Makar Sankranti 2023: ಸಂಕ್ರಾಂತಿಯ ಮಕರ ಸ್ನಾನದ ಮಹತ್ವವೇನು? ಅಂದು ಮಾಡುವ ದಾನ ಶ್ರೇಷ್ಠ ಎಂಬ ನಂಬಿಕೆಯಿದೆ

ನಮ್ಮ ಶಾಸ್ತ್ರಗಳಲ್ಲಿ ಮಕರ ಸಂಕ್ರಾಂತಿ ಸ್ನಾನಕ್ಕೆ ವಿಶೇಷ ಮಹತ್ವ ನೀಡಲಾಗಿದೆ. ಸಂಕ್ರಾಂತಿಯಂದು ನದಿಸ್ನಾನ, ಸಮುದ್ರ ಸ್ನಾನ ಇಲ್ಲವೇ ತೀರ್ಥಕ್ಷೇತ್ರಗಳಲ್ಲಿ ಸ್ನಾನ ಮಾಡೋದು ಪುಣ್ಯಪ್ರದ ಎಂದು ಹೇಳಲಾಗಿದೆ.

Makar Sankranti 2023: ಸಂಕ್ರಾಂತಿಯ ಮಕರ ಸ್ನಾನದ ಮಹತ್ವವೇನು? ಅಂದು ಮಾಡುವ ದಾನ ಶ್ರೇಷ್ಠ ಎಂಬ ನಂಬಿಕೆಯಿದೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on: Jan 15, 2023 | 6:30 AM

Makar Sankranti Holy Dip ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುವ ಸುಸಮಯವಾದ ಮಕರ ಸಂಕ್ರಾಂತಿಯಂದು ಸಮುದ್ರಸ್ನಾನ, ನದಿಸ್ನಾನ ಮಾಡುವುದನ್ನು ಶ್ರೇಷ್ಠ ಎನ್ನಲಾಗುತ್ತೆ. ಪಾಪ ವಿನಾಶಕ ನದಿ ಸ್ನಾನ ಬಹಳ ಪವಿತ್ರವಾದದ್ದು. ಸಂಕ್ರಮಣ ಕಾಲದಲ್ಲಿ ಗಂಗಾ, ಯಮುನಾ, ಗೋದಾವರಿ, ಕೃಷ್ಣಾ, ಕಾವೇರಿ ತೀರ್ಥಸ್ನಾನದಿಂದ ಮಹಾಪುಣ್ಯ ಪ್ರಾಪ್ತಿಯಾಗುತ್ತದೆ. ತೀರ್ಥಸ್ನಾನದಿಂದ ಆರೋಗ್ಯ ವೃದ್ಧಿ, ಗ್ರಹದೋಷಗಳ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ.

ನಮ್ಮ ಶಾಸ್ತ್ರಗಳಲ್ಲಿ ಮಕರ ಸಂಕ್ರಾಂತಿ ಸ್ನಾನಕ್ಕೆ ವಿಶೇಷ ಮಹತ್ವ ನೀಡಲಾಗಿದೆ. ಸಂಕ್ರಾಂತಿಯಂದು ನದಿಸ್ನಾನ, ಸಮುದ್ರ ಸ್ನಾನ ಇಲ್ಲವೇ ತೀರ್ಥಕ್ಷೇತ್ರಗಳಲ್ಲಿ ಸ್ನಾನ ಮಾಡೋದು ಪುಣ್ಯಪ್ರದ ಎಂದು ಹೇಳಲಾಗಿದೆ.

ಪುಣ್ಯಸ್ನಾನದಿಂದ ಪೂರ್ವಜನ್ಮದ ಪಾಪಗಳೆಲ್ಲಾ ಕಳೆದು ಹೋಗಿ ಪುಣ್ಯ ಪ್ರಾಪ್ತಿಯಾಗುತ್ತೆಂದು ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಈ ಕಾರಣಕ್ಕಾಗೇ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಇರೋ ಪುಣ್ಯನದಿಗಳ ತೀರದಲ್ಲಿ ಸಂಕ್ರಾಂತಿಯಂದು ಭಕ್ತರು ಮೀಯುತ್ತಾರೆ. ಸೂರ್ಯ ಪಥ ಬದಲಿಸೋ ದಿನದಂದೇ ಗಂಗೆಯಲ್ಲಿ ಮಿಂದೆದ್ದು ಪುನೀತರಾಗ್ತಾರೆ.

