ಸಂಕ್ರಾಂತಿ ಹಬ್ಬದಂದು ಕಾಣುವ ವಿಶೇಷ ಕಪ್ಪು ಕಬ್ಬನ್ನ ಎಲ್ಲಿ, ಹೇಗೆ ಬೆಳೆಯುತ್ತಾರೆ ಗೊತ್ತಾ…?

| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 15, 2023 | 9:33 AM

ಮಕರ ಸಂಕ್ರಾಂತಿಯಂದು ಚನ್ನಪಟ್ಟಣ ತಾಲೂಕಿನ ಪಟ್ಲು ಗ್ರಾಮದಲ್ಲಿ ವಿಶೇಷವಾಗಿ ಈ ಕಪ್ಪು ಕಬ್ಬನ್ನ ಬೆಳೆಯಲಾಗುತ್ತದೆ. ಇಲ್ಲಿಂದಲೇ ರಾಜ್ಯದ ಅನೇಕ ಭಾಗಗಳಿಗೆ ಸಂಕ್ರಾಂತಿ ಕಪ್ಪು ಕಬ್ಬು ರಫ್ತಾಗುತ್ತದೆ.

ಸಂಕ್ರಾಂತಿ ಹಬ್ಬದಂದು ಕಾಣುವ ವಿಶೇಷ ಕಪ್ಪು ಕಬ್ಬನ್ನ ಎಲ್ಲಿ, ಹೇಗೆ ಬೆಳೆಯುತ್ತಾರೆ ಗೊತ್ತಾ...?
ಕಪ್ಪು ಕಬ್ಬು
Follow us on

ರಾಮನಗರ: ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಪಟ್ಲು ಎಂಬ ಗ್ರಾಮದಲ್ಲಿ ಸಂಕ್ರಾಂತಿ ಹಬ್ಬಕ್ಕೆಂದೇ ವಿಶೇಷವಾಗಿ ಕಪ್ಪು ಕಬ್ಬನ್ನು ಬೆಳೆಯುತ್ತಾರೆ. ಸಂಕ್ರಾಂತಿ ಹಬ್ಬಕ್ಕೂ ಎರಡು ದಿನಗಳ ಮುನ್ನಾ ಕಬ್ಬನ್ನ ಕಟಾವು ಮಾಡಿ ಮಾರಾಟ ಮಾಡಲಾಗುತ್ತದೆ. ಈ ಗ್ರಾಮದಲ್ಲಿ ಬೆಳೆಯಲಾದ ಸಂಕ್ರಾಂತಿ ಕಬ್ಬನ್ನು ಬಹುತೇಕ ರಾಮನಗರ, ಬೆಂಗಳೂರು, ಮೈಸೂರು ಸೇರಿದಂತೆ ಹೊರ ರಾಜ್ಯಗಳಿಗೂ ಮಾರಾಟವಾಗುತ್ತದೆ. ನಾಡಿನಾದ್ಯಂತ ಈ ಹಬ್ಬವನ್ನ ತುಂಬಾ
ಸಂಭ್ರಮ-ಸಡಗರದಿಂದ ಆಚರಿಸಲಾಗುತ್ತದೆ. ಹೀಗಾಗಿ ಸಂಕ್ರಾಂತಿ ಹಬ್ಬಕ್ಕೆಂದೆ ಪಟ್ಲು ಗ್ರಾಮದಲ್ಲಿ ಕಪ್ಪು ಕಬ್ಬನ್ನ ಬೆಳೆಯುತ್ತಾರೆ.

