ಸಿಪಿ ಯೋಗೇಶ್ವರ್ ಭಾವ ಮಹಾದೇವಯ್ಯ ಕೊಲೆ ಪ್ರಕರಣ; ಆರೋಪಿ ಬಂಧನ

| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 27, 2023 | 7:33 PM

ಬಿಜೆಪಿ ಎಂಎಲ್​ಸಿ ಸಿಪಿ ಯೋಗೇಶ್ವರ್(CP Yogeshwar) ಭಾವ ಮಹದೇವಯ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚನ್ನಪಟ್ಟಣ(Channapatana) ಗ್ರಾಮಾಂತರ ಪೊಲೀಸರು ಕೇಸ್​ನ ಮೂರನೇ ಆರೋಪಿಯಾದ ತಮಿಳುನಾಡಿನ ಧರ್ಮಪುರಿ ಮೂಲದ ಮಧನ್ ಕುಮಾರ್(33) ಎಂಬಾತನನ್ನು ಬಂಧಿಸಿದ್ದಾರೆ.

ಸಿಪಿ ಯೋಗೇಶ್ವರ್ ಭಾವ ಮಹಾದೇವಯ್ಯ ಕೊಲೆ ಪ್ರಕರಣ; ಆರೋಪಿ ಬಂಧನ
ಸಿಪಿ ಯೋಗೇಶ್ವರ್​ ಭಾವ ಕೊಲೆ ಪ್ರಕರಣ
Follow us on

ರಾಮನಗರ, ಡಿ.27: ಬಿಜೆಪಿ ಎಂಎಲ್​ಸಿ ಸಿಪಿ ಯೋಗೇಶ್ವರ್(CP Yogeshwar) ಭಾವ ಮಹದೇವಯ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚನ್ನಪಟ್ಟಣ(Channapatana) ಗ್ರಾಮಾಂತರ ಪೊಲೀಸರು ಕೇಸ್​ನ ಮೂರನೇ ಆರೋಪಿಯಾದ ತಮಿಳುನಾಡಿನ ಧರ್ಮಪುರಿ ಮೂಲದ ಮಧನ್ ಕುಮಾರ್(33) ಎಂಬಾತನನ್ನು ಬಂಧಿಸಿದ್ದಾರೆ. ಇನ್ನು ಈ ಬಂಧಿತ ಮಧನ್ ಕುಮಾರ್, 2 ನೇ ಆರೋಪಿ ಆಗಿರುವ ಪ್ರಭಾಕರ್ ಸ್ನೇಹಿತನಾಗಿದ್ದು, ಕೊಲೆ ಪ್ರಕರಣದಲ್ಲಿ‌ ಭಾಗಿ‌‌ಯಾದ ಆರೋಪ ಕೇಳಿಬಂದಿತ್ತು.

ಘಟನೆ ವಿವರ

ಇದೇ ಡಿಸೆಂಬರ್ 2ನೇ ತಾರೀಖು ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಚೆಕ್ಕೆರೆ ಗ್ರಾಮದ ತೋಟದ ಮನೆಯಿಂದ ಮಹದೇವಯ್ಯ ಏಕಾಏಕಿ ನಾಪತ್ತೆಯಾಗಿದ್ದರು. ಈ ಹಿನ್ನಲೆ ಮಹದೇವಯ್ಯ ಪತ್ತೆಗೆ ಪೊಲೀಸರು ನಾಲ್ಕು ವಿಶೇಷ ತಂಡಗಳನ್ನು ರಚನೆ ಮಾಡಿದ್ದರು. ಬಳಿಕ ಡಿಸೆಂಬರ್ 3 ರಂದು ಆತನ ಕಾರು ಹನೂರು ತಾಲೂಕಿನ ರಾಮಾಪುರದಲ್ಲಿ ಪತ್ತೆಯಾಗಿತ್ತು. ಹೀಗಾಗಿ ಪೊಲೀಸರು ಶೋಧಕಾರ್ಯವನ್ನು ಮತ್ತಷ್ಟು ಚುರುಕುಗೊಳಿಸಿದ್ದರು. ನಂತರ ಚಾಮರಾಜನಗರ  ಜಿಲ್ಲೆಯ ಹನೂರು ತಾಲೂಕಿನ ರಾಮಾಪುರ ಬಳಿ ನಿರ್ಜನ ಪ್ರದೇಶದಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಮಹದೇವಯ್ಯನವರ ಮೃತದೇಹ ಪತ್ತೆಯಾಗಿತ್ತು.

ಇದನ್ನೂ ಓದಿ:ಸಿಪಿ ಯೋಗೇಶ್ವರ್ ಸಂಬಂಧಿ ರಿಯಲ್ಟರ್ ಮಹದೇವಯ್ಯ ಹತ್ಯೆಗೆ ಸುಪಾರಿ ನೀಡಲಾಗಿತ್ತೇ?

ಅಕ್ರಮ ಸಂಬಂಧದ ಆಯಾಮದಲ್ಲಿ ತೀವ್ರಗೊಂಡಿದ್ದ ಪೊಲೀಸರ ತನಿಖೆ

ಇನ್ನು ಈ ಕೇಸ್​ಗೆ ಸಂಬಂಧಪಟ್ಟಂತೆ ಬೆಂಗಳೂರಿನ ದೀಪಾಂಜಲಿ ನಗರದ ಓರ್ವ ಮಹಿಳೆ‌ಯ ಲಿಂಕ್ ಇರುವ ಬಗ್ಗೆ ಅನುಮಾನ ಬಂದಿತ್ತು. ಆ ನಿಟ್ಟಿನಲ್ಲಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದರು. ಮಹಾದೇವಯ್ಯ ಹಾಗೂ ಆ ಮಹಿಳೆ ಹಲವು ಬಾರಿ ಭೇಟಿಯಾಗಿದ್ದು, ಆಗಾಗ ಚನ್ನಪಟ್ಟಣದ ಫಾರ್ಮ್ ಹೌಸ್​ಗೆ ಬರುತ್ತಿದ್ದರು ಎಂಬುದಾಗಿ ಮಾಹಿತಿ ದೊರೆತಿದೆ. ಮೃತ ಮಹಾದೇವಯ್ಯ, ಚನ್ನಪಟ್ಟಣ ಬಸ್ ನಿಲ್ದಾಣದಿಂದ ತೋಟದಲ್ಲಿ ಕೆಲಸ ಮಾಡುವವರನ್ನು ಕರೆದುಕೊಂಡು ಬರುತ್ತಿದ್ದರಂತೆ. ಈ ಹಿನ್ನಲೆ ಆ ಮಹಿಳೆ ಜೊತೆ ಅಕ್ರಮ ಸಂಬಂಧ ಏನಾದರೂ ಇದೆಯಾ ಎಂಬ ಆಯಾಮದಲ್ಲಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