ಸಂಕ್ರಮಣ ಕಾಲದ ತೀರ್ಥಸ್ನಾನದಿಂದ ಮಹಾಪುಣ್ಯ ಪ್ರಾಪ್ತಿಯಾಗುತ್ತೆ. ಗಂಗಾ, ಯಮುನಾ, ಕಾವೇರಿ, ಗೋದಾವರಿ, ಕೃಷ್ಣಾ ತೀರ್ಥದಲ್ಲಿ ಸ್ನಾನ ಮಾಡಿದರೆ ಆರೋಗ್ಯ ವೃದ್ಧಿಯಾಗುತ್ತೆ. ಗ್ರಹದೋಷಗಳೂ ಕೂಡ ನಿವಾರಣೆಯಾಗುತ್ತವೆಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ .

ಸಂಕ್ರಾಂತಿ ಪರ್ವಕಾಲದಲ್ಲಿ ದಾನದ ಮಹತ್ವವೇನು?

ಸಂಕ್ರಾಂತಿ ದಿನ ದಾನ ಮಾಡೋದು ಅತ್ಯಂತ ಪುಣ್ಯಪ್ರದ. ಈ ದಿನದ ದಾನಕ್ಕೆ ಹಿಂದೂ ಸಂಪ್ರದಾಯದಲ್ಲಿ ವಿಶೇಷ ಮಹತ್ವ ಇದೆ. ಸಂಕ್ರಾಂತಿಯಂದು ದಾನ ಮಾಡೋದ್ರಿಂದ ವಿಶೇಷ ಫಲಗಳು ಪ್ರಾಪ್ತಿಯಾಗುತ್ತವೆ ಎನ್ನಲಾಗುತ್ತೆ. ಮಕರ ಸಂಕ್ರಾಂತಿಯಿಂದ ರಥಸಪ್ತಮಿಯವರೆಗಿನ ಕಾಲ ಪರ್ವಕಾಲ. ಈ ಪರ್ವಕಾಲದಲ್ಲಿ ಮಾಡಿದ ದಾನದಿಂದ ವಿಶೇಷ ಫಲಪ್ರಾಪ್ತಿಯಾಗುತ್ತದೆ.

ಸಂಕ್ರಾಂತಿ ಹಬ್ಬದಂದು ಯಾವ ದಾನದಿಂದ ಏನು ಫಲ?

  • ಅನ್ನದಾನ ಮಾಡಿದ್ರೆ ಅನ್ನದ ಕೊರತೆ ಎದುರಾಗಲ್ಲ
  • ವಸ್ತ್ರ ದಾನದಿಂದ ಚರ್ಮರೋಗ ನಿವಾರಣೆ
  • ಎಳ್ಳು ದಾನದಿಂದ ಶತ್ರುಗಳ ನಾಶ
  • ಗೋದಾನದಿಂದ ವಂಶೋದ್ಧಾರ
  • ಬಂಗಾರ ದಾನದಿಂದ ಪಾಪ ಪರಿಹಾರ
  • ಕುಂಬಳಕಾಯಿ ದಾನ ಮಾಡಿದ್ರೆ ರೋಗ ಪರಿಹಾರ
  • ಫಲ ದಾನ ಜೀವನದಲ್ಲಿ ಆನಂದ
  • ತೆಂಗಿನಕಾಯಿ ದಾನ ಮಾಡಿದ್ರೆ ಇಷ್ಟಾರ್ಥ ಸಿದ್ಧಿ
  • ಅಕ್ಕಿ ದಾನದಿಂದ ಮನಸ್ಸಿಗೆ ನೆಮ್ಮದಿ ಪ್ರಾಪ್ತಿ
  • ಧಾನ್ಯ ದಾನ ಮಾಡಿದ್ರೆ ದಾರಿದ್ರ್ಯ ದೂರ

    ಸಂಕ್ರಾಂತಿ ವೇಳೆ ಮಡಕೆ ದಾನದ ವಿಶೇಷತೆ ಏನು?

    ಸಂಕ್ರಾಂತಿಯ ಹಬ್ಬದಲ್ಲಿ ಸಣ್ಣ ಮಣ್ಣಿನ ಮಡಿಕೆಗಳಿಗೆ ಅರಿಶಿನ ಕುಂಕುಮವನ್ನು ಹಚ್ಚಿ ದಾರವನ್ನು ಸುತ್ತುತ್ತಾರೆ. ಮಡಿಕೆಗಳಲ್ಲಿ ಕಬ್ಬಿನ ತುಂಡು, ನೆಲಗಡಲೆ, ಹತ್ತಿ, ಕಡಲೆಕಾಳು, ಎಳ್ಳು-ಬೆಲ್ಲ, ಅರಿಶಿನ-ಕುಂಕುಮ ಮುಂತಾದವುಗಳನ್ನು ತುಂಬಿಸ್ತಾರೆ. ಅದನ್ನು ದಾನದ ರೂಪದಲ್ಲಿ ನೀಡುವ ಆಚರಣೆ ಇದೆ.