ಕಪ್ಪು ಕಬ್ಬನ್ನ ಬೆಳೆಯುವ ರೀತಿಯೇ ಬೇರೆ

ಇನ್ನು ಪಟ್ಲು ಗ್ರಾಮದಲ್ಲಿ ಸುಮಾರು 40 ವರ್ಷಗಳಿಂದ ಈ ಕಪ್ಪು ಕಬ್ಬನ್ನ ಬೆಳೆಯಲಾಗುತ್ತಿದೆ. ಅಂದಹಾಗೆ ಕಪ್ಪು ಕಬ್ಬನ್ನ ಬೆಳೆಯುವುದು ಬೇರೆ ತಳಿಯ ಕಬ್ಬನ್ನು ಬೆಳೆಯುವ ರೀತಿಯಲ್ಲಿ ಅಲ್ಲ. ಇದನ್ನು ವಿವಿಧ ರೀತಿಯಲ್ಲಿ ಪೋಷಣೆ ಮಾಡಬೇಕು. ಮಗುವಿನ ರೀತಿಯಲ್ಲಿ ಸೂಕ್ಷ್ಮವಾಗಿ ನೋಡಿಕೊಳ್ಳಬೇಕು. ಸಂಕ್ರಾಂತಿ ಹಬ್ಬದ ನಂತರ ಬಿತ್ತನೆ ಮಾಡಿ
ಮುಂದಿನ ಸಂಕ್ರಾಂತಿ ಹಬ್ಬದ ಸಮಯದಲ್ಲಿ ಕಬ್ಬನ್ನ ಕಟಾವು ಮಾಡುತ್ತಾರೆ. ದಲ್ಲಾಳಿಗಳು ಜಮೀನಿಗೆ ಬಂದು ಕಬ್ಬನ್ನ ತೆಗೆದುಕೊಂಡು ಹೋಗುತ್ತಾರೆ. ಹೀಗಾಗಿ ಪಟ್ಲು ಗ್ರಾಮದ ನೂರಾರು ಹೆಕ್ಟರ್ ಪ್ರದೇಶದಲ್ಲಿ ಕಪ್ಪು ಕಬ್ಬನ್ನೇ ಬೆಳೆಯುತ್ತಾರೆ. ಆದರೆ ಈ ಬಾರಿ ಕಬ್ಬಿಗೆ ಉತ್ತಮ ಬೇಡಿಕೆ ಇಲ್ಲದಂತೆ ಆಗಿದೆ. ಮೊದಲೆಲ್ಲಾ ಕಡಿಮೆ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದ ಕಪ್ಪು ಕಬ್ಬು ಈಗ ಹೆಚ್ಚಾಗಿ ಬೆಳೆಯಲಾಗುತ್ತಿದ್ದು ಈ ಬಾರಿ ಬೆಲೆಯೂ ಕಡಿಮೆ, ಬೇಡಿಕೆ ಕೂಡ ಕಡಿಮೆಯಾಗಿದ್ದು ರೈತನನ್ನ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.

ಇದನ್ನೂ ಓದಿ:Makar Sankranti 2023: ಸಂಕ್ರಾಂತಿಯ ಮಕರ ಸ್ನಾನದ ಮಹತ್ವವೇನು? ಅಂದು ಮಾಡುವ ದಾನ ಶ್ರೇಷ್ಠ ಎಂಬ ನಂಬಿಕೆಯಿದೆ

ಒಟ್ಟಾರೆ ಇಂದು ಸಂಕ್ರಾಂತಿ ಹಬ್ಬವನ್ನ ಸಂಭ್ರಮದಿಂದ ಜನರು ಆಚರಿಸುತ್ತಿದ್ದು, ಇಂತಹ ಹಬ್ಬಕ್ಕೆಂದೆ ಪಟ್ಲು ಗ್ರಾಮದಲ್ಲಿ ಕಪ್ಪು ಕಬ್ಬನ್ನ ಬೆಳೆಯುತ್ತಿರುವುದು ವಿಶೇಷ. ನೀವು ಸಹಾ ಎಳ್ಳು-ಬೆಲ್ಲದ ಜೊತೆಗೆ ಸಿಹಿಯಾದ ಕಬ್ಬನ್ನ ತಿಂದು ಸಂಭ್ರಮದಿಂದ ಹಬ್ಬವನ್ನ ಆಚರಿಸಿ ಎನ್ನುವುದು ನಮ್ಮ ಆಶಯ.

ವರದಿ:ಪ್ರಶಾಂತ್ ಹುಲಿಕೆರೆ ಟಿವಿ9 ರಾಮನಗರ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