ಕೌಟುಂಬಿಕ ಕಲಹ, ಮಕ್ಕಳಿಗೆ ವಿಷ ಉಣಿಸಿದ ತಂದೆ: ಜೀವನ್ಮರಣ ಹೋರಾಟ ನಡೆಸುತ್ತಿರುವ ಪುಟ್ಟ ಕಂದಮ್ಮಗಳು

ಕೌಟುಂಬಿಕ ಕಲಹದಿಂದ ಬೇಸತ್ತು ವ್ಯಕ್ತಿಯೋರ್ವ ತನ್ನೆರಡೂ ಪುಟ್ಟ ಕಂದಮ್ಮಗಳಿಗೆ ಉಷ ಉಣಿಸಿರುವ ಘಟನೆ ರಾಮನಗರದ ಜಿಲ್ಲೆಯಲ್ಲಿ ನಡೆದಿದೆ. ತಂದೆ ಕೊಟ್ಟ ವಿಷಭರಿತ ಜಾಮೂನು ಸೇವಿಸಿದ ಪುಟ್ಟ ಜೀವಗಳು ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದು, ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸೋಣ.

ಕೌಟುಂಬಿಕ ಕಲಹ, ಮಕ್ಕಳಿಗೆ ವಿಷ ಉಣಿಸಿದ ತಂದೆ: ಜೀವನ್ಮರಣ ಹೋರಾಟ ನಡೆಸುತ್ತಿರುವ ಪುಟ್ಟ ಕಂದಮ್ಮಗಳು
ಸಾಂದರ್ಭಿಕ ಚಿತ್ರ
Edited By:

Updated on: Aug 11, 2023 | 2:13 PM

ರಾಮನಗರ, (ಆಗಸ್ಟ್ 11): ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಮನನೊಂದು ತಾಯಿಯೊಬ್ಬಳು(Mother)  ಹೆತ್ತ ಮಕ್ಕಳನ್ನೇ ಬಾವಿಗೆ ನೂಕಿ ಬಳಿಕ ತಾನೂ ಬಾವಿಗೆ ಹಾರಿ ಸಾವನ್ನಪ್ಪಿರುವ ದುರ್ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ಇದರ ಬೆನ್ನಲ್ಲೇ ಇದೀಗ ರಾಮನಗರದಲ್ಲಿ(Ramanagara) ವ್ಯಕ್ತಿಯೋರ್ವ ತನ್ನ ಹೆಂಡತಿ(Wife) ಮೇಲಿನ ಸಿಟ್ಟಿಗೆ ಮಕ್ಕಳಿಗೆ ವಿಷ(poison) ಉಣಿಸಿರುವ ಘಟನೆ ನಡೆದಿದೆ. ನಾಗಿರೋ‌ಕುಮಾರ್ (35) ಎನ್ನುವಾತ ಜಾಮೂನಿನಲ್ಲಿ‌ ವಿಷಬೆರಸಿ ಮಕ್ಕಳಿಗೆ ತಿನ್ನಿಸಿದ್ದಾನೆ. ಬಳಿಕ ತಾನೂ ಸಹ ವಿಷ ಕುಡಿದಿದ್ದಾನೆ. ಏನು ತಿಳಿದು ವಂದನಾ (4) ತನುಶ್ರೀ (3) ಎನ್ನುವ ಪುಟ್ಟ ಜೀವಗಳು ತಂದೆ ಉಣಿಸಿದ ವಿಷ ಸೇವಿಸಿ ಅಸ್ವಸ್ಥಗೊಂಡಿವೆ. ಇದೀಗ ಕಂದಮ್ಮಗಳನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದಬಂದಿದೆ.

ಇದನ್ನೂ ಓದಿ: ರಾಯಚೂರು: ಇಬ್ಬರು ಮಕ್ಕಳ ಜೊತೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಕೆಲ ದಿನಗಳಿಂದ ಪತ್ನಿ ಬಿಟ್ಟು ಹೋಗಿದ್ದಳು. ಹೀಗಾಗಿ ತಾಯಿ ಇಲ್ಲದೆ ಮಕ್ಕಳು ತಂದೆಯ ಬಳಿ ಇದ್ದವು. ಇದರಿಂದ ಮನನೊಂದ ಕುಮಾರ್, ಜಾಮೂನ್‌‌ನಲ್ಲಿ ಮಕ್ಕಳಿಗೆ ವಿಷ ಕುಡಿಸಿ ತಾನೂ ಸೇವಿಸಿದ್ದಾನೆ. ಈ ಬಗ್ಗೆ ಚನ್ನಪಟ್ಟಣ ತಾಲೂಕಿನ ಎಂ.ಕೆ. ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿರುವ ಕಂದಮ್ಮಗಳು ಬೇಗ ಗುಣಮುಖರಾಗಲಿದೆ ಎಂದು ಪ್ರಾರ್ಥಿಸೋಣ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