ಸಂಕ್ರಾಂತಿ ಹಬ್ಬದಂದು ಬಾಗಿನ ನೀಡೋ ವಾಡಿಕೆ ಇದೆ. ಹಬ್ಬದ ದಿನ ಬಾಗಿನ ನೀಡುವುದರಿಂದ ವಿಶೇಷ ಫಲಗಳು ಪ್ರಾಪ್ತಿಯಾಗುತ್ತವೆಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ .

ಬಾಗಿನದಲ್ಲಿ ಯಾವ ಯಾವ ವಸ್ತುಗಳಿರಬೇಕು?

ಸೌಭಾಗ್ಯದ ವಸ್ತುಗಳು, ಧಾರ್ಮಿಕಗ್ರಂಥ , ಪುರಾಣಗ್ರಂಥ, ದೇವತೆಗಳ ಚಿತ್ರ. ಅಧ್ಯಾತ್ಮದ ಜಾಗೃತಿಗೆ ಪೂರಕವಾಗಿರೋ ವಸ್ತುಗಳನ್ನು ಬಾಗಿನವಾಗಿ ಕೊಡಬಹುದು. ಈ ಬಾಗಿನದಿಂದ ದೇವತೆಗಳ ಸಂಪೂರ್ಣ ಆಶೀರ್ವಾದ ಪ್ರಾಪ್ತಿಯಾಗುತ್ತದೆ. ಸಂಕ್ರಾಂತಿಯ ದಿನ ಮಕ್ಕಳೆಲ್ಲರನ್ನೂ ಕೂರಿಸಿ ಅವರ ತಲೆಯ ಮೇಲೆ ಚಿಲ್ಲರೆ ನಾಣ್ಯ, ಎಲಚಿ ಹಣ್ಣು, ಅಕ್ಷತೆಯನ್ನು ಹಿರಿಯರಿಂದ ಹಾಕಿಸಲಾಗುತ್ತೆ. ಇದರಿಂದ ಮಕ್ಕಳಿಗೆ ಯಾವುದೇ ದೋಷವಿದ್ರೂ ಹೋಗುತ್ತೆ ಎಂಬ ನಂಬಿಕೆ ಅನಾದಿಕಾಲದಿಂದಲೂ ಸಾಗಿಬಂದಿದೆ. ಎಲಚಿ ಹಣ್ಣಿನಲ್ಲಿ ಲಕ್ಷ್ಮೀಯ ಸಾನಿಧ್ಯವಿರೋದ್ರಿಂದ ಇದು ಮಕ್ಕಳ ತಲೆಯ ಮೇಲೆ ಬಿದ್ರೆ ಸಂಪತ್ತಿನ ಅಧಿದೇವತೆಯ ಕೃಪೆ ಮಕ್ಕಳ ಮೇಲಿರುತ್ತೆಂದು ಹೇಳಲಾಗುತ್ತೆ.

ಇಂದು ತರ್ಪಣ ನೀಡಿದ್ರೆ ಪಿತೃಗಳ ಆತ್ಮಕ್ಕೆ ಶಾಂತಿ ಪ್ರಾಪ್ತಿ

ದಕ್ಷಿಣಾಯಣದಲ್ಲಿ ಮೃತರಾದ ಹಿರಿಯರ ಆತ್ಮಗಳಿಗೆ ಸದ್ಗತಿ ದೊರೆಯಬೇಕೆಂದು ಪ್ರಾರ್ಥಿಸಿ ತರ್ಪಣ ನೀಡುವ ಆಚರಣೆಯನ್ನು ಅಸಂಖ್ಯಾತ ಜನರು ಉತ್ತರಾಯಣದಲ್ಲಿ ಪಾಲಿಸ್ತಾರೆ. ಪಿತೃದೇವತೆಗಳಿಗೆ ಸ್ವರ್ಗ ಪ್ರಾಪ್ತಿಯಾಗಬೇಕೆಂದು ಈ ಸಂದರ್ಭದಲ್ಲಿ ಪ್ರಾರ್ಥನೆ ಮಾಡ್ತಾರೆ.

