ಚನ್ನಪಟ್ಟಣ: ಪತ್ನಿಯ ಮಾರ್ಫ್ ಮಾಡಿದ ಅಶ್ಲೀಲ ಚಿತ್ರಗಳನ್ನು ಕಳುಹಿಸಿದ ಸಾಲದ ಏಜೆಂಟ್, ನೊಂದ ಪತಿ ಆತ್ಮಹತ್ಯೆಗೆ ಶರಣು

|

Updated on: Sep 05, 2023 | 12:16 PM

ಮಂಡ್ಯದ ಮಳವಳ್ಳಿಯ ಸಾಲ ವಸೂಲಾತಿ ಏಜೆಂಟ್ ಆಗಿರುವ ಆರೋಪಿ ಕೆಂಪರಾಜು ಸಾಲ ಮರುಪಾವತಿ ವಿಚಾರವಾಗಿ ತನಗೆ ಕರೆ ಮಾಡಿ ಸ್ನೇಹ ಬೆಳೆಸುತ್ತಿದ್ದ. ಆಗಸ್ಟ್ 30 ರಂದು ಕೆಂಪರಾಜು ಮಾರ್ಫ್ ಮಾಡಿದ ನನ್ನ ಅಶ್ಲೀಲ ಫೋಟೋಗಳನ್ನು ತನ್ನ ಪತಿಗೆ ಕಳುಹಿಸಿದ್ದ. ಇದರಿಂದ ಮನನೊಂದ ಪತಿ ಪ್ರಕಾಶ್ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಚನ್ನಪಟ್ಟಣ: ಪತ್ನಿಯ ಮಾರ್ಫ್ ಮಾಡಿದ ಅಶ್ಲೀಲ ಚಿತ್ರಗಳನ್ನು ಕಳುಹಿಸಿದ ಸಾಲದ ಏಜೆಂಟ್, ನೊಂದ ಪತಿ ಆತ್ಮಹತ್ಯೆಗೆ ಶರಣು
ಮಾರ್ಫ್ ಮಾಡಿದ ಚಿತ್ರ ಕಳುಹಿಸಿದ ಸಾಲದ ಏಜೆಂಟ್, ನೊಂದ ಪತಿ ಆತ್ಮಹತ್ಯೆ
Follow us on

ರಾಮನಗರ: ಸಾಲ ವಸೂಲಾತಿ ಏಜೆಂಟ್ ತನ್ನ ಪತ್ನಿಯ (wife) ಫೋಟೋಗಳನ್ನು ಮಾರ್ಫಿಂಗ್ ಮಾಡಿ ಅಶ್ಲೀಲ ಚಿತ್ರಗಳನ್ನು (morphed photos) ಕಳುಹಿಸಿದ್ದಕ್ಕೆ 42 ವರ್ಷದ ವ್ಯಕ್ತಿ ಆತ್ಮಹತ್ಯೆ (suicide) ಮಾಡಿಕೊಂಡಿದ್ದಾರೆ. ರಾಮನಗರ ಜಿಲ್ಲೆಯ ಚನ್ನಪಟ್ಟಣ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೃತರು ಚನ್ನಪಟ್ಟಣದ ಶೆಟ್ಟಿಹಳ್ಳಿ ನಿವಾಸಿ ಪ್ರಕಾಶ್. ಪ್ರಕಾಶ್ ಮತ್ತು ಅವರ ಪತ್ನಿ ಚನ್ನಪಟ್ಟಣದ ಮಂಗಳವಾರಪೇಟೆಯಲ್ಲಿರುವ (Mangalawarapet in Channapatna) ಖಾಸಗಿ ಫೈನಾನ್ಸ್ ಸಂಸ್ಥೆಯಲ್ಲಿ ಸಾಲ ಮಾಡಿದ್ದರು. ಪ್ರಕಾಶ್ ತಮ್ಮ ಪತ್ನಿಯ ಹೆಸರಿನಲ್ಲಿ ಸಾಲ (loan) ಪಡೆದಿದ್ದು, ಆಕೆಯ ಫೋನ್ ನಂಬರ್, ಫೋಟೋ ಮುಂತಾದ ವಿವರಗಳನ್ನು ಸಾಲದ ಏಜೆಂಟ್ ಕೆಂಪರಾಜು ಎಂಬಾತನಿಗೆ ನೀಡಿದ್ದರು.

