ಕಾಂಗ್ರೆಸ್ ಶಾಸಕ ಬಾಲಕೃಷ್ಣರದ್ದು ಬಡವರ ರಕ್ತದ ಕಣ್ಣೀರಿನ ರೆಡ್ಕಾಲರ್: ಮುನಿರತ್ನ ವಾಗ್ದಾಳಿ
ರಾಮನಗರದಲ್ಲಿ ಮಾತನಾಡಿದ ಮಾಗಡಿ ಕಾಂಗ್ರೆಸ್ ಶಾಸಕ ಹೆಚ್ಸಿ ಬಾಲಕೃಷ್ಣ ಅವರು, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಅವರನ್ನು ವೈಟ್ ಕಾಲರ್ ಎಂದು ಟೀಕಿಸಿದರು. ಇದಕ್ಕೆ ತಿರುಗೇಟು ಕೊಟ್ಟ ಬಿಜೆಪಿ ಶಾಸಕ ಮುನಿರತ್ನ, ಬಾಲಕೃಷ್ಣ ಅವರದ್ದು ಬಡವರ ರಕ್ತದ ಕಣ್ಣೀರಿನ ರೆಡ್ಕಾಲರ್ ಎಂದಿದ್ದಾರೆ.
ರಾಮನಗರ, ಮಾ.17: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ (DK Suresh) ವಿರುದ್ಧ ಕಣಕ್ಕಿಳಿದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ (Dr.C.N.Manjunath) ಅವರನ್ನು ವೈಟ್ ಕಾಲರ್ ಎಂದು ಮಾಗಡಿ ಕಾಂಗ್ರೆಸ್ ಶಾಸಕ ಹೆಚ್ಸಿ ಬಾಲಕೃಷ್ಣ (HC Balakrishna) ಟೀಕಿಸಿದ್ದಾರೆ. ಇದಕ್ಕೆ ಬಿಜೆಪಿ ಶಾಸಕ ಎನ್ ಮುನಿರತ್ನ (N.Munirathna) ಅವರು ತಿರುಗೇಟು ಕೊಟ್ಟಿದ್ದು, ಬಾಲಕೃಷ್ಣ ಅವರದ್ದು ಬಡವರ ರಕ್ತದ ಕಣ್ಣೀರಿನ ರೆಡ್ಕಾಲರ್ ಎಂದಿದ್ದಾರೆ.
ರಾಮನಗರದಲ್ಲಿ ಮಾತನಾಡಿದ ಬಾಲಕೃಷ್ಣ, ರಾಜಕಾರಣ ಮಾಡುವುದಕ್ಕೆ ಎಲ್ಲರಿಗೂ ತೆವಲು. ಎಲ್ಲರೂ ಏನೇನೋ ಆಗಬೇಕು ಅಂತ ಬಂದುಬಿಡುತ್ತಾರೆ. ವೈಟ್ ಕಾಲರ್ನವರು ರಾಜಕೀಯ ಮಾಡುವುದು ಅಸಾಧ್ಯ ಎಂದು ಹೇಳಿದ್ದಾರೆ. ಅಲ್ಲದೆ, ಚನ್ನಪಟ್ಟಣ ಸಮಸ್ಯೆ ಸಿ.ಪಿ.ಯೋಗೇಶ್ವರ್ಗೆ ಗೊತ್ತು, ರಾಮನಗರ ಸಮಸ್ಯೆ ಹೆಚ್ಡಿ ಕುಮಾರಸ್ವಾಮಿಗೆ ಗೊತ್ತು. ಆದರೆ ಡಾಕ್ಟರ್ಗೆ ಏನ್ ಗೊತ್ತಾಗುತ್ತದೆ ಎಂದು ಟಾಂಗ್ ಕೊಟ್ಟಿದ್ದರು.
