ರಾಮನಗರ, ಏ.17: ಡಾ.ಮಂಜುನಾಥ್ರನ್ನ(Dr.Manjunath) ಜಯದೇವ ಡೈರೆಕ್ಟರ್ ಪೋಸ್ಟ್ನಿಂದ ತೆಗೆಸಲು ಡಿಕೆ ಶಿವಕುಮಾರ್ ಎಸ್.ಎಂ.ಕೃಷ್ಣಗೆ ಚೀಟಿ ಕೊಟ್ಟಿದ್ದರು ಎಂದು ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ(H.D Deve Gowda) ಅವರ ಗಂಭೀರ ಆರೋಪ ಮಾಡಿದ್ದಾರೆ. ಇಂದು(ಏ.17) ರಾಮನಗರ ಜಿಲ್ಲೆಯ ಕನಕಪುರದಲ್ಲಿ ನಡೆದ ಬಿಜೆಪಿ-ಜೆಡಿಎಸ್ ಮೈತ್ರಿ ಸಭೆಯಲ್ಲಿ ಮಾತನಾಡಿದ ಅವರು, ‘ಇಡೀ ವಿಶ್ವದಲ್ಲಿ 2 ಸಾವಿರ ಬೆಡ್ಗಳನ್ನು ಹೊಂದಿರುವ ಹೃದಯ ಸಂಬಂಧಿ ಆಸ್ಪತ್ರೆ ಇಲ್ಲ. ಆ ಆಸ್ಪತ್ರೆ ಅಭಿವೃದ್ಧಿ ಮಾಡಿದ್ದು ಡಾ.ಮಂಜುನಾಥ್, ಇದನ್ನ ಮನಗಂಡು ಮೋದಿ ಹಾಗೂ ಅಮಿತ್ ಶಾ ಅವರು ಡಾ.ಮಂಜುನಾಥ್ ಸ್ಪರ್ಧೆಗೆ ಒತ್ತಾಯ ಮಾಡಿದರು ಎಂದಿದ್ದಾರೆ.
ಹಿಂದೆ ಬಂಧಿಖಾನೆ ಮಂತ್ರಿ ಡಿಕೆ ಶಿವಕುಮಾರ್, ‘ನನ್ನ ಅಳಿಯನನ್ನ ಡೈರೆಕ್ಟರ್ ಆಗೋದನ್ನ ತಪ್ಪಿಸಿದರು. ನಾನು ನನ್ನ ಮಗಳ ಮನೆಯಲ್ಲಿ ಇದ್ದಾಗ ನನ್ನ ಅಳಿಯ ನಾನು ಅಮೆರಿಕಾಕ್ಕೆ ಹೋಗ್ತಿನಿ ಅಂದರು, ಆಗ ನಾನೇ ಅವರನ್ನು ತಡೆದೆ. ಈ ಸರ್ಕಾರ ಹೆಚ್ಚು ದಿನ ಇರಲ್ಲ, ಯೋಚನೆ ಮಾಡಿ, ನಿಮ್ಮ ಸೇವೆ ಈ ದೇಶದ ಜನತೆಗೆ ಬೇಕು ಅಂದೆ. ನನ್ನ ಅಳಿಯ ಬೆಳಿಗ್ಗೆ ಬಂದು ನಾನು ಇಲ್ಲೇ ಇರ್ತೇನೆ ಎಂದರು. ಇದನ್ನ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಚರ್ಚೆ ಮಾಡಿದರು. 8ವರೆ ಲಕ್ಷ ಜನರಿಗೆ ಡಾ.ಮಂಜುನಾಥ್ ಉಚಿತ ಚಿಕಿತ್ಸೆ ಕೊಟ್ಟಿದ್ದಾರೆ. ಈಗ ಡಾ.ಮಂಜುನಾಥ್ ಅವರ ಸೇವೆಯನ್ನ ಮೋದಿ, ಅಮಿತ್ ಶಾ ಗುರುತಿಸಿದ್ದಾರೆ.
ಇದನ್ನೂ ಓದಿ:ಡಿಕೆ ಸಹೋದರರ ದೌರ್ಜನ್ಯ ಕೊನೆಗಾಣಿಸಲು ಮಂಜುನಾಥ್ ಕಣಕ್ಕಿಳಿಸಿದ್ರು ಮೋದಿ: ಹೆಚ್ಡಿ ದೇವೇಗೌಡ
ಕಾಂಗ್ರೆಸ್ನಲ್ಲಿ ಮಹಾನ್ ನಾಯಕರು ಮೂರು ಜನ ಡಾ.ಮಂಜುನಾಥ್ ಎಂಬುವವರನ್ನ ನಿಲ್ಲಿಸಿದ್ದಾರೆ. ಡಾ.ಮಂಜುನಾಥ್ ಒಬ್ಬ ಪ್ರಾಮಾಣಿಕ ವೈದ್ಯ. ದಯಮಾಡಿ ಡಾ.ಮಂಜುನಾಥ್ ಅವರನ್ನ ಗೆಲ್ಲಿಸಿಕೊಂಡು ಬನ್ನಿ. ಎಲ್ಲರಲ್ಲೂ ಕೈ ಮುಗಿದು ಪ್ರಾರ್ಥನೆ ಮಾಡ್ತೀನಿ ಎಂದು ಮನವಿ ಮಾಡಿದರು. ಇದೇ ವೇಳೆ ಪಕ್ಕದಲ್ಲಿ ಸ್ಟಾಲಿನ್ ಹೇಳ್ತಾರೆ, ‘ಕರ್ನಾಟಕದಲ್ಲಿ ಮೇಕೆದಾಟಿಗೆ ಅನುಮತಿ ಕೊಡಲ್ಲವೆಂದು. ನಿಮ್ಮ ಮಹಾನುಭಾವ ಏನು ಮಾಡ್ತಿದ್ದಾರೆ. ಮಿಸ್ಟರ್ ಡಿ.ಕೆ.ಶಿವಕುಮಾರ್ ಉತ್ತರ ಪ್ರದೇಶ, ಛತ್ತೀಸ್ಘಡ್ಕ್ಕೆ ಹೋಗಿ ಎಷ್ಟುಬೇಕೋ ಅಷ್ಟೋ ಬಾಚಿದ್ದಾರೆ. ಇಲ್ಲಿನ ಕಂಟ್ರಾಕ್ಟರ್ಗಳನ್ನ ತೆಲಂಗಾಣಕ್ಕೆ ಕಳಿಸ್ತಾರೆ. ಅಲ್ಲಿಯೂ ಕಾಂಗ್ರೆಸ್ ಗೆಲ್ಲುತ್ತೆ. ಚನ್ನಪಟ್ಟಣದಲ್ಲಿ 9ಜನ ಕೌನ್ಸಿಲರ್ ಗೆ 50ಲಕ್ಷ, ಗುತ್ತಿಗೆ ಕೆಲಸ ಹಂಚಿದ್ದಾರೆ. ರಾಮನಗರದ ನಮ್ಮ ಪಕ್ಷದ ತಾಲೂಕು ಅಧ್ಯಕ್ಷನನ್ನ ಕೊಂಡುಕೊಳ್ತಾರೆ. ಆದ್ರೆ, ಈ ಕ್ಷೇತ್ರದ 27ಲಕ್ಷ ಮತದಾರರನ್ನ ಕೊಂಡುಕೊಳ್ಳಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