ರಾಮನಗರ: ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ್ದರು. ಮೋದಿ ಹಾಗೂ ದೇವೇಗೌಡ ಭೇಟಿಯ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಈ ಬಗ್ಗೆ ಇಂದು (ಡಿಸೆಂಬರ್ 1) ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಭೇಟಿ ಹೆಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ದೇವೇಗೌಡ ಹಾಗೂ ಮೋದಿ ಭೇಟಿ ಹೊಸದೇನೂ ಅಲ್ಲ. ದೇವೇಗೌಡರಿಗೆ ಮೋದಿ ವಿಶೇಷ ಗೌರವ ಕೊಡುತ್ತಾರೆ ಎಂದು ರಾಮನಗರ ತಾಲೂಕಿನ ಬಿಡದಿ ಬಳಿಯ ತೋಟದ ಮನೆಯಲ್ಲಿ ಮಾಜಿ ಸಿಎಂ ಹೆಚ್‌ಡಿಕೆ ಹೇಳಿಕೆ ನೀಡಿದ್ದಾರೆ.
ಹಾಸನದಲ್ಲಿ ಐಐಟಿ ಸ್ಥಾಪನೆ ವಿಚಾರವಾಗಿ ದೇವೇಗೌಡ, ಪ್ರಧಾನಿ ಮೋದಿ ಭೇಟಿ ಆಗಿದ್ದರು. ಇದೇ ವೇಳೆ ಪರಿಷತ್ ಚುನಾವಣೆ ಬಗ್ಗೆ ಚರ್ಚಿಸಿರಬಹುದು. ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲ ಕೋರಿದೆ. ನಾವು ಏನು ತೀರ್ಮಾನ ಮಾಡಬೇಕೋ ಮಾಡುತ್ತೇವೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ನಾನು ಸಿಎಂ ಆಗಿದ್ದಗಲೂ ಪ್ರಧಾನಿಯವರನ್ನ ಭೇಟಿ ಮಾಡಿದ್ದೇನೆ. ಹಾಸನದಲ್ಲಿ ಐಐಟಿ ಸ್ಥಾಪನೆ ವಿಚಾರವಾಗಿ ದೇವೇಗೌಡರು, ಪ್ರಧಾನಿ ಅವರನ್ನ ಭೇಟಿ ಮಾಡಿದ್ದಾರೆ. ಈ ಮಧ್ಯೆ ವಿಧಾನಪರಿಷತ್ ಚುನಾವಣೆ ಕೂಡ ಚರ್ಚೆ ಆಗಿರಬಹುದು. ದೆಹಲಿಯಿಂದ ಬಂದ ನಂತರ ಮಾಹಿತಿ ಸಿಗಲಿದೆ ಎಂದು ಅವರು ಹೇಳಿದ್ದಾರೆ.
ನಮ್ಮ ಅಭ್ಯರ್ಥಿಗಳಿಗೆ ಬೆಂಬಲ ಕೊಡಿ ಎಂದು ಬಿ.ಎಸ್. ಯಡಿಯೂರಪ್ಪ ನೇರವಾಗಿಯೇ ಮನವಿ ಮಾಡಿದ್ದಾರೆ. ಕಾಂಗ್ರೆಸ್ನವರು ಜೆಡಿಎಸ್ ಜೊತೆ ಹೊಂದಾಣಿಕೆ ಇಲ್ಲ ಎಂದು ನೇರವಾಗಿ ಹೇಳಿದ್ದಾರೆ. ಬೇಡ ಎಂಬುವವರ ಮನೆ ಬಾಗಿಲಿಗೆ ಹೋಗಲು ಸಾಧ್ಯವೇ? ಬಿಜೆಪಿಯವರು ಮನವಿ ಮಾಡಿದ್ದಾರೆ. ನಾವು ಏನು ತೀರ್ಮಾನ ಮಾಡಬೇಕೋ ಮಾಡುತ್ತೇವೆ. ವಿಧಾನಪರಿಷತ್ ಚುನಾವಣೆ ಮುಂದಿನ ಚುನಾವಣೆಯ ದಿಕ್ಸೂಚಿ ಅಲ್ಲ. ಈ ಚುನಾವಣೆಯ ಫಲಿತಾಂಶ ಕಾರ್ಯಕರ್ತರಿಗೆ ಆತ್ಮವಿಶ್ವಾಸ ಮೂಡಿಸುತ್ತದೆ. ಕೆಲವು ಕ್ಷೇತ್ರಗಳಲ್ಲಿ ಯಾರನ್ನೂ ಗೆಲ್ಲಿಸಬಹುದು ಎಂಬ ಶಕ್ತಿ ಜೆಡಿಎಸ್ಗೆ ಇದೆ ಎಂದು ತಿಳಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ವಿಧಾನಪರಿಷತ್ ಚುನಾವಣೆ ಹಿನ್ನೆಲೆ ಗ್ರಾಮ ಪಂಚಾಯತಿ ಸದಸ್ಯರು, ಜೆಡಿಎಸ್ ಪಕ್ಷದ ಮುಖಂಡರ ಜೊತೆ ರಾಮನಗರ ತಾಲೂಕಿನ ಕೇತಗಾನಹಳ್ಳಿ ಗ್ರಾಮದ ತೋಟದಲ್ಲಿ ಸಭೆ ನಡೆಸಲಾಗಿದೆ. ಸಭೆಯಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಶಾಸಕರಾದ ಅನಿತಾ ಕುಮಾರಸ್ವಾಮಿ, ಎ.ಮಂಜುನಾಥ್, ಅಭ್ಯರ್ಥಿ ಹೆಚ್ ಎಂ ರಮೇಶ್ ಗೌಡ ಭಾಗಿ ಆಗಿದ್ದಾರೆ. ರಾಮನಗರ ಜಿಲ್ಲೆಯ ನಾಲ್ಕು ತಾಲೂಕುಗಳ ಗ್ರಾಪಂ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ.
ಇದನ್ನೂ ಓದಿ: ಇದುವರೆಗೂ ಮೋದಿ ನನಗೆ ಅಗೌರವ ತೋರಿಲ್ಲ, ಮಂಡಿನೋವಿದ್ದ ಕಾರಣ ಅವರೇ ಬಾಗಿಲವರೆಗೂ ಬಿಟ್ಟರು: ಎಚ್.ಡಿ. ದೇವೇಗೌಡ
Published On - 2:48 pm, Wed, 1 December 21