AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hot Water:ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿಯಿರಿ ಆರೋಗ್ಯ ಸಮಸ್ಯೆಗೆ ಹೇಳಿ ಗುಡ್ ಬೈ

ದಿನನಿತ್ಯ ಜೀವನ ಶೈಲಿಯಲ್ಲಿನ ಕೆಲವು ಅಭ್ಯಾಸಗಳಿಂದ ನಷ್ಟಕ್ಕಿಂತ ಆರೋಗ್ಯ ಲಾಭಗಳೇ ಹೆಚ್ಚು. ಆದರೆ ಹೆಚ್ಚಿನವರಿಗೆ ಈ ವಿಚಾರವು ತಿಳಿದಿರುವುದಿಲ್ಲ.ಕೆಲವರು ದಿನನಿತ್ಯ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರನ್ನು ಕುಡಿಯುವುದನ್ನು ನೀವು ನೋಡಿರಬಹುದು. ಈ ರೀತಿಯ ಅಭ್ಯಾಸದಿಂದ ಆರೋಗ್ಯ ಪ್ರಯೋಜನಗಳು ಅಧಿಕವಾಗಿದೆ ಎನ್ನುವುದು ಅಧ್ಯಯನದಿಂದ ಸಾಭೀತಾಗಿದೆ.

Hot Water:ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿಯಿರಿ ಆರೋಗ್ಯ ಸಮಸ್ಯೆಗೆ ಹೇಳಿ  ಗುಡ್ ಬೈ
ಸಾಯಿನಂದಾ
| Updated By: ಅಕ್ಷತಾ ವರ್ಕಾಡಿ|

Updated on: Mar 28, 2024 | 6:37 PM

Share

ಆರೋಗ್ಯಕ್ಕಿಂತ ಮಿಗಿಲಾದ ಸಂಪತ್ತು ಮತ್ತೊಂದಿಲ್ಲ. ಹೀಗಾಗಿ ಬಹುತೇಕರು ಆರೋಗ್ಯವನ್ನು ಕಾಪಾಡಿಕೊಳ್ಳಲು ನಾನಾ ರೀತಿಯ ಸಾಹಸಗಳನ್ನು ಮಾಡುವುದನ್ನು ನೋಡಿರಬಹುದು. ಬೆಳಗ್ಗೆ ಎದ್ದ ಕೂಡಲೇ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಅಭ್ಯಾಸಗಳಿರುತ್ತದೆ. ಬೆಳಗ್ಗೆ ಎದ್ದ ಕೂಡಲೇ ಪ್ರತಿಯೊಬ್ಬರೂ ಮಾಡುವ ಕೆಲಸವೆಂದರೆ ಮುಖ ತೊಳೆದು ತಿಂಡಿ ತಿನ್ನುವುದು. ಆದರೆ ಕೆಲವರು ಮುಖವನ್ನು ತೊಳೆದು ಸ್ವಚ್ಛವಾಗಿ ಯೋಗ ಮಾಡಲು ಹೋಗ್ತಾರೆ. ಆದರೆ ಬಾಯಿಯನ್ನು ಸ್ವಚ್ಛ ಪಡಿಸದೆ ಬಿಸಿನೀರನ್ನು ಒಂದು ಲೋಟ ಪೂರ್ತಿಯಾಗಿ ಕುಡಿಯುವುದರಿಂದ ಅನಾರೋಗ್ಯ ಸಮಸ್ಯೆಗಳಿಗೆ ಗುಡ್ ಬೈ ಹೇಳಬಹುದಾಗಿದೆ.

  1. ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಬಿಸಿ ನೀರು ಕುಡಿಯುವುದರಿಂದ ದೇಹದಲ್ಲಿರುವಂತಹ ವಿಷ ಜೀವಾಣುಗಳು ದೇಹದಿಂದ ಹೊರ ಹೋಗುತ್ತವೆ.
  2. ಬಿಸಿ ನೀರಿನ ಸೇವನೆಯಿಂದ ಆಹಾರವು ಜೀರ್ಣವಾಗಲು ಸಹಾಯ ಮಾಡುತ್ತದೆ.
  3. ಬಿಸಿ ನೀರನ್ನು ಕುಡಿಯುತ್ತಾ ಬಂದರೆ ಇದು ರಕ್ತವನ್ನು ಶುದ್ಧಿಕರಿಸಿದ್ಧಿಕರಿಸಿ ಆರೋಗ್ಯವನ್ನು ಕಾಪಾಡುತ್ತದೆ.
  4. ಬಿಸಿ ನೀರು ಕುಡಿಯುವ ಅಭ್ಯಾಸವನ್ನು ಬೆಳೆಸಿಕೊಂಡರೆ ಮಲಬದ್ಧತೆ ಸಮಸ್ಯೆಯು ನಿವಾರಣೆಯಾಗುತ್ತದೆ.
  5. ಬೆಳಗ್ಗೆ ಎದ್ದ ಕೂಡಲೇ ಬಿಸಿ ನೀರು ಕುಡಿಯುವ ಅಭ್ಯಾಸವು ದೇಹದಲ್ಲಿರುವ ಬೇಡದ ಕೊಬ್ಬನ್ನು ಕರಗಿಸುತ್ತದೆ. ಅದಲ್ಲದೇ ತೂಕ ನಷ್ಟಕ್ಕೂ ಸಹಕಾರಿಯಾಗಿದೆ.
  6. ಬಿಸಿ ನೀರು ದೇಹದ ಉಷ್ಣತೆಯನ್ನು ಹೆಚ್ಚಿಸಿ ಚಯಾಪಚಯ ಕ್ರಿಯೆಗಳನ್ನು ಸುಧಾರಿಸುತ್ತದೆ. ಅಷ್ಟೇ ಅಲ್ಲದೇ, ಮೂತ್ರಪಿಂಡಗಳು ಚೆನ್ನಾಗಿ ಕೆಲಸ ಮಾಡಲು ಸಹಾಯಕವಾಗಿದೆ.
  7. ದಿನ ನಿತ್ಯ ಬಿಸಿ ನೀರು ಕುಡಿಯುವ ಅಭ್ಯಾಸದಿಂದ ವಯಸ್ಸಾಗುವಂತಹ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ.
  8. ಚರ್ಮದಲ್ಲಿರುವಂತಹ ಕೋಶಗಳನ್ನು ರಿಪೇರಿ ಮಾಡಿ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಚರ್ಮದ ಮೇಲೆ ಕಪ್ಪು ಕಲೆಗಳು ಬಾರದಂತೆ ನೋಡಿಕೊಳ್ಳುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