AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Touch Me Not Plant: ಮುಟ್ಟಿದರೆ ಮುನಿ ಸಸ್ಯದಲ್ಲಿದೆ ಆರೋಗ್ಯ, ಇಲ್ಲಿದೆ ಸರಳ ಮನೆ ಮದ್ದುಗಳು

ನಮ್ಮ ಸುತ್ತ ಮುತ್ತಲಿನಲ್ಲಿರುವ ಕೆಲವೊಂದು ಸಸ್ಯಗಳಲ್ಲಿ ನಂಬಲು ಸಾಧ್ಯವಾಗದಷ್ಟು ಔಷಧೀಯ ಗುಣಗಳನ್ನು ಹೊಂದಿರುತ್ತವೆ. ಆದರೆ ಹೆಚ್ಚಿನವರು ಈ ಕೆಲವು ಸಸ್ಯಗಳನ್ನು ಕಳೆ ಸಸ್ಯಗಳೆಂದರೆ ನಿರ್ಲಕ್ಷ್ಯ ಮಾಡುತ್ತಾರೆ. ಅಂತಹ ಸಸ್ಯಗಳಲ್ಲಿ ಮುಟ್ಟಿದರೆ ಮುನಿ ಸಸ್ಯ ಕೂಡ ಒಂದು. ಮುಟ್ಟಿದರೆ ಮುನಿ ಸಸ್ಯವನ್ನು ನಾಚಿಕೆ ಮುಳ್ಳು ಎಂದು ಕರೆಯುತ್ತಾರೆ. ಮುಟ್ಟಿದ ಕೂಡಲೇ ಎಲೆಗಳು ಮಡಚಿಕೊಳ್ಳುವ ಈ ಸಸ್ಯದ ಎಲೆ, ಕಾಂಡ, ಬೇರುಗಳಲ್ಲಿ ಔಷಧೀಯ ಗುಣಗಳು ಹೇರಳವಾಗಿದ್ದು, ಮನೆ ಮದ್ದಿನಲ್ಲಿ ಬಳಕೆ ಮಾಡುವ ಮೂಲಕ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಬಹುದಾಗಿದೆ

Touch Me Not Plant: ಮುಟ್ಟಿದರೆ ಮುನಿ  ಸಸ್ಯದಲ್ಲಿದೆ ಆರೋಗ್ಯ, ಇಲ್ಲಿದೆ ಸರಳ ಮನೆ ಮದ್ದುಗಳು
ಸಾಯಿನಂದಾ
| Edited By: |

Updated on: Mar 29, 2024 | 2:49 PM

Share

ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರಕೃತಿ ಹಲವಾರು ಔಷಧೀಯ ಗುಣಗಳನ್ನು ಹೊಂದಿರುವ ಸಸ್ಯಗಳನ್ನು ನೀಡಿದೆ. ಆದರೆ ಹೆಚ್ಚಿನವರಿಗೆ ಇಂತಹ ಸಸ್ಯಗಳ ಬಗ್ಗೆ ಮಾಹಿತಿಯಿಲ್ಲ. ಹಳ್ಳಿಯ ಕಡೆಗಳಲ್ಲಿ ಎಲ್ಲೆಂದರಲ್ಲಿ ಹಬ್ಬಿಕೊಂಡಿರುವ ಕಳೆ ಜಾತಿಗೆ ಸೇರಿದ ಮುಟ್ಟಿದ ಮುನಿ ಸಸ್ಯದ ಪರಿಚಯವು ಎಲ್ಲರಿಗೂ ಇದ್ದೆ ಇರುತ್ತದೆ. ಈ ಗಿಡವು ಚಿಕ್ಕದಾಗಿದ್ದು ಇದು ಸಣ್ಣ ಸಣ್ಣ ಮುಳ್ಳುಗಳನ್ನು ಹೊಂದಿದ್ದು ತಿಳಿ ನೇರಳೆ ಬಣ್ಣದ ಸಣ್ಣ ಹೂವುಗಳನ್ನೂ ಹೊಂದಿರುತ್ತದೆ. ಆದರೆ ಈ ಹೂವುಗಳು ತುಂಬಾ ಆಕರ್ಷಕವಾಗಿರುತ್ತವೆ. ಈ ಗಿಡವು ಹಲವಾರು ಆರೋಗ್ಯ ಸಮಸ್ಯೆಗಳಿಗೆ ಔಷಧವಾಗಿ ಬಳಕೆ ಮಾಡಲಾಗುವ ಕಾರಣ ಇದರ ಆರೋಗ್ಯ ಪ್ರಯೋಜನಗಳು ಅಧಿಕವಾಗಿದೆ.

