ರೆಂಬೆ ಕಡಿಯಲು ಅನುಮತಿ ಪಡೆದು ಇಡೀ ಮರವನ್ನೇ ಕಡಿದ ಬಿಬಿಎಂಪಿ ಸಿಬ್ಬಂದಿ
ಬಿಬಿಎಂಪಿಯಿಂದ ಬರೀ ರೆಂಬೆ ಕತ್ತರಿಸಲು ಮಾತ್ರ ಅನುಮತಿ ನೀಡಲಾಗಿದೆ. ಆದರೆ ರೆಂಬೆ ಕತ್ತರಿಸಲು ಅನುಮತಿ ಪಡೆದು ಇಡೀ ಮರವನ್ನೇ ಬಿಬಿಎಂಪಿ ಸಿಬ್ಬಂದಿ ಕಡೆದಿರುವಂತಹ ಘಟನೆ ಎಂ.ಎಸ್.ಬಿಲ್ಡಿಂಗ್ ಸಮೀಪದಲ್ಲಿ ನಡೆದಿದೆ. ಕ್ಯಾಮರಾ ಕಂಡೊಡನೆ ಸ್ಥಳದಿಂದ ಬೆಸ್ಕಾಂ, ಬಿಬಿಎಂಪಿ ಸಿಬ್ಬಂದಿಗಳು ಕಾಲ್ಕಿತ್ತಿದ್ದಾರೆ. ಜೆಸಿಬಿ ಮೂಲಕ ಬುಡಸಮೇತ ಸಿಬ್ಬಂದಿ ಮರ ಉರುಳಿಸಿದ್ದಾರೆ.
ಬೆಂಗಳೂರು, ಮಾರ್ಚ್ 17: ರೆಂಬೆ ಕಡಿಯಲು ಅನುಮತಿ ಪಡೆದು ಇಡೀ ಮರವನ್ನೇ ಬಿಬಿಎಂಪಿ (BBMP) ಯ ಸಿಬ್ಬಂದಿ ಕಡೆದಿರುವಂತಹ ಘಟನೆ ಎಂ.ಎಸ್.ಬಿಲ್ಡಿಂಗ್ ಸಮೀಪದಲ್ಲಿ ನಡೆದಿದೆ. ಟ್ರಾನ್ಸ್ ಫಾರ್ಮರ್ ಹಾಕೋಕೆ ಅಂತಾ ನೆಪವೊಡ್ಡಿ ಇಡೀ ಮರವನ್ನೇ ಕತ್ತರಿಸಲು ಸಿಬ್ಬಂದಿ ಮುಂದಾಗಿದ್ದಾರೆ. ಸದ್ಯ ಬಿಬಿಎಂಪಿಯಿಂದ ಬರೀ ರೆಂಬೆ ಕತ್ತರಿಸಲು ಮಾತ್ರ ಅನುಮತಿ ನೀಡಲಾಗಿದೆ. ಆದರೆ ರೆಂಬೆ ಕತ್ತರಿಸಲು ಅನುಮತಿ ಪಡೆದ ಸಿಬ್ಬಂದಿಗಳು ಮರ ಕಡಿಯುತ್ತಿದ್ದಾರೆ. ಕ್ಯಾಮರಾ ಕಂಡೊಡನೆ ಸ್ಥಳದಿಂದ ಬೆಸ್ಕಾಂ, ಬಿಬಿಎಂಪಿ ಸಿಬ್ಬಂದಿಗಳು ಕಾಲ್ಕಿತ್ತಿದ್ದಾರೆ.
ಜೆಸಿಬಿ ಮೂಲಕ ಬುಡಸಮೇತ ಸಿಬ್ಬಂದಿ ಮರ ಉರುಳಿಸಿದ್ದಾರೆ. ಮಿಸ್ ಆಗಿ ಮರ ಬೀಳ್ತು ಅಂತಾ ಸಬೂಬು ನೀಡುತ್ತಾರೆ. ಎಂ.ಎಸ್.ಬಿಲ್ಡಿಂಗ್ ಪಕ್ಕದಲ್ಲಿರುವ ಖಾಸಗಿ ಜಾಗದಲ್ಲಿದ್ದ ಕಾಲೇಜು ನಿರ್ಮಾಣಕ್ಕೆ ಕಾಮಗಾರಿ ನಡೆಯುತ್ತಿದ್ದು, ಜಾಗದವರ ಜೊತೆ ಸೇರಿ ಮರ ತೆರವು ಮಾಡುತ್ತಿರುವ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ: ಮೆಟ್ರೋ ಅಧಿಕಾರಿಯಿಂದ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ಆರೋಪ; FIR ದಾಖಲು
ಮರ ಕಡಿದ ಜಾಗಕ್ಕೆ ವಿಧಾನಸೌಧ ಪೊಲೀಸರು ಆಗಮಿಸಿದ್ದು, ಅನುಮತಿ ಪತ್ರ ಪರಿಶೀಲನೆ ನಡೆಸಿದ್ದಾರೆ. ಮರ ಕಡಿಯೋ ಮೊದಲ ಠಾಣೆಗೆ ಮಾಹಿತಿ ನೀಡಿಲ್ಲ. ಹೇಗೆ ಮರ ಕಡಿಯುತ್ತಿದ್ದೀರ ಅಂತಾ ಪೊಲೀಸರು ಪ್ರಶ್ನೆ ಮಾಡಿದ್ದಾರೆ.
