ ಇಬ್ಬರಿಗೆ ಹೃದಯಾಘಾತ, ಚೇರಿನಲ್ಲಿ ಕುಳಿತಲ್ಲೇ ಅಟೆಂಡರ್ ಸಾವು, ಎಲೆಕ್ಷನ್​ ಕರ್ತವ್ಯದಲ್ಲಿದ್ದ ಅಧಿಕಾರಿಗೆ ಆರ್ಟ್​ ಅಟ್ಯಾಕ್
ಮೃತ ದುರ್ವೈವಿಗಳು
ಸೈಯ್ಯದ್​ ನಿಜಾಮುದ್ದೀನ್​, ರಾಮನಗರ
| Edited By: |

Updated on:Aug 11, 2023 | 5:08 PM

Share

ರಾಮನಗರ, (ಆಗಸ್ಟ್ 11): ಹೃದಯಾಘಾತಕ್ಕೆ (Heart Attack) ಬಲಿಯಾಗುತ್ತಿರುವವ ಸಂಖ್ಯೆ ತುಂಬಾ ದೊಡ್ಡದಾಗಿ ಬಿಟ್ಟಿದೆ. ಚಿಕ್ಕವರಿನಿಂದ ಹಿಡಿದು ವಯಸ್ಸಾದವರಿಗೂ ಹೃದಯಾಘಾತ ಹೆಚ್ಚಾಗುತ್ತಿದೆ. ಅದರಲ್ಲೂ ಕೊರೋನಾ ಬಳಿಕ ಈ ಆರ್ಟ್​ ಅಟ್ಯಾಕ್ ಪ್ರಕರಣ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿವೆಂತೆ. ಹೌದು….ರಾಯಚೂರಿನಲ್ಲಿ(Raichur) ಪೊಲೀಸ್ ಕಾನ್ಸ್​ಟೇಬಲ್​ ರಾತ್ರಿ ಮಲಗಿದ್ದಲ್ಲೇ ಮೃತಟ್ಟಿದ್ದಾರೆ. ಇದರ ಬೆನ್ನಲ್ಲೇ ಇಂದು ರಾಮನಗರದಲ್ಲಿ(Ramanagara) ಇಬ್ಬರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ರಾಮನಗರದ ಕೋರ್ಟ್ ಆವರಣದಲ್ಲಿ 36 ವರ್ಷದ ಅಟೆಂಡರ್ ಕುಳಿತ ಭಂಗಿಯಲ್ಲೇ ಮೃತಪಟ್ಟಿದ್ದರೆ, ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಮಾಡಬಾಳು ಗ್ರಾಮ ಒಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಪ್ರತಿಕ್ರಿಯೆ ನಡೆಸುತ್ತಿದ್ದ ಪಶು ವೈದ್ಯಕೀಯ ಸಹಾಯಕ ನಿರ್ದೇಶಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ರಾಯಚೂರು: ರಾತ್ರಿ ಮಲಗಿದ್ದಲ್ಲೇ ಕೊನೆಯುಸಿರೆಳೆದ ಪೊಲೀಸ್ ಕಾನ್ಸ್​ಟೇಬಲ್, ಅಯ್ಯೋ ವಿಧಿಯೇ ಇದೆಂಥಾ ಸಾವು…!

ರಾಮನಗರ ಪಟ್ಟಣದ ಜಿಲ್ಲಾ‌ಮತ್ತು ಸತ್ರ ನ್ಯಾಯಲಯದಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದ ಮಧು, ಕೋರ್ಟ್ ಆವರಣದಲ್ಲಿಯೇ ಸಾವನ್ನಪ್ಪಿದ್ದಾರೆ. ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಬೂದನಗುಪ್ಪೆ ಗ್ರಾಮದ ನಿವಾಸಿ 36 ವರ್ಷದ ಮಧು ಚೇರ್​ನಲ್ಲಿ ಕುಳಿತಲ್ಲೇ ಕೊನೆಯುಸಿರೆಳೆದಿದ್ದಾರೆ. ನಿನ್ನೆ (ಆಗಸ್ಟ್ 10) ರಾತ್ರಿ 9 ಗಂಟೆಗೆ ಕುಟುಂಬಸ್ಥರಿಗೆ ಕರೆ ಮಾಡಿ ಮಾತನಾಡಿದ್ದ ಮಧು, ಬೆಳಗಾಗುವುದರೊಳಗೆ ಇಲ್ಲ. ಇನ್ನು ಸ್ಥಳಕ್ಕೆ ರಾಮನಗರದ ಐಜೂರು ಠಾಣೆ ಪೊಲೀಸರ ಭೇಟಿ, ಪರಿಶೀಲನೆ ನಡೆಸಿದರು.

ಹೃದಯಾಘಾತದಿಂದ ಪಶು ವೈದ್ಯಕೀಯ ಸಹಾಯಕ ನಿರ್ದೇಶಕ ಸಾವು

ಇನ್ನು ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಮಾಡಬಾಳು ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಕರ್ತವ್ಯದಲ್ಲಿದ್ದ ಪಶು ವೈದ್ಯಕೀಯ ಸಹಾಯಕ ನಿರ್ದೇಶಕರಿಗೆ ಹೃದಯಾಘಾತವಾಗಿದ್ದು, ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಬಾಬುಗೌಡ(54) ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಕೌಟುಂಬಿಕ ಕಲಹ, ಮಕ್ಕಳಿಗೆ ವಿಷ ಉಣಿಸಿದ ತಂದೆ: ಜೀವನ್ಮರಣ ಹೋರಾಟ ನಡೆಸುತ್ತಿರುವ ಪುಟ್ಟ ಕಂದಮ್ಮಗಳು

2 ದಿನದ ಹಿಂದ ಮಾಡಬಾಳು ಗ್ರಾ,ಮ ಪಂಚಾಯಿತಿ ಕಚೇರಿಯಲ್ಲಿ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವ ವೇಳೆ ಹೃದಯಾಘಾತವಾಗಿತ್ತು. ಕೂಡಲೇ ಅವರನ್ನು ಬೆಂಗಳೂರಿನ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಇಂದು (ಆಗಸ್ಟ್ 11) ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

ಇನ್ನಷ್ಟು ರಾಮನಗರ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 4:51 pm, Fri, 11 August 23