ಎಳ್ಳೆಣ್ಣೆ ದೀಪ ಹಚ್ಚೋದು ಅತ್ಯಂತ ಶ್ರೇಷ್ಠ

ತಿಲ ತೈಲೇನ ದೀಪಾರೋಹಣಂ ಆಚರೇತ್ ಅಂದ್ರೆ ಆಗಮಶಾಸ್ತ್ರದ ಪ್ರಕಾರ, ದೀಪಕ್ಕೆ ಎಳ್ಳೆಣ್ಣೆ ಬಳಸೋದು ಅತ್ಯಂತ ಶ್ರೇಷ್ಠ ಎನ್ನಲಾಗುತ್ತೆ. ಎಳ್ಳೆಣ್ಣೆ ದೀಪದಿಂದ ಬರುವ ಧೂಪ ಸೇವನೆಯಿಂದ ಉತ್ತಮ ಆರೋಗ್ಯ ಪಡೆಯಬಹುದು ಎನ್ನಲಾಗುತ್ತೆ.

ಸಂಕ್ರಾಂತಿ ಹಬ್ಬದ ದಿನ ಆಕಾಶದ ತುಂಬೆಲ್ಲಾ ಗಾಳಿಪಟಗಳ ಕಲರವ

ಆಕಾಶದಲ್ಲಿ ಸಂಕ್ರಾಂತಿ ಹಬ್ಬದ ದಿನ ಬಣ್ಣಬಣ್ಣದ ಗಾಳಿಪಟಗಳ ಸಂಭ್ರಮ ಕಾಣುತ್ತೆ. ಭೂಲೋಕದಲ್ಲಿ ನಾವು ಆನಂದದಿಂದ ಇದ್ದೇವೆ ಎಂಬ ಸಂದೇಶವನ್ನು ದೇವತೆಗಳಿಗೆ ನೀಡಲಿಕ್ಕಾಗೇ ಆಕಾಶದಲ್ಲಿ ಗಾಳಿಪಟ ಹಾರಿಸುವ ವಾಡಿಕೆಯಲ್ಲಿದೆ ಅಂತ ಹೇಳಲಾಗುತ್ತೆ.

ಸಂಕ್ರಾಂತಿ ಹಬ್ಬದಂದು ಕರ್ನಾಟಕದ ಗ್ರಾಮೀಣ ಭಾಗಗಳು ವಿಶೇಷವಾಗಿ ಮೈಳೆಸುತ್ತವೆ. ಹೊರಿ ಬೆದರಿಸುವ ಆಟಗಳು, ಕಿಚ್ಚು ಹಾಯಿಸುವ ಸಂಪ್ರದಾಯಗಳು, ಧನಗಳಿಗೆ ಜಾನುವಾರಗಳಿಗೆ ವಿಶೇಷವಾದ ಅಲಂಕಾರಗಳು ಜೊತೆಗೆ ಗ್ರಾಮೀಣ ಕ್ರೀಡೆಗಳೊಂದಿಗೆ ಸಂಕ್ರಾಂತಿ ಸಂಭ್ರಮಾಚರಣೆ. ಇನ್ನು ತಮಿಳು ನಾಡಿನಲ್ಲಿ ಜಲ್ಲಿಕಟ್ಟುವಿನಂತ ಆಚರಣೆಗಳನ್ನು ಮಾಡಲಾಗುತ್ತೆ. ಹಾಗೂ ಜಗದ್ವಿಖ್ಯಾತಿಯನ್ನ ಪಡೆದುಕೊಂಡಿರುವ ಕೇರಳದ ಶಬರಿ ಮಲೈನಲ್ಲಿ ಮಕರ ಜ್ಯೋತಿ ಕಾಣಿಸುತ್ತದೆ.

ಮತ್ತಷ್ಟು ಅಧ್ಯಾತ್ಮಕ್ಕೆ ಸಂಬಂಧಪಟ್ಟ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
Video: ದಕ್ಷಿಣ ಕೊರಿಯಾದಲ್ಲಿ 170 ಪ್ರಯಾಣಿಕರಿದ್ದ ವಿಮಾನ ಪತನ
Video: ದಕ್ಷಿಣ ಕೊರಿಯಾದಲ್ಲಿ 170 ಪ್ರಯಾಣಿಕರಿದ್ದ ವಿಮಾನ ಪತನ
ಖ್ವಾಜಾ ಕ್ಲೀನ್ ಬೌಲ್ಡ್... ಸ್ಟೇಡಿಯಂನಲ್ಲಿ ಮೊಳಗಿದ DSP, DSP ಘೋಷಣೆ..!
ಖ್ವಾಜಾ ಕ್ಲೀನ್ ಬೌಲ್ಡ್... ಸ್ಟೇಡಿಯಂನಲ್ಲಿ ಮೊಳಗಿದ DSP, DSP ಘೋಷಣೆ..!