ರಾಮನಗರ ನ.10: ಬಿಡದಿ ಭಾಗಕ್ಕೆ ಮೆಟ್ರೋ (Metro) ತರಲು ಪ್ರಯತ್ನ ಮಾಡುತ್ತೇನೆ. ಬಿಡದಿ ಭಾಗದಲ್ಲಿ ಲಕ್ಷಾಂತರ ಜನರು ಕೆಲಸ ಮಾಡುತ್ತಿದ್ದಾರೆ. ಹೊಸೂರುವರೆಗೂ ಮೆಟ್ರೋ ವಿಸ್ತರಣೆಗೆ ಪ್ರಯತ್ನ ಮಾಡುತ್ತಿದ್ದೇವೆ. ಅದೇ ರೀತಿ ಬಿಡದಿವರೆಗೂ ಮೆಟ್ರೋ ವಿಸ್ತರಿಸಲು ಯೋಚಿಸಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಹೇಳಿದರು.
ಬಿಡದಿಯಲ್ಲಿ ನಡೆದ ಟೊಯೋಟಾ ತರಬೇತಿ ಕೇಂದ್ರ ವಿಸ್ತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನಾನು ಬರೀ ಉದ್ಘಾಟನೆ ಮಾಡಲಿಕ್ಕೆ ಬಂದಿಲ್ಲ. ಬಿಡದಿಗೆ ಗಿಫ್ಟ್ ಕೊಡುವ ಆಸೆಯಿಂದ ಈ ಭಾಗಕ್ಕೂ ಮೆಟ್ರೋ ತರಲು ಪ್ರಯತ್ನ ಮಾಡುತ್ತೇನೆ. ಬಾಲಕೃಷ್ಣ ಹಾಗೂ ಸುರೇಶ್ರವರು ಬೆನ್ನು ಬಿದ್ದಿದ್ದಾರೆ. ಲಕ್ಷಾಂತರ ಮಂದಿ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಹೊಸೂರುವರೆಗೂ ನಾವು ಪ್ರಯತ್ನ ಮಾಡುತ್ತಿದ್ದೇವೆ. ಅದೇ ತರ ಬಿಡದಿವರೆಗೂ ಮೆಟ್ರೋ ತರಲು ಯೋಚಿಸಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ: ನಮ್ಮ ಮೆಟ್ರೋ ಮಾರ್ಗ ವಿಸ್ತರಣೆಯಿಂದ ಬಿಎಂಟಿಸಿ ಕಲೆಕ್ಷನ್ಗೆ ಹೊಡೆತ
ಬಿಡದಿ ಪ್ಲ್ಯಾನಿಂಗ್ ಅಥಾರಿಟಿ ತೆಗೆದು, ಗ್ರೇಟರ್ ಬೆಂಗಳೂರು ಅಥಾರಿಟಿ ಅಂತ ಹೊಸ ರೂಪ ಕೊಡುತ್ತಿದ್ದೇವೆ. ಇದಕ್ಕೆ ಸಂಬಂಧಿಸಿದ ಲೀಗಲ್ ಪ್ರೊಸಿಜರ್ ಎಲ್ಲವೂ ಆಗುತ್ತೆ. ಬೆಂಗಳೂರಿಗೆ ಶಕ್ತಿ ತುಂಬವ ನಿಟ್ಟಿನಿಂದ ಈ ಕೆಲಸಕ್ಕೆ ಮುಂದಾಗಿದ್ದೇವೆ. ಬಿಡದಿ ಪ್ಲಾನಿಂಗ್ ಅಥಾರಿಟಿ ಇನ್ಮುಂದೆ ಇರುವುದಿಲ್ಲ. ವಿದ್ಯಾಸಂಸ್ಥೆ, ಆಸ್ಪತ್ರೆ, ಫ್ಯಾಕ್ಟರಿ ಕಾರ್ಮಿಕರಿಗೆ ಹೊಸ ಶಕ್ತಿ ತುಂಬಲು ಸರ್ಕಾರ ತೀರ್ಮಾನ ಮಾಡಿದೆ. ರೈತರಿಗೆ ಕೆಲಸ ಆಗಬೇಕು, ಅವರ ಭೂಮಿಗೆ ಬೆಲೆ ಸಿಗಬೇಕು, ಅದಕ್ಕೆ ಎರಡು ದೊಡ್ಡ ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದರು. ನಾವು ಫ್ರೀ ಬಸ್ ಮಾಡಿದ್ದೇವೆ. ಹೆಣ್ಣು ಕುಟುಂಬಂದ ಕಣ್ಣು, ಅವರಿಗೆ ಶಕ್ತಿ ಕೊಡಲು ಮುಂದಾಗಿದ್ದೇವೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