ಡಿಸಿಎಂ ಡಿಕೆ ಶಿವಕುಮಾರ್ ಕ್ಷೇತ್ರದಲ್ಲೇ ಸ್ಮಶಾನ ಇಲ್ಲದೇ ಶವಸಂಸ್ಕಾರಕ್ಕೆ ಪರದಾಟ

| Updated By: ಕಿರಣ್ ಹನುಮಂತ್​ ಮಾದಾರ್

Updated on: May 09, 2024 | 11:01 PM

ರಾಮನಗರ ಜಿಲ್ಲೆಯ ಕನಕಪುರ(Kanakapura) ತಾಲೂಕಿನ ಕುರುಬಹಳ್ಳಿಯಲ್ಲಿ ವಯೋ ಸಹಜ ಕಾಯಿಲೆಯಿಂದ ವೃದ್ಧ ಚಂದ್ರಪ್ಪ(60) ಎಂಬುವವರು ಮೃತಪಟ್ಟಿದ್ದರು. ಆದರೆ, ಶವಸಂಸ್ಕಾರಕ್ಕೆ ಜಾಗ ಸಿಗದೆ ಕುಟುಂಬಸ್ಥರು ಶವದ ಜೊತೆ ಪರದಾಡುವಂತಾಗಿದೆ. ಡಿಸಿಎಂ ಡಿ.ಕೆ ಶಿವಕುಮಾರ್(DK Shivakumar) ಕ್ಷೇತ್ರದಲ್ಲೇ ಇಂತಹ ಘಟನೆ ನಡೆದರೆ ರಾಜ್ಯದ ಸ್ಥಿತಿ ಹೇಗೆ ಎಂಬಂತಾಗಿದೆ.

ಡಿಸಿಎಂ ಡಿಕೆ ಶಿವಕುಮಾರ್ ಕ್ಷೇತ್ರದಲ್ಲೇ ಸ್ಮಶಾನ ಇಲ್ಲದೇ ಶವಸಂಸ್ಕಾರಕ್ಕೆ ಪರದಾಟ
ಸ್ಮಶಾನ ಇಲ್ಲದೇ ಶವಸಂಸ್ಕಾರಕ್ಕೆ ಪರದಾಟ
Follow us on

ರಾಮನಗರ, ಮೇ.09: ಡಿಸಿಎಂ ಡಿ.ಕೆ ಶಿವಕುಮಾರ್(DK Shivakumar) ಕ್ಷೇತ್ರದಲ್ಲೇ ಗ್ರಾಮಸ್ಥರು ಶವಸಂಸ್ಕಾರಕ್ಕೆ ಪರದಾಟ ನಡೆಸುವ ಸ್ಥಿತಿ ಎದುರಾಗಿದೆ. ಹೌದು, ರಾಮನಗರ ಜಿಲ್ಲೆಯ ಕನಕಪುರ(Kanakapura) ತಾಲೂಕಿನ ಕುರುಬಹಳ್ಳಿಯಲ್ಲಿ ವಯೋ ಸಹಜ ಕಾಯಿಲೆಯಿಂದ ವೃದ್ಧ ಚಂದ್ರಪ್ಪ(60) ಎಂಬುವವರು ಮೃತಪಟ್ಟಿದ್ದರು. ಆದರೆ, ಶವಸಂಸ್ಕಾರಕ್ಕೆ ಜಾಗ ಸಿಗದೆ ಕುಟುಂಬಸ್ಥರು ಶವದ ಜೊತೆ ಪರದಾಡುವಂತಾಗಿದೆ.

ಶವ ಹೂಳಲು ಜಾಗಬೇಕೆಂದು ತಹಶೀಲ್ದಾರ್ ಕಚೇರಿಗೆ ತೆರಳಿದ ಗ್ರಾಮಸ್ಥರು

ನಿನ್ನೆ ಬೆಳಗಿನ ಜಾವ ಸಾವಾಗಿತ್ತು. ಶವ ಹೂಳಲು ಜಾಗ ಬೇಕು ಎಂದು ಗ್ರಾಮಸ್ಥರು ಕನಕಪುರ ತಹಸೀಲ್ದಾರ್ ಕಚೇರಿ ತೆರಳಿದ್ದರು. ಈ ವೇಳೆ ರಾತ್ರಿ‌ 8 ಗಂಟೆಗೆ ಕುರುಬಹಳ್ಳಿ ಹೊರವಲಯದಲ್ಲಿ ಡೆಪ್ಯೂಟಿ ತಹಸೀಲ್ದಾರ್ ಜಾಗ ಸೂಚಿಸಿದ್ದರು. ಆದರೆ, ಸೂಚಿಸಿದ ಜಾಗದಲ್ಲಿ ಬಂಡೆ ಇದ್ದ ಕಾರಣ ಹೂಳಲು ಆಗದ ಪರಿಸ್ಥಿತಿ ಎದುರಾಗಿದೆ. ಆದರೂ ಅಧಿಕಾರಿಗಳು ಅದೇ ಜಾಗದಲ್ಲಿ ಶವಸಂಸ್ಕಾರ ಮಾಡಿ ಎಂದಿದ್ದಾರೆ. ಈ ಹಿನ್ನಲೆ ಅಧಿಕಾರಿಗಳ ವಿರುದ್ದ ಸಿಡಿದೆದ್ದ ಗ್ರಾಮಸ್ಥರು, ಶವವನ್ನು ತಹಶೀಲ್ದಾರ್ ಕಚೇರಿ ಬಳಿ ಹೂಳುತ್ತೇವೆ ಎಂದು ತೆರಳಿದ್ದು, ಅಧಿಕಾರಿಗಳ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ.

ಇದನ್ನೂ ಓದಿ:ಕಲಬುರಗಿ: ಶವಸಂಸ್ಕಾರಕ್ಕೆ ಜಾಗವಿಲ್ಲದೆ ಕುಟುಂಬಸ್ಥರ ಪರದಾಟ; ಮನೆ ಮುಂದೆ ಶವ ಇಟ್ಟುಕೊಂಡು ಕುಳಿತುಕೊಳ್ಳಬೇಕಾದ ಸ್ಥಿತಿ

ಬೈಕ್​ಗೆ ಕಾರು ಡಿಕ್ಕಿ; ಸವಾರ ಸ್ಥಳದಲ್ಲೇ ಸಾವು

ದಾವಣಗೆರೆ: ನಗರದ ಆಂಜನೇಯ ಬಡಾವಣೆಯಲ್ಲಿ ಕಾರು ಡಿಕ್ಕಿ-ಬೈಕ್​ ಸವಾರ, ಕೈಗಾರಿಕಾ ಬಡಾವಣೆ ನಿವಾಸಿ ಸಾದತ್(36) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ಬಳಿಕ ಫಾರ್ಚೂನರ್ ಕಾರು ಸಮೇತ ಚಾಲಕ ಪರಾರಿಯಾಗಿದ್ದು, ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿ, ಕಾರಿನ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:59 pm, Thu, 9 May 24