Sign In

By signing in or creating an account, you agree with Associated Broadcasting Company's Terms & Conditions and Privacy Policy.

Breast Cancer In Men : ಮಹಿಳೆಯರನ್ನಷ್ಟೇ ಅಲ್ಲ ಪುರುಷರನ್ನು ಕಾಡುತ್ತೆ ಈ ಭಯಾನಕ ಸ್ತನ ಕ್ಯಾನ್ಸರ್

ಇತ್ತೀಚೆಗಿನ ದಿನಗಳಲ್ಲಿ ಮಾರಕ ಕಾಯಿಲೆಗಳು ಕಾಡಲು ವಯಸ್ಸಿನ ಹಂಗಿಲ್ಲ. ವಯಸ್ಸಿನ ಬೇಧವಿಲ್ಲದೇ ಅತಿ ಭಯಾನಕ ಕಾಯಿಲೆಗಳು ದೇಹವನ್ನು ವಕ್ಕರಿಸಿಕೊಂಡು ಬಿಡುತ್ತವೆ. ಜಗತ್ತಿನಾದಂತ್ಯ ಮಹಿಳೆಯರು ಸ್ತನ ಕ್ಯಾನ್ಸರ್ ನಂತಹ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಇದೀಗ ಪುರುಷರಲ್ಲೂ ಸ್ತನ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ. ಪುರುಷರಲ್ಲಿ ಸ್ತನ ಕ್ಯಾನ್ಸರ್ ಲಕ್ಷಣಗಳು ಹೇಗಿರುತ್ತದೆ ಹಾಗೂ ಎಚ್ಚರಿಕೆ ಕ್ರಮಗಳಾವುವು ಎನ್ನುವುದರ ಸಂಪೂರ್ಣ ಮಾಹಿತಿಯು ಇಲ್ಲಿದೆ.

Breast Cancer In Men : ಮಹಿಳೆಯರನ್ನಷ್ಟೇ ಅಲ್ಲ ಪುರುಷರನ್ನು ಕಾಡುತ್ತೆ ಈ ಭಯಾನಕ ಸ್ತನ ಕ್ಯಾನ್ಸರ್
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 29, 2024 | 12:37 PM

ವಿಶ್ವದಾದಂತ್ಯ ಕ್ಯಾನ್ಸರ್ ನಂತಹ ಮಹಾಮಾರಿಗೆ ಬಲಿಯಾಗುತ್ತಿರುವ ಸಂಖ್ಯೆಯು ಏರಿಕೆಯಾಗುತ್ತಿದೆ. ಈ ಮಹಿಳೆಯರು ವಯಸ್ಸಲ್ಲದ ವಯಸ್ಸಿನಲ್ಲಿ ಸ್ತನ ಕ್ಯಾನ್ಸರ್ ಗೆ ಬಲಿಯಾಗುತ್ತಿದ್ದಾರೆ. ಆದರೆ ತಜ್ಞರ ಪ್ರಕಾರ ಮಹಿಳೆಯರಂತೆಯೇ ಪುರುಷರಲ್ಲಿಯೂ ಸ್ತನ ಕ್ಯಾನ್ಸರ್‌ ಕಾಣಿಸಿಕೊಳ್ಳುತ್ತವೆಯಂತೆ. ಸ್ತನ ಕ್ಯಾನ್ಸರ್ ಲಕ್ಷಣಗಳು ಮಹಿಳೆಯರಂತೆ ಪುರುಷರಲ್ಲಿ ಒಂದೇ ರೀತಿಯಿರುತ್ತದೆ.

ಗಂಡು ಮಗು ಬೆಳೆದಂತೆ ಸ್ತನಗಳು ಗಣನೀಯವಾಗಿ ವೃದ್ಧಿಯಾಗುವುದಿಲ್ಲ. ಆದರೆ ಈ ಅಂಗಾಂಶಗಳ ಕೋಶಗಳಲ್ಲಿ ಯಾವುದೇ ಕೆಲವು ಕೋಶಗಳು ಅಸಹಜವಾಗಿ ವಿಭಜಿಸಲಾರಂಭಿಸಿದರೆ ಅದು ಪುರುಷ ಸ್ತನ ಕ್ಯಾನ್ಸರ್ ಗೆ ಕಾರಣವಾಗಬಹುದು. ಕಾಲ ಕ್ರಮೇಣ ವಿಭಜನೆ ತೀವ್ರಗೊಂಡು ಗೆಡ್ಡೆಯಾಗಿ ಮಾರ್ಪಡಾಗುತ್ತದೆ. ಈ ರೀತಿಯಾಗಿ ಪುರುಷರಲ್ಲಿ ಸ್ತನ ಕ್ಯಾನ್ಸರ್ ಕಾಣಿಸಿಕೊಳ್ಳುತ್ತವೆ. ಆದರೆ ಮಹಿಳೆಯರಿಗೆ ಹೋಲಿಕೆ ಮಾಡಿದರೆ ಪುರುಷರಿಗೆ ಈ ಕಾಯಿಲೆ ಬರುವ ಸಾಧ್ಯತೆಯೂ ತೀರಾ ಕಡಿಮೆಯಾಗಿದ್ದು, ಅರವತ್ತು ವಯಸ್ಸಿನ ನಂತರದಲ್ಲಿ ಈ ಕ್ಯಾನ್ಸರ್‌ ಬರುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ.

