ರಾಮನಗರ, ಮಾ.16: ರಾಮನಗರ ಜಿಲ್ಲಾ ಕಾರಗೃಹ ಸ್ಥಳಾಂತರ ಮಾಡಲು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್ಗೆ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಪಕ್ಕದಲ್ಲಿರುವ ಜಿಲ್ಲಾ ಕಾರಗೃಹಕ್ಕೆ ಸೇರಿದ ಜಾಗವನ್ನ ಇತರ ಅಭಿವೃದ್ಧಿ ಕಾರ್ಯಕ್ಕೆ ಬಳಸಲು ಮತ್ತು ರಾಮನಗರ-ಚನ್ನಪಟ್ಟಣ ಮಧ್ಯೆ ನೂತನ ಕಾರಗೃಹ ನಿರ್ಮಾಣಕ್ಕೆ ಸೂಚಿಸಿದ್ದಾರೆ.
ಕೂಡಲೇ ಕಾರಗೃಹ ಬೇರೆಡೆ ಶಿಫ್ಟ್ ಮಾಡುವ ಉದ್ದೇಶದ ಹಿನ್ನಲೆ ಜಾಗಕ್ಕಾಗಿ ಹುಡುಕಾಟ ನಡೆಸಿದ್ದಾರೆ. 4 ರಿಂದ 5 ಎಕರೆ ಜಾಗ ಸಿಕ್ಕ ಬಳಿಕ ರಾಮನಗರ ಕಾರಗೃಹ ಶಿಫ್ಟ್ ಆಗಲಿದೆ. ಇನ್ನು 2007ರಲ್ಲಿ ನಿರ್ಮಾಣವಾಗಿರುವ ರಾಮನಗರ ಬಂಧಿಖಾನೆಯಲ್ಲಿ ಬರೊಬ್ಬರಿ 300ಕ್ಕೂ ಅಧಿಕ ಖೈದಿಗಳಿದ್ದಾರೆ. ಈ ಖೈದಿಗಳ ಸಂಖ್ಯೆ ಹೆಚ್ಚಳ ಹಿನ್ನೆಲೆ ಜೈಲಿನ ಅಧಿಕಾರಿಗಳು ಕೂಡ ಜೈಲು ಶಿಫ್ಟ್ ಮಾಡುವಂತೆ ಮನವಿ ಸಲ್ಲಿಸಿದ್ದರು. ಅದರಂತೆ ಇದೀಗ ಡಿಸಿಎಂ ಕೂಡ ಇದಕ್ಕೆ ಅಸ್ತು ಎಂದಿದ್ದು, ಸಾಮಾನ್ಯ ಜೈಲಿನಿಂದ ಸೆಂಟ್ರಲ್ ಜೈಲ್ ಮಾಡಲು ಜಾಗಕ್ಕಾಗಿ ಹುಡುಕಾಟ ನಡೆದಿದೆ.
ಬೆಂಗಳೂರು: ಫುಟ್ಪಾತ್ನಲ್ಲಿ ನಿಂತಿದ್ದ ತಳ್ಳುವ ಗಾಡಿಯಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಆರಿಸುವುದಕ್ಕೆ ಹೋಗಿ ಸವಾರ ಮೈಕೈ ಸುಟ್ಟುಕೊಂಡಿರುವ ಘಟನೆ ಬಾಗಲೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗಾಯಗೊಂಡ ಶೇಕ್ ನವೀದ್ ಎಂಬುವವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಬೆಳ್ಳಹಳ್ಳಿ ಜಂಕ್ಷನ್ ಕಡೆಯಿಂದ ಹೆಗಡೆ ನಗರ ಕಡೆ ಬೈಕ್ನಲ್ಲಿ ಹೋಗ್ತಿದ್ದ ನವೀದ್,
ಈ ವೇಳೆ ಫುಟ್ ಪಾತ್ನಲ್ಲಿದ್ದ ತಳ್ಳೋಗಾಡಿಯೊಂದರಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಅದನ್ನು ಆರಿಸೋಕೆ ಮುಂದಾಗಿದ್ದ ವೇಳೆ ಅವಘಡ ಸಂಭವಿಸಿದೆ. ಈ ಕುರಿತು ಬಾಗಲೂರು ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:53 pm, Sat, 16 March 24