ಹೊಳೆಯುವ ತ್ವಚೆ ಪಡೆಯಲು ಕಾಲಜನ್ ತುಂಬಾ ಮುಖ್ಯ; ದೇಹದಲ್ಲಿ ಕಾಲಜನ್ ಹೆಚ್ಚಿಸುವುದು ಹೇಗೆ?

ಚರ್ಮದ ಆರೋಗ್ಯಕ್ಕೆ ಕಾಲಜನ್ ತುಂಬಾ ಮುಖ್ಯ. ದೇಹದಲ್ಲಿ ಕಾಲಜನ್ ಕೊರತೆಯು ಮುಖದಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಸುಕ್ಕು ಉಂಟಾಗಲು ಕಾರಣವಾಗುತ್ತದೆ. ಕಾಲಜನ್ ಕಡಿಮೆಯಾಗಲು ಕಾರಣವೇನು? ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಹೊಳೆಯುವ ತ್ವಚೆ ಪಡೆಯಲು ಕಾಲಜನ್ ತುಂಬಾ ಮುಖ್ಯ; ದೇಹದಲ್ಲಿ ಕಾಲಜನ್ ಹೆಚ್ಚಿಸುವುದು ಹೇಗೆ?
Collagen
Follow us
ಅಕ್ಷತಾ ವರ್ಕಾಡಿ
|

Updated on: Mar 27, 2024 | 6:38 PM

ಕೆಲವರು ಚಿಕ್ಕ ವಯಸ್ಸಿನಲ್ಲೇ ಮುದುಕರಂತೆ ಕಾಣಿಸಿಕೊಳ್ಳುತ್ತಾರೆ. ಇದಕ್ಕೆ ಕಾರಣ ಅವರ ದೇಹದಲ್ಲಿ ಕಡಿಮೆ ಕಾಲಜನ್ ಉತ್ಪತ್ತಿಯಾಗುವುದು.ಕಡಿಮೆ ಕೊಲಾಜೆನ್ ಸಮಸ್ಯೆಯಿಂದ ಚಿಕ್ಕವಯಸ್ಸಿನಲ್ಲಿಯೇ ಚರ್ಮ ಸುಕ್ಕುಗಟ್ಟಿದಂತೆ ಕಾಣುತ್ತದೆ. ಇದು ದೇಹದಲ್ಲಿ ಕಂಡುಬರುವ ಒಂದು ರೀತಿಯ ಪ್ರೋಟೀನ್. ಕಾಲಜನ್ ಕಡಿಮೆಯಾಗಲು ಕಾರಣವೇನು? ವಯಸ್ಸಾಗುವುದರ ಹೊರತಾಗಿ, ನಿಮ್ಮ ಚರ್ಮದಲ್ಲಿ ಕಾಲಜನ್ ಮಟ್ಟ ಕಡಿಮೆ ಮಾಡುವ ಮೂರು ಮುಖ್ಯ ವಿಷಯಗಳೆಂದರೆ ಸೂರ್ಯನ ಕಿರಣ, ಧೂಮಪಾನ ಮತ್ತು ಸಕ್ಕರೆ ಸೇವನೆ. ಇಂತಹ ಪರಿಸ್ಥಿತಿಯಲ್ಲಿ ಈ ಅಂಶಗಳನ್ನು ತಪ್ಪಿಸುವ ಮೂಲಕ ಕಾಲಜನ್ ಕೊರತೆಯನ್ನು ತಡೆಯಬಹುದು.

ಸಿಟ್ರಸ್ ಹಣ್ಣು:

ವರದಿಗಳ ಪ್ರಕಾರ, ವಿಟಮಿನ್ ಸಿ ಕಾಲಜನ್ ಉತ್ಪಾದನೆಯನ್ನು ಬೆಂಬಲಿಸುತ್ತದೆ. ಹಾಗಾಗಿ ಸಿಟ್ರಸ್ ಹಣ್ಣುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದಲ್ಲಿ ಕಾಲಜನ್ ಉತ್ಪಾದನೆಯು ಸರಿಯಾಗಿ ನಡೆಯುತ್ತದೆ. ಅದಕ್ಕಾಗಿ ನೀವು ನಿಮ್ಮ ದೈನಂದಿನ ಆಹಾರದಲ್ಲಿ ಕಿತ್ತಳೆ, ದ್ರಾಕ್ಷಿ ಮತ್ತು ನಿಂಬೆಹಣ್ಣುಗಳನ್ನು ಸೇರಿಸಿಕೊಳ್ಳಬಹುದು.

ಬೆರ್ರಿ ಹಣ್ಣುಗಳು:

ಬೆರ್ರಿಗಳು ಕಾಲಜನ್ ಅನ್ನು ಹೆಚ್ಚಿಸಲು ಉತ್ತಮ ಆಯ್ಕೆಯಾಗಿದೆ. ಸ್ಟ್ರಾಬೆರಿಗಳು ವಾಸ್ತವವಾಗಿ ಕಿತ್ತಳೆಗಿಂತ ಹೆಚ್ಚು ವಿಟಮಿನ್ ಸಿ ಅನ್ನು ಒದಗಿಸುತ್ತವೆ. ಇದಲ್ಲದೆ, ರಾಸ್ಬೆರ್ರಿಸ್, ಬ್ಲೂಬೆರ್ರಿಗಳು, ಬ್ಲ್ಯಾಕ್ಬೆರಿಗಳು ಸಹ ದೊಡ್ಡ ಪ್ರಮಾಣದ ಕಾಲಜನ್ ಅನ್ನು ಒದಗಿಸುತ್ತವೆ.

ಇದನ್ನೂ ಓದಿ: ನುಂಗಲು ಕಷ್ಟವಾಗುತ್ತಿದ್ದರೆ ನಿರ್ಲಕ್ಷ್ಯ ಬೇಡ; ಕ್ಯಾನ್ಸರ್ ಲಕ್ಷಣವೂ ಇದ್ದೀತು ಜೋಪಾನ!

ಹಸಿರು ತರಕಾರಿಗಳು:

ಪಾಲಕ್, ಮೆಂತ್ಯ ಮತ್ತು ಎಲೆಕೋಸು ಎಲೆಗಳು ಕಾಲಜನ್ ಉತ್ಪಾದನೆಗೆ ಒಳ್ಳೆಯದು. ಇದು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಕ್ಲೋರೊಫಿಲ್ ಸೇವನೆಯು ಚರ್ಮದಲ್ಲಿ ಕಾಲಜನ್ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಕೆಲವು ಅಧ್ಯಯನಗಳು ತೋರಿಸಿವೆ.

ಮೊಟ್ಟೆ:

ಮೊಟ್ಟೆಯ ಬಿಳಿಭಾಗವು ಹೆಚ್ಚಿನ ಪ್ರಮಾಣದಲ್ಲಿ ಪ್ರೋಲಿನ್ ಅನ್ನು ಹೊಂದಿರುತ್ತದೆ. ಇದು ಕಾಲಜನ್ ಉತ್ಪಾದನೆಗೆ ಅಗತ್ಯವಾದ ಅಮೈನೋ ಆಮ್ಲಗಳಲ್ಲಿ ಒಂದಾಗಿದೆ. ನಿಮ್ಮ ಚರ್ಮವು ಬಿಗಿಯಾಗಿರಬೇಕೆಂದು ನೀವು ಬಯಸಿದರೆ, ನಿಯಮಿತವಾಗಿ ಮೊಟ್ಟೆಗಳನ್ನು ಸೇವಿಸುವುದು ನಿಮಗೆ ಪ್ರಯೋಜನಕಾರಿಯಾಗಿದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