ಪುರುಷರ ಸ್ತನ ಕ್ಯಾನ್ಸರ್ ಗೆ ಕಾರಣಗಳು

ಪುರುಷರಲ್ಲಿ ಸ್ತನ ಕ್ಯಾನ್ಸರ್‌ ಬರಲು ಅನುವಂಶೀಯತೆಯು ಕಾರಣವಾಗಿರಬಹುದು. ಅದಲ್ಲದೇ, ಇಸ್ಟ್ರೋಜನ್‌ ಹಾರ್ಮೋನಿನ ಔಷಧಿಗಳ ಸೇವನೆ, ವೃಷಣದ ಕ್ಯಾನ್ಸರ್‌ಗೆ ನೀಡುವ ಹಾರ್ಮೋನ್‌ ಥೆರಪಿಗಳು ಅತಿಯಾದ ಬೊಜ್ಜು ಹೀಗೆ ಹತ್ತು ಹಲವು ಕಾರಣಗಳು ಸೇರಿಕೊಂಡಿವೆ.

ಇದನ್ನೂ ಓದಿ: ಅಪಾಯಕಾರಿ ಸ್ತನ ಕ್ಯಾನ್ಸರ್ ಬಾರದಂತೆ ಮುನ್ನೆಚ್ಚರಿಕೆ ವಹಿಸುವುದು ಹೇಗೆ?

ಪುರುಷರಲ್ಲಿ ಸ್ತನ ಕ್ಯಾನ್ಸರ್ ಲಕ್ಷಣಗಳು

* ಸ್ತನಗಳಲ್ಲಿ ಗಡ್ಡೆಗಳು ಅಥವಾ ಎದೆಯ ಭಾಗವು ದಪ್ಪವಾದ ಅನುಭವ

* ಮೊಲೆತೊಟ್ಟುಗಳ ಬದಲಾವಣೆಗಳು

* ಚರ್ಮದ ಬದಲಾವಣೆಗಳು

* ಸ್ತನ ಪ್ರದೇಶಗಳಲ್ಲಿ ವಿಪರೀತ ನೋವು

ರೋಗನಿರ್ಣಯ ಮತ್ತು ಚಿಕಿತ್ಸೆ ಹೇಗೆ?

ಪುರುಷ ಸ್ತನ ಕ್ಯಾನ್ಸರ್ ರೋಗವನ್ನು ಪತ್ತೆ ಹಚ್ಚಲು ದೈಹಿಕ ಪರೀಕ್ಷೆ, ಇಮೇಜಿಂಗ್ ಪರೀಕ್ಷೆಗಳು ಮತ್ತು ಬಯಾಪ್ಸಿಯನ್ನು ಮಾಡಲಾಗುತ್ತದೆ. ಪ್ರಾರಂಭಿಕ ಹಂತದಲ್ಲೂ ಶಸ್ತ್ರಚಿಕಿತ್ಸೆ, ಕೀಮೋಥೆರಪಿ ಮತ್ತು ವಿಕಿರಣ ಚಿಕಿತ್ಸೆಗಳನ್ನು ನೀಡಿ ರೋಗ ಗುಣ ಪಡಿಸಲು ಸಾಧ್ಯ.

ಸ್ತನ ಕ್ಯಾನ್ಸರ್ ಬಾರದಂತೆ ಎಚ್ಚರಿಕಾ ಕ್ರಮಗಳು

* ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳ ಸೇವನೆಯತ್ತ ಗಮನ ಕೊಡಿ

* ದೇಹಕ್ಕೆ ಇಂತಿಷ್ಟು ಗಂಟೆಗಳ ವಿಶ್ರಾಂತಿ ಅಗತ್ಯ, ಹೀಗಾಗಿ ನಿದ್ರೆಯು ಸರಿಯಾಗಿರಲಿ.

* ಧೂಮಪಾನ, ಮದ್ಯಪಾನದಂತಹ ದುರಭ್ಯಾಸದಿಂದ ದೂರವಿರಿ.

* ಸ್ತನ ಕ್ಯಾನ್ಸರ್ ಲಕ್ಷಣಗಳು ಕಂಡು ಬಂದರೆ ತಕ್ಷಣವೇ ವೈದ್ಯರನ್ನು ಭೇಟಿಯಾಗಿ ಸರಿಯಾಗಿ ಚಿಕಿತ್ಸೆ ಪಡೆದುಕೊಳ್ಳುವುದರಿಂದಳ್ಳುವುದರಿಂದ ಅಪಾಯದಿಂದ ಪಾರಾಗಲು ಸಾಧ್ಯ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್