ರಾಮನಗರ: ವೃಷಣ ಶಸ್ತ್ರಚಿಕಿತ್ಸೆ ನಂತರ 6 ವರ್ಷದ ಬಾಲಕ ಸಾವು; ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 06, 2024 | 4:14 PM

ರಾಮನಗರ(Ramanagara)ದ ಶ್ರೀದೇವಿ ಮಿಷನ್ ಆಸ್ಪತ್ರೆಯಲ್ಲಿ ವೃಷಣ ಶಸ್ತ್ರಚಿಕಿತ್ಸೆ ನಂತರ 6 ವರ್ಷದ ಆರ್ಯ ಸಾವನ್ನಪ್ಪಿರುವ ಘಟನೆ ನಡೆದಿದೆ. ವೈದ್ಯರ ನಿರ್ಲಕ್ಷ್ಯದಿಂದಲೇ ಬಾಲಕ ಮೃತಪಟ್ಟಿರುವುದಾಗಿ ಪೋಷಕರು ಆರೋಪಿಸಿ, ಆಸ್ಪತ್ರೆ ಎದುರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಆಸ್ಪತ್ರೆಗೆ ಎಸ್ಪಿ ಕಾರ್ತಿಕ್ ರೆಡ್ಡಿ ಹಾಗೂ DySP ದಿನಕರ್ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಾಮನಗರ: ವೃಷಣ ಶಸ್ತ್ರಚಿಕಿತ್ಸೆ ನಂತರ 6 ವರ್ಷದ ಬಾಲಕ ಸಾವು; ಮುಗಿಲು ಮುಟ್ಟಿದ ಪೋಷಕರ ಆಕ್ರಂದನ
ವೃಷಣ ಶಸ್ತ್ರಚಿಕಿತ್ಸೆ ನಂತರ 6 ವರ್ಷದ ಬಾಲಕ ಸಾವು
Follow us on

ರಾಮನಗರ, ಅ.06: ವೃಷಣ ಶಸ್ತ್ರಚಿಕಿತ್ಸೆ ನಂತರ 6 ವರ್ಷದ ಆರ್ಯ ಸಾವನ್ನಪ್ಪಿರುವ ಘಟನೆ ರಾಮನಗರ(Ramanagara)ದ ಶ್ರೀದೇವಿ ಮಿಷನ್ ಆಸ್ಪತ್ರೆಯಲ್ಲಿ ನಡೆದಿದೆ. ವೈದ್ಯರ ನಿರ್ಲಕ್ಷ್ಯದಿಂದಲೇ ಬಾಲಕ ಮೃತಪಟ್ಟಿರುವುದಾಗಿ ಪೋಷಕರು ಆರೋಪ ಮಾಡಿದ್ದಾರೆ. ಒಂದೇ ವೃಷಣ ಹೊಂದಿದ್ದ ಆರ್ಯನನ್ನ ಹಲವು ಆಸ್ಪತ್ರೆಗಳ ವೈದ್ಯರಿಗೆ ತೋರಿಸಿದ್ದ ಪೋಷಕರು, ಬಳಿಕ ಶ್ರೀದೇವಿ ಮಿಷನ್ ಆಸ್ಪತ್ರೆಯ ವೈದ್ಯರು ನೀಡಿದ ಸಲಹೆ ಮೇರೆಗೆ ಶಸ್ತ್ರ ‌ಚಿಕಿತ್ಸೆಗೆಂದು ಕರೆತರಲಾಗಿತ್ತು.

ಶ್ರೀದೇವಿ ಮಿಷನ್ ಆಸ್ಪತ್ರೆ ಎದುರು ಆರ್ಯ ಕುಟುಂಬಸ್ಥರ ಆಕ್ರಂದನ

ಒಂದೇ ವೃಷಣವಿದ್ದರೂ ಬದುಕಬಹುದೆಂದು ಸಲಹೆ ನೀಡಿದ್ದ ಮಿಷನ್ ಆಸ್ಪತ್ರೆ ವೈದ್ಯರು, ಆದರೆ ಆಪರೇಷನ್ ಮಾಡಿಸಬೇಕೆಂದಿದ್ದರು. ಅದರಂತೆ ನಿನ್ನೆ ಶ್ರೀದೇವಿ ಆಸ್ಪತ್ರೆಗೆ ಆರ್ಯನನ್ನ ದಾಖಲಿಸಲಾಗಿತ್ತು. ಆರೋಗ್ಯವಾಗಿದ್ದ ಆರ್ಯನಿಗೆ ಚಿಕಿತ್ಸೆ ನೀಡಲು ಮುಂದಾಗಿದ್ದ ವೈದ್ಯರು, ಬೆಳಗ್ಗೆ 11 ಗಂಟೆಗೆ ಆಪರೇಷನ್ ಥಿಯೇಟರ್​ಗೆ ಕರೆದೊಯ್ದಿದ್ದರು. ಆಪರೇಷನ್ ಆದ ಕೆಲವೇ ಹೊತ್ತಿನಲ್ಲಿ 6 ವರ್ಷದ ಆರ್ಯ ಕೊನೆಯುಸಿರೆಳೆದಿದ್ದಾನೆ. ಆರ್ಯನ ಸಾವಿಗೆ ಶ್ರೀದೇವಿ ಆಸ್ಪತ್ರೆ ವೈದ್ಯರೇ ಕಾರಣವೆಂದು ಶ್ರೀದೇವಿ ಮಿಷನ್ ಆಸ್ಪತ್ರೆ ಎದುರು ಆರ್ಯ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಆಸ್ಪತ್ರೆಗೆ SP ಕಾರ್ತಿಕ್ ರೆಡ್ಡಿ, DySP ದಿನಕರ್ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ಕೋಲಾರದ ಶ್ರೇಯ ಆಸ್ಪತ್ರೆಯಲ್ಲಿ ಲ್ಯಾಪ್ರೋಸ್ಕೋಪಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಯುವತಿ ಸಾವು

ಅಪ್ರಾಪ್ತ ಬಾಲಕ, ಬಾಲಕಿ ವಿಷ ಕುಡಿದು‌ ಆತ್ಮಹತ್ಯೆಗೆ ಯತ್ನ; ಅಪ್ರಾಪ್ತೆ ಸಾವು

ಕೋಲಾರ: ಅಪ್ರಾಪ್ತ ಬಾಲಕ ಹಾಗೂ ಬಾಲಕಿ ವಿಷ ಕುಡಿದು‌ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯ ಮಾಲೂರು ತಾಲೂಕಿನ ಆಲಹಳ್ಳಿಯಲ್ಲಿ ನಡೆದಿದೆ. ಕೂಡಲೇ ಇಬ್ಬರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ಫಲಿಸಿದೇ ಬಾಲಕಿ ರಶ್ಮಿ ಸಾವನ್ನಪ್ಪಿದರೆ, ಇತ್ತ ಬಾಲಕ ಅಭಿಷೇಕ್ ಸ್ಥಿತಿ ಗಂಭೀರವಾಗಿದೆ. ಕಳೆದ ಹಲವು ತಿಂಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಇಬ್ಬರು, ಮದುವೆಗೆ ಮನೆಯವರು ವಿರೋಧ ವ್ಯಕ್ತಪಡಿಸುವ ಆತಂಕ ಹಿನ್ನೆಲೆ
ವಿಷಸೇವಿಸಿ ಬಳಿಕ ವೇಲ್​ನಿಂದ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಕುರಿತು ಮಾಸ್ತಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:04 pm, Sun, 6 October 24