ಮುಟ್ಟಿದರೆ ಮುನಿ ಸಸ್ಯದ ಮನೆಮದ್ದುಗಳು

  • ಊತ ಉಂಟಾದಾಗ ಮುಟ್ಟಿದರೆ ಮುನಿ ಗಿಡವನ್ನು ಅರೆದು ಊತವಾದ ಜಾಗಕ್ಕೆ ಹಚ್ಚಿ, ಬಟ್ಟೆಯಿಂದ ಕಟ್ಟಿದರೆ ಬಾವು ಬೇಗನೆ ಕಡಿಮೆಯಾಗುತ್ತದೆ.
  • ಕಿಡ್ನಿನಲ್ಲಿ ಕಲ್ಲು ಹೊಂದಿರುವವರು ಈ ಗಿಡದ ಬೇರಿನ ಕಷಾಯ ಮಾಡಿ ಕುಡಿಯುವುದರಿಂದ ಈ ಸಮಸ್ಯೆಯು ದೂರವಾಗುತ್ತದೆ.
  • ಮಹಿಳೆಯರಲ್ಲಿ ಮುಟ್ಟಿನ ವೇಳೆಯಲ್ಲಿ ಅತ್ಯಧಿಕ ರಕ್ತಸ್ರಾವವಾಗುತ್ತಿದ್ದರೆ ಈ ಗಿಡವನ್ನು ಚೆನ್ನಾಗಿ ತೊಳೆದು ನೀರು ಸೇರಿಸಿ ಚೆನ್ನಾಗಿ ಕುದಿಸಬೇಕು. ಅದಕ್ಕೆ ಒಂದು ಚಿಟಿಕೆ ಸ್ಪಟಿಕ ಸೇರಿಸಿ, ದಿನಕ್ಕೆ ಎರಡರಿಂದ ಮೂರು ಬಾರಿ ಸೇವಿಸುತ್ತ ಬಂದರೆ ಈ ಸಮಸ್ಯೆಯು ಗುಣಮುಖವಾಗುತ್ತದೆ.
  • ಮಲಬದ್ಧತೆ ಸಮಸ್ಯೆಯಿರುವವರು ಮುಟ್ಟಿದರೆ ಮುನಿ ಗಿಡದ ಎಲೆ ಮತ್ತು ಬೇರನ್ನು ಚೆನ್ನಾಗಿ ಜಜ್ಜಿ ರಸ ತೆಗೆದು, ಈ ರಸವನ್ನು ಒಂದು ಲೋಟ ನೀರಿಗೆ ಹಾಕಿ ಕುಡಿಯುವುದು ಉತ್ತಮ.
  • ಬಾಣಂತಿಯರು ಹೊಟ್ಟೆ ಕರಗಿಸಲು ಈ ಮುಟ್ಟಿದರೆ ಮುನಿ ಗಿಡದ ಎಲೆಯ ರಸವನ್ನು ತೆಗೆದು ಹೊಟ್ಟೆಯ ಭಾಗಕ್ಕೆ ಹಚ್ಚಿ ಒಂದೆರೆಡು ನಿಮಿಷ ಮಸಾಜ್ ಮಾಡುವುದು ಒಳ್ಳೆಯದು.
  • ನಾಚಿಕೆ ಮುಳ್ಳು ಸಸ್ಯದ ರಸವನ್ನು ತೆಗೆದು ಮೊಡವೆಯಿರುವ ಜಾಗಕ್ಕೆ ಲೇಪಿಸುವುದರಿಂದ ಮೊಡವೆಗಳು ಮಾಯಾವಾಗಿ ಕಲೆಗಳು ಉಳಿಯುವುದಿಲ್ಲ.
  • ಗಾಯವಾಗಿ ರಕ್ತ ಸುರಿಯುತ್ತಿದ್ದರೆ, ಈ ಗಿಡದ ಎಲೆಯನ್ನು ಜಜ್ಜಿ, ಗಾಯಕ್ಕೆ ಹಚ್ಚಿದರೆ ರಕ್ತ ಸುರಿಯುವುದು ನಿಂತು, ಗಾಯವು ಬೇಗನೆ ವಾಸಿಯಾಗುತ್ತದೆ.
  • ಪುರುಷರಲ್ಲಿನ ಪ್ರೊಸ್ಟೇಟ್ ಗ್ರಂಥಿಯ ಸಮಸ್ಯೆಯಿದ್ದರೆ ಈ ಮುಟ್ಟಿದರೆ ಮುನಿಯ ಸೊಪ್ಪನ್ನು ಅರೆದು ಉಂಡೆ ಮಾಡಿ ನಲವತ್ತೈದು ದಿನಗಳ ಕಾಲ ಪ್ರತಿದಿನ ತೆಗೆದುಕೊಳ್ಳುವುದು ಉತ್ತಮ ಔಷಧಿ ಎನ್ನಬಹುದು.
  • ಪದೇ ಪದೇ ಮೂತ್ರ ವಿಸರ್ಜನೆಯಾಗುತ್ತಿದ್ದರೆ ಈ ಮುಟ್ಟಿದರೆ ಮುನಿ ಸಸ್ಯದ ಕಷಾಯ ಮಾಡಿ ಸೇವಿಸುವುದು ಪರಿಣಾಮಕಾರಿ ಮನೆ ಮದ್ದು.
  • ಮೂಲವ್ಯಾಧಿಯಿರುವವರು ಮುಟ್ಟಿದರೆ ಮುನಿ ಗಿಡವನ್ನು ಒಣಗಿಸಿ ಪುಡಿ ಮಾಡಿಟ್ಟುಕೊಂಡು, ಒಂದು ಲೋಟ ನೀರಿಗೆ ಈ ಪುಡಿಯನ್ನು ಸೇರಿಸಿ ಖಾಲಿ ಹೊಟ್ಟೆಗೆ ಕುಡಿಯುವುದರಿಂದ ಈ ಸಮಸ್ಯೆಯು ದೂರವಾಗುತ್ತದೆ.

ಈ ಮನೆ ಮದ್ದನ್ನೊಮ್ಮೆ ತಯಾರಿಸುವ ಮುನ್ನ ತಜ್ಞರ ಸಲಹೆಗಳನ್ನು ಪಡೆಯುವುದು ಉತ್ತಮ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?