ಕಾರ್ಯನಿರ್ವಾಹಕ ಇಂಜಿನಿಯರ್, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ, ಬೃಹತ್ ಕಾಮಗಾರಿ ವಿಭಾಗ, ದಕ್ಷಿಣ, ಆನಂದರಾವ್ ವೃತ್ತದ ಆಡಿಟ್ ಆಕೌಂಟ್ ಕಛೇರಿಯ ಆವರಣದಲ್ಲಿನ ಮರದ ಕೊಂಬೆಗಳನ್ನು ತೆರವುಗೊಳಿಸಲು ನೀಡಿದ ಅರ್ಜಿಯ ಮೇರೆಗೆ ವಲಯ ಅರಣ್ಯಾಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಪ್ರಸ್ತಾವಿತ ಜಾಗವು ಕೇಂದ್ರ ಸರ್ಕಾರದ ಅಧೀನ ಜಾಗವಾಗಿದ್ದು, ಪ್ರಸ್ತಾವಿತ ಸ್ಥಳದಲ್ಲಿ ವಿದ್ಯುತ್ ಪ್ರಸರಣ ನಿಗಮ ವತಿಯಿಂದ ವಿದ್ಯುತ್ ಘಟಕ ನಿರ್ಮಾಣ ಮಾಡುತ್ತಿದ್ದು, ಸದರಿ ಕಾಮಗಾರಿಗೆ 05 (01 ಅರಳಿ, 01 ಮಳೆಮರ, 01ನೇರಳೆ, 01 ಅಶೋಕ, 01 ಟಕೋಮ) ಮರಗಳಿರುವುದು ಕಂಡುಬಂದೆ.
ಇದನ್ನೂ ಓದಿ: ಒಂದು ರೂಪಾಯಿ ದಾನ ಕೊಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ಮೊಬೈಲ್ ಹ್ಯಾಕ್ ಮಾಡ್ತಾರೆ ಖದೀಮರು
ಪ್ರಸ್ತಾವಿತ ಸ್ಥಳದಲ್ಲಿನ ಮರದ ಕೊಂಬೆಗಳು ಬೃಹದಾಕಾರವಾಗಿ ಆವರಣದಲ್ಲಿ ಹರಡಿ ಕೊಂಡಿದ್ದು ಕೊಂಬೆಗಳು ಕಾಮಗಾರಿಗೆ ಸಂದರ್ಭದಲ್ಲಿ ಬಿದ್ದು ಅಪಾಯ ಉಂಟಾಗುವ ಸಾಧ್ಯತೆಗಳಿರುವುದು ಕಂಡುಬಂದಿರುತ್ತದೆ. ಹಾಗೂ 02 ಮರಗಳನ್ನು ಅರ್ಧಭಾಗ ತೆರವುಗೊಳಿಸುವುದು ಅವಶ್ಯಯಕವಾಗಿರುತ್ತದೆ. ಹಾಗಾಗಿ ಪ್ರಸ್ತಾವಿತ ಸ್ಥಳದಲ್ಲಿನ ಕಾಮಗಾರಿಗೆ ಅಡ್ಡಲಾಗಿರುವ ಹಾಗೂ ಅಪಾಯ ಸ್ಥಿತಿಯಲ್ಲಿರುವ 05 ಮರಗಳಲ್ಲಿ 02 ಮರಗಳನ್ನು ಅರ್ಧಭಾಗ ತೆರವುಗೊಳಿಸುವುದು ಹಾಗೂ 03 ಮರಗಳ 06 ಕೊಂಬೆಗಳನ್ನು ತೆರವುಗೊಳಿಸುವುದು ಅವಶ್ಯಕವಾಗಿರುತ್ತದೆಂದು ವರದಿ ನೀಡಿದ್ದಾರೆ.
ಆದ್ದರಿಂದ ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯಿದೆ 1976 ರ ನಿಯಮ 8 (3) 1, 11, III, IV, V ರ ಪ್ರಕಾರ ಹಾಗೂ W/P 17841/18, ಆಗಸ್ಟ್ 20ರಂದು ನೀಡಿರುವ ನಿರ್ದೇಶನದಂತೆ ಸಾರ್ವಜನಿಕ ಹಿತದೃಷ್ಟಿಯಿಂದ ಕಾಮಗಾರಿಗೆ ಅಡ್ಡಲಾಗಿರುವ ಹಾಗೂ ಅಪಾಯ ಸ್ಥಿತಿಯಲ್ಲಿರುವ 02 ಮರಗಳನ್ನು ಅರ್ಧಭಾಗ ತೆರವುಗೊಳಿಸುವುದು ಹಾಗೂ 03 ಮರಗಳ 06 ಕೊಂಬೆಗಳನ್ನು ತೆರವುಗೊಳಿಸಲು ಅನುಮತಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:24 pm, Sun, 17 March 24