ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅಜ್ಜಿ ಶತಾಯುಷಿ ನಿಂಗಮ್ಮ ನಿಧನ, ಬೆಳಗಾವಿಯಿಂದ ಕನಕಪುರದತ್ತ ಡಿಕೆಶಿ ಪ್ರಯಾಣ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬೆಳಗಾವಿ ಅಧಿವೇಷನದಲ್ಲಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಈ ನಡುವೆ ದಯಾನಂದಸಾಗರ‌ ಆಸ್ಪತ್ರೆಯಲ್ಲಿ ಡಿಕೆಶಿ ಅಜ್ಜಿ ನಿಂಗಮ್ಮ ಕೊನೆಯುಸಿರೆಳೆದಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅಜ್ಜಿ ಶತಾಯುಷಿ ನಿಂಗಮ್ಮ ನಿಧನ, ಬೆಳಗಾವಿಯಿಂದ ಕನಕಪುರದತ್ತ ಡಿಕೆಶಿ ಪ್ರಯಾಣ
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅಜ್ಜಿ ಶತಾಯುಷಿ ನಿಂಗಮ್ಮ ನಿಧನ, ಬೆಳಗಾವಿಯಿಂದ ಕನಕಪುರದತ್ತ ಡಿಕೆಶಿ ಪ್ರಯಾಣ
Edited By:

Updated on: Dec 17, 2021 | 10:24 AM

ರಾಮನಗರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಶತಾಯುಷಿ  ಅಜ್ಜಿ ನಿಂಗಮ್ಮ(106) ನಿಧನರಾಗಿದ್ದಾರೆ. ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ದಯಾನಂದಸಾಗರ‌ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬೆಳಗಾವಿ ಅಧಿವೇಷನದಲ್ಲಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಈ ನಡುವೆ ದಯಾನಂದಸಾಗರ‌ ಆಸ್ಪತ್ರೆಯಲ್ಲಿ ಡಿಕೆಶಿ ಅಜ್ಜಿ ನಿಂಗಮ್ಮ ಕೊನೆಯುಸಿರೆಳೆದಿದ್ದಾರೆ. ಹೀಗಾಗಿ ಆದಷ್ಟು ಬೇಗ ಬೆಳಗಾವಿಯಿಂದ ಡಿಕೆಶಿ ಕನಕಪುರಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ದೊಡ್ಡಆಲಹಳ್ಳಿಯಲ್ಲಿ ಇಂದು ಸಂಜೆ ನಿಂಗಮ್ಮ ಅಂತ್ಯಕ್ರಿಯೆ ನೆರವೇರಲಿದೆ. ಸದ್ಯ ಅಜ್ಜಿ ಮೃತರಾದ ಹಿನ್ನಲೆಯಲ್ಲಿ ಡಿ.ಕೆ.ಶಿವಕುಮಾರ್ ಬೆಳಗಾವಿಯಿಂದ ಬೆಂಗಳೂರಿಗೆ ವಾಪಸ್ ಆಗುತ್ತಿದ್ದಾರೆ.

ಬೆಳಗಾವಿಯಿಂದ ಕನಕಪುರದತ್ತ ಡಿಕೆಶಿ ಪ್ರಯಾಣ
ಉದ್ಯೋಗ ಬೇಡಿಕೆ, 9ಸಾವಿರ ನಿರುದ್ಯೋಗ ಭತ್ತೆ, ವೃತ್ತಿಪರ ಕೋರ್ಸ್‌ಗಳ ಸಾಲಾ ಮನ್ನಾ, ತಾಂತ್ರಿಕ ಕೋರ್ಸ್‌ಗಳ ಶುಲ್ಕ ಕಡಿಮೆ ಮಾಡುವಂತೆ ಆಗ್ರಹಿಸಿ ಬೆಳಗಾವಿಯ ಯಡಿಯೂರಪ್ಪ ಮಾರ್ಗದಿಂದ ಸುವರ್ಣ ಸೌಧದವರೆಗೂ ಯೂತ್ ಕಾಂಗ್ರೆಸ್ ಘಟಕ ಪ್ರತಿಭಟನೆ ಹಮ್ಮಿಕೊಂಡಿದ್ದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಯೂತ್ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ಸೇರಿದಂತೆ ಕೈ ನಾಯಕರು ಭಾಗಿಯಾಗಲಿದ್ದಾರೆ. ಬೆಳಗಾವಿ ಜಿಲ್ಲೆ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಿಂದ  ಯೂತ್ ಕಾಂಗ್ರೆಸ್ ಕಾರ್ಯಕರ್ತರು ಆಗಮಿಸುತ್ತಿದ್ದಾರೆ. ಆದ್ರೆ ಡಿಕೆ ಶಿವಕುಮಾರ್ ಅಜ್ಜಿ ಶತಾಯುಷಿ ನಿಂಗಮ್ಮ ನಿಧನ ಹಿನ್ನೆಲೆ ಬೆಳಗಾವಿಯಿಂದ ಕನಕಪುರದತ್ತ ಡಿಕೆಶಿ ಪ್ರಯಾಣ ಬೆಳೆಸಿದ್ದಾರೆ.

ಇದನ್ನೂ ಓದಿ: Japan: ಜಪಾನ್​ನ ಒಸಾಕಾದಲ್ಲಿ ಅಗ್ನಿ ದುರಂತ; 27 ಜನರ ದುರ್ಮರಣ

Published On - 10:11 am, Fri, 17 December 21