ಮಂಡ್ಯದ ಮಳವಳ್ಳಿಯ ಸಾಲ ವಸೂಲಾತಿ ಏಜೆಂಟ್ ಆಗಿರುವ ಆರೋಪಿ ಕೆಂಪರಾಜು ಸಾಲ ಮರುಪಾವತಿ ವಿಚಾರವಾಗಿ ತನಗೆ ಕರೆ ಮಾಡಿ ಸ್ನೇಹ ಬೆಳೆಸುತ್ತಿದ್ದ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಅ ವೇಳೆಯಲ್ಲೆಲ್ಲಾ ತನಗೆ ಕರೆ ಮಾಡಿ, ನಗ್ನ ಛಾಯಾಚಿತ್ರಗಳನ್ನು ಕಳುಹಿಸುವಂತೆ ಕೇಳುತ್ತಿದ್ದ ಎಂದು ಮಹಿಳೆ ದೂರಿದ್ದಾರೆ. ಆಕೆ ಅದಕ್ಕೆ ನಿರಾಕರಿಸಿದ್ದರಿಂದ ಆಕೆಯ ಅಶ್ಲೀಲ ಫೋಟೋಗಳನ್ನು ಸೃಷ್ಟಿಸಿ, ಪತಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಆಕೆ ಮಣಿಯದೇ ಇದ್ದಾಗ ಆಕೆಗೆ ನಕಲಿ ಅಶ್ಲೀಲ ಚಿತ್ರಗಳನ್ನು ತೋರಿಸಿ ಹಣ ಹಾಗೂ ಚಿನ್ನಾಭರಣಕ್ಕೆ ಬೇಡಿಕೆ ಇಡುತ್ತಿದ್ದ. ಅಲ್ಲದೇ, ಅದನ್ನು ಕುಟುಂಬದವರು ಹಾಗೂ ಸಂಬಂಧಿಕರೊಂದಿಗೆ ಹಂಚಿಕೊಳ್ಳುವುದಾಗಿ ಬೆದರಿಕೆ ಹಾಕುತ್ತಿದ್ದನಂತೆ.

Also Read: ತಂದೆಯ ಬರ್ಬರ ಹತ್ಯೆ, ಅಪ್ಪನಿಗೂ ಗೊತ್ತಿತ್ತು ಪುತ್ರಿಯೇ ತನ್ನನ್ನು ಸಾಯಿಸಬಹುದು ಅಂತಾ, ಹತ್ಯೆ ಮಾಡಿದ ಮಗಳು ಎಲ್ಲಿ ಹೋದಳು

ಆಗಸ್ಟ್ 30 ರಂದು ಕೆಂಪರಾಜು ಮಾರ್ಫ್ ಮಾಡಿದ ನನ್ನ ಅಶ್ಲೀಲ ಫೋಟೋಗಳನ್ನು ತನ್ನ ಪತಿಗೆ ಕಳುಹಿಸಿದ್ದನು. ಇದರಿಂದ ಮನನೊಂದ ಪ್ರಕಾಶ್ ಶನಿವಾರ ಬೆಳಗ್ಗೆ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿಯ ದೂರಿನ ಆಧಾರದ ಮೇಲೆ ಕೆಂಪರಾಜು ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆತ್ಮಹತ್ಯೆ ಮತ್ತು ಐಟಿ ಕಾಯ್ದೆ ಸೇರಿದಂತೆ ಇತರೆ ಆರೋಪಗಳನ್ನು ಹೊರಿಸಲಾಗಿದೆ. ಆರೋಪಿಯನ್ನು ಹಿಡಿಯುವ ಪ್ರಯತ್ನ ನಡೆದಿದೆ ಎಂದು ಚನ್ನಪಟ್ಟಣ ಟೌನ್ ಪೊಲೀಸರು ತಿಳಿಸಿದ್ದಾರೆ.

ರಾಮನಗರ ಜಿಲ್ಲಾ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