Urban Local Bodies Election: ಮತ ಕೇಳುವ ವಿಚಾರಕ್ಕೆ ಮತಗಟ್ಟೆ ಬಳಿ JDS, ಕಾಂಗ್ರೆಸ್ ಕಾರ್ಯಕರ್ತರ ಹೊಡೆದಾಟ

| Updated By: ಆಯೇಷಾ ಬಾನು

Updated on: Dec 27, 2021 | 12:39 PM

ರಾಮನಗರ ಜಿಲ್ಲೆ ಬಿಡದಿಯ ವಾರ್ಡ್ ನಂಬರ್ 1ರಲ್ಲಿ ಕಾರ್ಯಕರ್ತರ ನಡುವೆ ಭಾರಿ ಗಲಾಟೆಯಾಗಿದೆ. ರಕ್ತ ಬರುವಂತೆ ಕಾರ್ಯಕರ್ತರು ಹೊಡೆದಾಡಿಕೊಂಡಿದ್ದಾರೆ.

Urban Local Bodies Election: ಮತ ಕೇಳುವ ವಿಚಾರಕ್ಕೆ ಮತಗಟ್ಟೆ ಬಳಿ JDS, ಕಾಂಗ್ರೆಸ್ ಕಾರ್ಯಕರ್ತರ ಹೊಡೆದಾಟ
ಮತ ಕೇಳುವ ವಿಚಾರಕ್ಕೆ ಮತಗಟ್ಟೆ ಬಳಿ JDS, ಕಾಂಗ್ರೆಸ್ ಕಾರ್ಯಕರ್ತರ ಹೊಡೆದಾಟ
Follow us on

ರಾಮನಗರ: ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಇಂದು ಮತದಾನ ಶುರುವಾಗಿದೆ. ಐದು ನಗರಸಭೆ, 19 ಪುರಸಭೆ, 34 ಪಟ್ಟಣ ಪಂಚಾಯಿತಿಗಳ ಒಟ್ಟು 1185 ವಾರ್ಡ್‌ಗಳಲ್ಲಿಂದು ವೋಟಿಂಗ್ ನಡೆಯುತ್ತಿದೆ. ಆದ್ರೆ ಬಿಡದಿ‌ ಪುರಸಭೆ ಚುನಾವಣೆ ಹಿನ್ನೆಲೆ ಮತಗಟ್ಟೆ ಬಳಿ JDS, ಕಾಂಗ್ರೆಸ್ ಕಾರ್ಯಕರ್ತರು ಹೊಡೆದಾಡಿಕೊಂಡ ಘಟನೆ ನಡೆದಿದೆ.

ರಾಮನಗರ ಜಿಲ್ಲೆ ಬಿಡದಿಯ ವಾರ್ಡ್ ನಂಬರ್ 1ರಲ್ಲಿ ಕಾರ್ಯಕರ್ತರ ನಡುವೆ ಭಾರಿ ಗಲಾಟೆಯಾಗಿದೆ. ರಕ್ತ ಬರುವಂತೆ ಕಾರ್ಯಕರ್ತರು ಹೊಡೆದಾಡಿಕೊಂಡಿದ್ದಾರೆ. ಜೆಡಿಎಸ್ನ ಯಲ್ಲಪ್ಪ ಕಾಂಗ್ರೆಸ್ನ ಸಿದ್ಧರಾಜು ನಡುವೆ ಮತ ಕೇಳುವ ವಿಚಾರವಾಗಿ ಪರಸ್ಪರ ಗಲಾಟೆ ನಡೆದಿದ್ದು ಹೊಡೆದಾಡಿಕೊಂಡಿದ್ದಾರೆ. ಸದ್ಯ ಪೊಲೀಸರು ಮಧ್ಯಪ್ರವೇಶ ಮಾಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

ಇನ್ನು ಮತ್ತೊಂದು ಕಡೆ ಇದೇ ರೀತಿಯ ಘಟನೆ ಮರುಕಳಿಸಿದೆ. ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ವಾಗ್ವಾದ ನಡೆದಿದ್ದು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳ ಪಟ್ಟಣದ 3ನೇ ವಾರ್ಡ್ ಮತಗಟ್ಟೆ ಬಳಿ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಮತಯಾಚನೆ ಮಾಡ್ತಿದ್ದರು. ಮತಗಟ್ಟೆ ಬಳಿಯೇ ಮತಯಾಚನೆ ವಿಚಾರವಾಗಿ ಶುರುವಾದ ವಾಗ್ವಾದ ಜಗಳಕ್ಕೆ ಇಳಿದು ಹಲ್ಲೆ ನಡೆದಿದೆ. ಮಧ್ಯಪ್ರವೇಶ ಮಾಡಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಗದಗ: ಮತಗಟ್ಟೆ ಬಳಿಯೇ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ಗಲಾಟೆ
ಗದಗದ ಬೆಟಗೇರಿಯ ವಾರ್ಡ್ ನಂಬರ್ 10ರ ಮತಗಟ್ಟೆ ಬಳಿಯೇ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರು ಗಲಾಟೆ ಮಾಡಿಕೊಂಡಿದ್ದಾರೆ. ಮತಗಟ್ಟೆ ಬಳಿ ಪ್ರಚಾರಕ್ಕೆ ಕಾಂಗ್ರೆಸ್‌ಗೆ ಅವಕಾಶ ನೀಡಿದ್ದಾರೆಂದು ಆರೋಪಿಸಿ ಪೊಲೀಸರ ಜೊತೆ ಬಿಜೆಪಿ ಕಾರ್ಯಕರ್ತರು ವಾಗ್ವಾದ ನಡೆಸಿದ್ದಾರೆ. ಸದ್ಯ ಕಾರ್ಯಕರ್ತರನ್ನು ಪೊಲೀಸರು ಸಮಾಧಾನ ಮಾಡಿದ್ದಾರೆ.

ಇದನ್ನೂ ಓದಿ: ಅಮೆರಿಕದಲ್ಲಿ ಒಮಿಕ್ರಾನ್ ಹೆಚ್ಚಳ; ನ್ಯೂಯಾರ್ಕ್ ಆಸ್ಪತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿದ್ದಾರೆ ಮಕ್ಕಳು

Published On - 11:11 am, Mon, 27 December 21