ಇದನ್ನೂ ಓದಿ: 2024ರ ಲೋಕಸಭಾ ಚುನಾವಣೆ ಧರ್ಮ ಯುದ್ಧ ಇದ್ದಂತೆ; ಡಾ.ಮಂಜುನಾಥ್
ಕ್ಷೇತ್ರ ಅರ್ಥ ಮಾಡಿಕೊಳ್ಳುವುದರಲ್ಲೇ ವಯಸ್ಸು ಮುಗಿಯುತ್ತದೆ. ಡಾಕ್ಟರ್ ಆದವರು ಡಾಕ್ಟರ್ ಕೆಲಸವನ್ನ ಮಾಡಬೇಕು. ರಾಜಕಾರಣಿಯಾದವನು ರಾಜಕಾರಣ ಮಾಡಬೇಕು. ನಮ್ಮಂತೆ ಹಳೇ ಬಟ್ಟೆ ಹಾಕಿಕೊಂಡು ಜನರ ಸಮಸ್ಯೆ ಕೇಳುತ್ತಾರಾ? ಕೇಂದ್ರದಲ್ಲಿ ಡಾ.ಹರ್ಷವರ್ಧನ್ಗೆ ಟಿಕೆಟ್ ಕೊಟ್ಟಿದ್ದರು. ಕೆಲಸ ಮಾಡಿಲ್ಲ ಅಂತ ಈ ಸಲ ಟಿಕೆಟ್ ಸಹ ಕೊಟ್ಟಿಲ್ಲ ಎಂದರು.
ಬಾಲಕೃಷ್ಣ ಅವರದ್ದು ರೆಡ್ಕಾಲರ್: ಮುನಿರತ್ನ
ಡಾ.ಸಿ.ಎನ್.ಮಂಜುನಾಥ್ ಅವರನ್ನು ವೈಟ್ ಕಾಲರ್ ಎಂದು ಟೀಕಿಸಿದ ಬಾಲಕೃಷ್ಣ ವಿರುದ್ಧ ಆನೇಕಲ್ನಲ್ಲಿ ವಾಗ್ದಾಳಿ ನಡೆಸಿದ ಮುನಿರತ್ನ. ಮಂಜುನಾಥ್ಗೆ ವೈಟ್ ಕಾಲರ್ ಎಂದು ಹೇಳಿದ್ದಾರೆ. ಚುನಾವಣೆ ಫಲಿತಾಂಶ ಬಂದಾಗ ಎಲ್ಲವೂ ಗೊತ್ತಾಗುತ್ತದೆ. ಮಂಜುನಾಥ್ ಅವರು ವೈಟ್ಕಾಲರ್ ಹಾಕಿ ಅನೇಕರ ಜೀವವನ್ನ ಉಳಿಸಿದ್ದಾರೆ. ಮಂಜುನಾಥ್ ಅವರಾದರೂ ವೈಟ್ ಕಾಲರ್ ಹಾಕಿದ್ದಾರೆ. ಜನರ ಜೀವ ಉಳಿಸಿದ್ದಾರೆ. ಆದರೆ ಇವರದ್ದು ಬರೀ ಬಡವರ ರಕ್ತದ ಕಣ್ಣೀರಿನ ರೆಡ್ಕಾಲರ್ ಎಂದರು.
ಇದನ್ನೂ ಓದಿ: ಡಾ ಸಿಎನ್ ಮಂಜುನಾಥ್ ಸ್ಪರ್ಧೆ ಡಿಕೆ ಸಹೋದರರ ಶಿಬಿರದಲ್ಲಿ ಆತಂಕ ಮೂಡಿಸಿದೆಯೇ? ಶಿವಕುಮಾರ್ ಪ್ರತಿಕ್ರಿಯೆ ಅದನ್ನು ಸೂಚಿಸುತ್ತದೆ!
ಶಾಸಕ ಇಕ್ಬಾಲ್ ಹುನೇಸ್ ಅವರು ಅದೇನೋ ನನ್ನದು ಬಿಚ್ಚುತ್ತೇನೆ ಅಂದಿದ್ದಾರೆ. ನೋಡೋಣ ಯಾರು ಯಾರದ್ದು ಬಿಚ್ಚುತ್ತಾರೆ. ಕನಕಪುರದಲ್ಲೇ ದೊಡ್ಡ ವೇದಿಕೆ ಹಾಕಲಿ, ಯಾರು ಬಿಚ್ಚುತ್ತಾರೋ ನೋಡೋಣ ಎಂದು ಇಕ್ಬಾಲ್ ವಿರುದ್ಧ ಮುನಿರತ್ನ ವಾಗ್ದಾಳಿ ನಡೆಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:54 pm, Sun, 17 March 24